ನ್ಯೂಸ್ ಸ್ನ್ಯಾಪ್
ಬೆಂಗಳೂರು
‘ನಾನು ಶ್ರೀಲಂಕಾದಲ್ಲಿನ ಕ್ಯಾಸಿನೋಗೆ ಹೋಗಿದ್ದೆ. ಕಾನೂನುಬದ್ಧವಾಗಿ ನಡೆಯವ ಕ್ಯಾಸಿನೋಗೆ ಹೋಗುವುದು ತಪ್ಪಾ?’ ಎಂದು ಮೊದಲ ಬಾರಿಗೆ ಶಾಸಕ ಜಮೀರ್ ಅಹ್ಮದ್ ಅಧಿಕೃತವಾಗಿ ಒಪ್ಪಿಕೊಂಡಿದ್ದಾರೆ.
ಬೆಂಗಳೂರಿನಲ್ಲಿ ಶನಿವಾರ ವೈದ್ಯಕೀಯ ತಪಾಸಣೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಜಮೀರ್ ‘ನಾನು ಪ್ರತಿ ಒಂದೂವರೆ ವರ್ಷಕ್ಕೊಮ್ಮೆ ಅಲ್ಲಿಗೆ ಹೋಗಿ ಬರುತ್ತಿದ್ದೆ. ಕಾನೂನುಬದ್ಧವಾಗಿ ನಡೆಯುವ ಕ್ಯಾಸಿನೋಗೂ ಹೋಗುವುದು ತಪ್ಪಾ? ಆದರೆ ಪ್ರಶಾಂತ್ ಸಂಬರಗಿ ಹೇಳಿದಂತೆ ನಟಿ ಸಂಜನಾ ಜೊತೆ ನಾನು ಹೋಗಿಲ್ಲ. ನಾನು ಕುಮಾರಸ್ವಾಮಿ, ಇತರೆ ಇಪ್ಪತ್ತೆಂಟು ಜನ ಜೆಡಿಎಸ್ ನ ಶಾಸಕರೊಟ್ಟಿಗೆ ಹೋಗಿದ್ದೇನೆ. ಅಲ್ಲದೇ ಕಾಂಗ್ರೆಸ್ ನಿಂದ ಬಿಜೆಪಿಗೆ ಹೋಗಿ ಮಂತ್ರಿಯಾದವರೂ ಸಹ ನನ್ನೊಂದಿಗೆ ಬಂದಿದ್ದರು. ಮೊದಲೇ ಹೇಳಿದ ಹಾಗೆ ನಾನು ಸಂಜನಾ ಜೊತೆ ಹೋಗಿದ್ದೆನೆಂದು ಸಾಬೀತು ಮಾಡಿದಲ್ಲಿ ನನ್ನ ಇಡೀ ಆಸ್ತಿಯನ್ನು ಸರ್ಕಾರಕ್ಕೆ ಬರೆದುಕೊಡುತ್ತೇನೆ’ ಎಂದು ಹೇಳಿದರು.
ನಿನ್ನೆ ಶ್ರೀಲಂಕಾದಲ್ಲಿನ ಕ್ಯಾಸಿನೋ ಮಾಲೀಕತ್ವದಲ್ಲಿ ತಮ್ಮ ಪಾಲುದಾರಿಕೆಯೂ ಇದೆ ಎಂದು ನಿನ್ನೆ ಜಮೀರ್ ಒಪ್ಪಿಕೊಂಡಿದ್ದರು.
More Stories
ಮುದ್ದುಲಕ್ಷ್ಮಿ ಸೀರಿಯಲ್ ನಟ ಚರಿತ್ ಬಾಳಪ್ಪ ಲೈಂಗಿಕ ದೌರ್ಜನ್ಯ ಆರೋಪದಡಿ ಬಂಧನ
ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಮಳೆಯ ಮುನ್ಸೂಚನೆ: ಬೆಂಗಳೂರು ಸೇರಿ 21 ಜಿಲ್ಲೆಗಳಲ್ಲಿ ಮಳೆ ಸಾಧ್ಯತೆ
ಹಾಲಿನ ದರ ಏರಿಕೆ? ಶೀಘ್ರದಲ್ಲೇ ಕೆಎಂಎಫ್ ನಿರ್ಣಯ