December 26, 2024

Newsnap Kannada

The World at your finger tips!

yediyurappa

ರಾಜ್ಯ ಬಜೆಟ್ ಮಂಡನೆ : ಯಡಿಯೂರಪ್ಪ ಮಂಡಿಸಿದ ಆಯವ್ಯಯದ ಹೈಲೈಟ್ಸ್

Spread the love

ಏರುತ್ತಲೇ ಇರುವ ಪೆಟ್ರೋಲ್ ಬೆಲೆ, ಉದ್ಯೋಗ ಕಡಿತ, ಕರೋನಾ ಸಂಕಷ್ಟದ ನಡುವೆ ಸಿಎಂ ಬಿಎಸ್ ಯಡಿಯೂರಪ್ಪ ರಾಜ್ಯ ಬಜೆಟ್ ಮಂಡಿಸಿದ್ದಾರೆ.

ಬಿಜೆಪಿ ನೇತೃತ್ವದ ಸರ್ಕಾರದಲ್ಲಿ ಸ್ವತಃ ಹಣಕಾಸು ಸಚಿವರು ಆಗಿರುವ ಸಿಎಂ ಮಂಡಿಸಿರುವ ಬಜೆಟ್ ನ ಹೈಲೈಟ್ಸ್

  • ಉದ್ಯೋಗ ಸೃಷ್ಟಿಗಾಗಿ ಹಾಗೂ ಮಹಿಳೆಯರು ಮಕ್ಕಳ ಬಲವರ್ಧನೆಗಾಗಿ ಬೆಂಗಳೂರಿನ ಸುತ್ತಮುತ್ತ ಇರುವ ಅಂಗನವಾಡಿಗಳನ್ನು ಶಿಶುಪಾಲನಾ ಕೇಂದ್ರವಾಗಿ ಉನ್ನತೀಕರಿಸುವುದು.
  • ಕಟ್ಟಡ ಕಾರ್ಮಿಕರ ಆರೋಗ್ಯ ತಪಾಸಣೆಗೆ ರಾಜ್ಯದ ಆಯ್ದ ಜಿಲ್ಲೆಗಳಲ್ಲಿ 25 ಸಂಚಾರಿ ಆರೋಗ್ಯ ತಪಾಸಣಾ ಕೇಂದ್ರ
  • ಆಡಳಿತ ವ್ಯವಸ್ಥೆಯಲ್ಲಿ ದಕ್ಷತೆ ಹೆಚ್ಚಿಸಲು ಸುಧಾರಣಾ ಆಯೋಗ
    ಮನೆಬಾಗಿಲಿಗೆ ಮಾಸಾಶನ ಅಭಿಯಾನ ಆರಂಭ
  • 58 ಆಣೆಕಟ್ಟುಗಳ ಪುನಶ್ಚೇತನ ಹಾಗೂ ಅಭಿವೃದ್ಧಿಗಾಗಿ ಅನುದಾನ
    ಉತ್ತರ ಕನ್ನಡ ಜಿಲ್ಲೆ ಹಾಗೂ ಕರಾವಳಿಯಲ್ಲಿ ಖಾರ್ ಲ್ಯಾಂಡ್ ಅಭಿವೃದ್ಧಿ ಯೋಜನೆ
  • ಸಣ್ಣ ಉದ್ಯಮ ನಡೆಸುವ ಮಹಿಳೆಯರಿಗೆ ಸುರಕ್ಷತೆ, ಬ್ರ್ಯಾಡಿಂಗ್ ಸೇರಿದಂತೆ ಅಗತ್ಯ ತಾಂತ್ರಿಕ ನೆರವು
    ಪೆಟ್ರೋಲ್-ಡಿಸೇಲ್ ಮೇಲಿನ ಕೆಎಸ್ಟಿ ಯಥಾಸ್ಥಿತಿ ಮುಂದುವರಿಕೆ.
  • ಬೆಂಗಳೂರಿನ ಹೆಸರಘಟ್ಟದಲ್ಲಿ ಥೀಮ್ಸ್ ಪಾರ್ಕ್ ನಿರ್ಮಾಣ
  • ತುಮಕೂರಿನ ಸಿದ್ಧಗಂಗಾಶ್ರೀಗಳ ಪ್ರತಿಮೆ ನಿರ್ಮಾಣ ಹಾಗೂ ವಸ್ತುಪ್ರದರ್ಶನಾಲಯಕ್ಕೆ 2 ಕೋಟಿ ನೆರವು
  • ಕೊಪ್ಪಳದಲ್ಲಿ ಸಂವರ್ಧನಾ ಕೇಂದ್ರ ನಿರ್ಮಾಣ.
  • ನೂತನ ಜಿಲ್ಲೆ ವಿಜಯನಗರಕ್ಕೆ ಮೂಲಭೂತ ಸೌಲಭ್ಯ ಒದಗಿಸಲು ವಿಶೇಷ ಆದ್ಯತೆ
  • ರಾಜ್ಯದ ಆಸ್ಪತ್ರೆಗಳಲ್ಲಿ ಜ್ಯೋತಿ ಸಂಜೀವಿನಿ ಯೋಜನೆಯಡಿ ಅಗತ್ಯ ತುರ್ತು ಉಚಿತ ಶಸ್ತ್ರಚಿಕಿತ್ಸೆಗೆ ಅವಕಾಶ.
  • ರಾಜ್ಯದ ಹಲವು ಜಿಲ್ಲೆಗಳಿಗೆ ವಿಶೇಷ ಯೋಜನೆಗಳ ಜೊತೆ 2021-22 ನೇ ಸಾಲಿನ ರಾಜ್ಯ ಆಯವ್ಯಯ ಮಂಡನೆಯಾಗಿದೆ.
  • ಬೆಂಗಳೂರು ಹಾಗೂ ಬೆಂಗಳೂರಿನಲ್ಲಿ ಮಹಿಳೆಯರ ಸುರಕ್ಷತೆಗೆ ಸಾಕಷ್ಟು ಯೋಜನೆಗಳನ್ನು ಸರ್ಕಾರ ಘೋಷಿಸಿದೆ.
  • ಹೊಸ ಯೋಜನೆಗಳ ಘೋಷಣೆಗಿಂತ ಯಾವುದೇ ಹೊಸ ತೆರಿಗೆ ವಿಧಿಸದೇ ಜನರನ್ನು ಸಿಎಂ ಬಿಎಸ್ವೈ ಹೆಚ್ಚಿನ ಹೊರೆಯಿಂದ ಕಾಪಾಡಿದ್ದಾರೆ
Copyright © All rights reserved Newsnap | Newsever by AF themes.
error: Content is protected !!