February 22, 2026

Newsnap Kannada

The World at your finger tips!

ananth d

ದಿನೇಶ್ ಕಲ್ಲಹಳ್ಳಿಗೆ ಬಿಜೆಪಿ ದೊಡ್ಡ ನಾಯಕರ ನಂಟಿದೆ ಎನ್ನುವುದಕ್ಕೆ ಪೋಟೊ ಸಾಕ್ಷಿ

Spread the love

ಮಾಜಿ ಸಚಿವ ರಮೇಶ್ ಜಾರಕಿಹೊಳಿ ರಾಸಲೀಲೆ ಸಿಡಿ ಬಯಲು ಮಾಡಿ ರಾಜ್ಯ ರಾಜಕಾರಣದಲ್ಲಿ ಸಂಚಲನ ಮೂಡಿಸಿರುವ ದಿನೇಶ್ ಕಲ್ಲಹಳ್ಳಿ ಗೆ ಬಿಜೆಪಿ ನಾಯಕರ ನಂಟಿದೆ ಎನ್ನುವುದು ಬೆಳಕಿಗೆ ಬಂದಿದೆ.

ಕೇಂದ್ರದ ಮಾಜಿ ಮಂತ್ರಿ ದಿ. ಅನಂತ ಕುಮಾರ್ ಅವರ ಜೊತೆಯಲ್ಲಿ ಸಾಮಾಜಿಕ ಕಾರ್ಯಕರ್ತ ದಿನೇಶ್ ಕಲ್ಲಹಳ್ಳಿ ಇರುವ ಪೋಟೊ ಒಂದು ವೈರಲ್ ಆಗಿದೆ.

ಈ ಪೋಟೊದಲ್ಲಿ ದಿನೇಶ್ ಕಲ್ಲಹಳ್ಳಿ ಬಿಜೆಪಿ ಕೆಲವು ನಾಯಕರೊಂದಿಗೆ ನಿಕಟ ಸಖ್ಯಹೊಂದಿದ್ದಾರೆ ಎನ್ನುವುದಕ್ಕೆ ಪ್ರಬಲ ಸಾಕ್ಷಿ ಸಿಕ್ಕಂತಾಗಿದೆ.

ರಮೇಶ್ ಜಾರಕಿಹೊಳಿ ರಾಸಲೀಲೆ ಸಿಡಿ ಪ್ರಕರಣ ಷಡ್ಯಂತ್ರ‌ವಿದೆ ಎಂಬ ವಾದಕ್ಕೆ ಬೆಂಬಲ ಸಿಕ್ಕಂತಾಗಿದೆ. ಸಮಗ್ರ ತನಿಖೆ ಮಾಡಿ ಈ ಕುತಂತ್ರದ ಹಿಂದಿರುವ ಪ್ರಭಾವಿಗಳನ್ನು ಪತ್ತೆ ಮಾಡಬೇಕಿದೆ.

error: Content is protected !!