ಚೆನ್ನೈ ಯುವಕನೊಬ್ಬ ಮೈಕ್ರೋಸಾಫ್ಟ್ ಆನ್‌ಲೈನ್ ಸೇವೆಗಳಲ್ಲಿದ್ದ ನ್ಯೂನತೆ ಸರಿಪಡಿಸಿ 50 ಸಾವಿರ ಡಾಲರ್ (ಸುಮಾರು 36 ಲಕ್ಷ ರೂ.) ಬಹುಮಾನ ಗೆದ್ದಿದ್ದಾರೆ.
ಮೈಕ್ರೋಸಾಫ್ಟ್ ಕಂಪನಿಯ ಆನ್‌ಲೈನ್ ಸೇವೆಗಳಲ್ಲಿದ್ದ ನ್ಯೂನತೆಯನ್ನು ಕಂಡು ಹಿಡಿದಿದ್ದಕ್ಕೆ ಚೆನ್ನೈ ಮೂಲದ ಭದ್ರತಾ ಸಂಶೋಧಕ ಲಕ್ಷ್ಮಣ್ ಮುಥಿಯಾ ಬರೋಬ್ಬರಿ 50 ಸಾವಿರ ಡಾಲರ್ ಬಹುಮಾನ ನೀಡಲಾಗಿದೆ.
ದೊಡ್ಡ ಲೂಪ್ ಹೋಲನ್ನು ಮುಥಿಯಾ ಕಂಡುಹಿಡಿದಿದ್ದಾರೆ, ಬಿಲ್ ಗೇಟ್ಸ್ ಒಡೆತನದ ಟೆಕ್ ದೈತ್ಯ ಕಂಪನಿಯ ಮೆಚ್ಚುಗೆಗೆ ಪಾತ್ರವಾಗಿದ್ದಾರೆ.
ಮೈಕ್ರೋಸಾಫ್ಟ್ ಖಾತೆಯನ್ನು ಯಾವುದೇ ರೀತಿಯ ಅನುಮತಿಯಿಲ್ಲದೆ ಹ್ಯಾಕ್ ಮಾಡಬಹುದಾದಂತಹ ದುರ್ಬಲ ನ್ಯೂನತೆ ಕಂಡು ಬಂದಿತ್ತು.
ಪಾಸ್‌ವರ್ಡ್ ರಿಸೆಟ್, ರಿಕವರಿ ಕೋಡ್‌ಗೆ ವಿನಂತಿಸುವ ಅಥವಾ ತ್ವರಿತವಾಗಿ ರಿಕವರಿ ಕೋಡ್‌ಗಳನ್ನು ಪಡೆಯಲು ಪ್ರಯತ್ನಿಸುವುದರೊಂದಿಗೆ ಮತ್ತೊಬ್ಬರ ಮೈಕ್ರೋಸಾಫ್ಟ್ ಖಾತೆಯನ್ನು ಸ್ವಾಧೀನಪಡಿಸಿಕೊಳ್ಳಲು ಅವಕಾಶವಿರುವುದನ್ನು ಮುಥಿಯಾ ಕಂಡುಹಿಡಿದಿದ್ದರು. ಈ ನ್ಯೂನತೆ ಬಗ್ಗೆ ಕಂಪನಿಗೆ ತಿಳಿಸಿದ್ದರು. ಅವರ ವರದಿಯನ್ನು ಮೈಕ್ರೋಸಾಫ್ಟ್ ಭದ್ರತಾ ತಂಡವು ಪರಿಶೀಲಿಸಿತ್ತು.
- ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ ನಟ ದರ್ಶನ್
- ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
- ಅತ್ತೆ-ಸೊಸೆ ಜಗಳ: ತಾಯಿ-ಮಗ ಆತ್ಮಹತ್ಯೆ ಗೆ ಶರಣು
- ಸರ್ಕಾರಿ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಕೌಶಲ್ಯಾಭಿವೃದ್ಧಿ ಕೋರ್ಸ್ ಆರಂಭ
- BPL ಕುಟುಂಬಗಳಿಗೆ ಉಚಿತ ಅಸ್ಥಿಮಜ್ಜೆ ಕಸಿ ಚಿಕಿತ್ಸೆ


More Stories
ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
Karnataka Budget 2025-26 : ಶಕ್ತಿ ಯೋಜನೆಗೆ 5,300 ಕೋಟಿ ಅನುದಾನ
ಪೊಲೀಸ್ ಅಧಿಕಾರಿಯ ಕಿರುಕುಳಕ್ಕೆ ಮನನೊಂದು ವ್ಯಕ್ತಿ ಆತ್ಮಹತ್ಯೆ ಆರೋಪ