February 22, 2026

Newsnap Kannada

The World at your finger tips!

Taj Mahal Agra India

ತಾಜ್ ಮಹಲ್ ಗೆ ಬಾಂಬ್ ಬೆದರಕೆ: ಪ್ರವಾಸಿಗರಿಗೆ ಪ್ರವೇಶ ನಿರ್ಬಂಧ

Spread the love

ತಾಜ್ ಮಹಲ್ ನಲ್ಲಿ ಬಾಂಬ್ ಇರುವುದಾಗಿ ಅನಾಮಧೇಯ ಕರೆಯಿಂದಾಗಿ ಆತಂಕದ ವಾತಾವರಣ ನಿರ್ಮಾಣವಾಗಿದೆ.

ಈ ಹಿನ್ನೆಲೆಯಲ್ಲಿ ತಾಜ್ ಮಹಲ್ ಗೆ ಪ್ರವಾಸಿಗರಿಗೆ ನಿರ್ಬಂಧ ಹೇರಲಾಗಿದೆ.

ಪ್ರೇಮಸೌಧ ಆಗ್ರಾದ ತಾಜ್ ಮಹಲ್ ನಲ್ಲಿ ಬಾಂಬ್ ಇರಿಸಲಾಗಿದೆ ಎಂದು ಭದ್ರತಾ ಸಿಬ್ಬಂದಿಗೆ ಅನಾಮಧೇಯ ವ್ಯಕ್ತಿ ಕರೆ ಮಾಡಿದ್ದಾರೆ. ತಕ್ಷಣ ಪೋಲೀಸ್ ಅಧಿಕಾರಿಗಳು ಶೋಧ ನಡೆಸಿದ್ದಾರೆ.

ಪ್ರವಾಸಿಗರನ್ನು ಹಾಗೂ ತಾಜ್ ಮಹಲ್ ನಲ್ಲಿರುವ ಭದ್ರತಾ ಸಿಬ್ಬಂದಿಗಳನ್ನು ಹೊರಗೆ ಕಳುಹಿಸಿ, ತಾಜ್ ಮಹಲ್ ನ ಎಲ್ಲಾ ದ್ವಾರಗಳನ್ನು ಬಂದ್ ಮಾಡಿ ಪರಿಶೀಲನೆ ನಡೆಸಿದ್ದಾರೆ.

ಪರಿಶೀಲನೆ ಮಾಡಿದ ಮೇಲೆ ಹುಸಿ ಬಾಂಬ್ ಎಂದು ಖಚಿತವಾದ ನಂತರ 1 ಗಂಟೆ ವೇಳೆಗೆ ಪ್ರವಾಸಿಗರಿಗೆ ಪ್ರವೇಶ ಕಲ್ಪಿಸಲಾಯಿತು.

error: Content is protected !!