December 23, 2024

Newsnap Kannada

The World at your finger tips!

banki

ಲಾರಿಗೆ ಮಿನಿ ಬಸ್ ಡಿಕ್ಕಿ – ಬೆಂಕಿ ಅನಾಹುತಕ್ಕೆ ಇಬ್ಬರು ಸಜೀವ ದಹನ

Spread the love

ಲಾರಿಗೆ ಡಿಕ್ಕಿ ಹೊಡೆದ ಮಿನಿ ಲಕ್ಷುರಿ ಬಸ್ ಪಲ್ಟಿಯಾದ ಪರಿಣಾಮ ಇಬ್ಬರು ಸಜೀವ ದಹನವಾದ ಘಟನೆ ಬಾಗಲಕೋಟೆಯ ಉತ್ತೂರು ಬಳಿ ಮುಧೋಳ-ಯಾದವಾಡ ರಸ್ತೆಯಲ್ಲಿ ನಡೆದಿದೆ.

ಲಾರಿ, ಮಿನಿ ಬಸ್ ಡಿಕ್ಕಿ ಹೊಡೆದ ರಬಸಕ್ಕೆ ಬಸ್ ರಸ್ತೆ ಕೆಳಗಿನ ಹೊಲಕ್ಕೆ ತಿರುಗಿದೆ.

ಈ ವೇಳೆ ಹೊಲದಲ್ಲಿ ಟಿಸಿ ಇದ್ದ ವಿದ್ಯುತ್ ಕಂಬಕ್ಕೆ ಬಸ್ ಗುದ್ದಿದೆ ಎನ್ನಲಾಗ್ತಿದೆ. ಪರಿಣಾಮ ಬಸ್ ಧಗಧಗನೇ ಹೊತ್ತಿ ಉರಿದಿದ್ದು, ಇಬ್ಬರು ಸಜೀವ ದಹನವಾಗಿದ್ದಾರೆ.

ಬಸ್ಸಿನಲ್ಲಿದ್ದ ಅನೇಕರು ಹೊರ ಬಂದಿದ್ದರಿಂದ ಹಲವು ಪ್ರಯಾಣಿಕರ ಪ್ರಾಣ ಉಳಿದಿದೆ. ಈ ಮೂಲಕ ಸ್ವಲ್ಪದರಲ್ಲೇ ಭಾರೀ ದುರಂತ ತಪ್ಪಿದೆ.

ಘಟನೆ ನಡೆಯುತ್ತಿದ್ದಂತೆಯೇ ಮಾಹಿತಿ ಅರಿತ ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿದ್ದಾರೆ. ಮುಧೋಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

Copyright © All rights reserved Newsnap | Newsever by AF themes.
error: Content is protected !!