December 23, 2024

Newsnap Kannada

The World at your finger tips!

bike

ಬೈಕ್ ನ್ನು ಪೆಟ್ರೋಲ್ ಇಂಜಿನ್ ನಿಂದ ಬ್ಯಾಟರಿಗೆ ಬದಲಾಯಿಸುವುದು ಹೇಗೆ ?

Spread the love

ದಿನೇದಿನೇ ಪೆಟ್ರೋಲ್ ಬೆಲೆ ಹೆಚ್ಚುತ್ತಿದೆ. ಡೀಸೆಲ್ ದರವೂ ಪೈಪೋಟಿ ನೀಡುತ್ತಿದೆ. ದೇಶದ ಹಲವು ರಾಜ್ಯಗಳಲ್ಲಿ ಪೆಟ್ರೋಲ್ ಬೆಲೆ ಶತಕ ಬಾರಿಸಿದೆ. ಕೆಲವೆಡೆ ಇನ್ನೇನು ಶತಕ ದಾಟುವ ಅಂಚಿನಲ್ಲಿದೆ.

ಕರ್ನಾಟಕದಲ್ಲಿ ಕೂಡ ಇಂಧನ ದರ ಕಡಿಮೆ ಏನಿಲ್ಲ. ಬೆಲೆ ಏರಿಕೆ ಏಟಿನಿಂದ ತಪ್ಪಿಸಿಕೊಳ್ಳಲು ಜನಸಾಮಾನ್ಯ ವಿವಿಧ ಉಪಾಯಗಳ ಮೊರೆ ಹೋಗಿದ್ದಾನೆ. ಬೈಕ್​ನ ಪೆಟ್ರೋಲ್ ಇಂಜಿನ್ ಬದಲಾಗಿ ಬ್ಯಾಟರಿ ಅಳವಡಿಸಿಕೊಂಡಿರುವುದು ಸಾಮಾನ್ಯವಾಗಿದೆ.

ತಮ್ಮ ಪೆಟ್ರೋಲ್ ಇಂಜಿನ್​ನ್ನು ತೆಗೆದಿಡುವ ತಂತ್ರಕ್ಕೆ ಮೊರೆ ಹೋಗುವ ಯೋಚನೆ ಮಾಡಿದ್ದಾರೆ. ಬದಲಾಗಿ ಬ್ಯಾಟರಿಗಳನ್ನು ಅಳವಡಿಸಿಕೊಳ್ಳುತ್ತಿ ದ್ದಾರೆ. ಅಂದರೆ, ಈಗ ವಾಹನ ಹೊಂದಿರುವವರು ಪೆಟ್ರೋಲ್ ಹಾಕಿಸಿಕೊಳ್ಳುವ ಬದಲು ಬ್ಯಾಟರಿ ಚಾರ್ಜ್ ಮಾಡಿಕೊಳ್ಳುತ್ತಿದ್ದಾರೆ.
ಖರ್ಚಿನ ಪ್ರಮಾಣ ಕಡಿಮೆ ಮಾಡುವ ಉಪಾಯ ಇದಾಗಿದೆ. ಇದರಿಂದ ಜನರಿಗೆ ಲಾಭವಾಗುತ್ತಿದೆಯೇ? ಇಂಜಿನ್ ಬದಲಾಯಿಸಲು ಎಷ್ಟು ಖರ್ಚಾಗುತ್ತದೆ? ಇತ್ಯಾದಿ ಮಾಹಿತಿ ಇಲ್ಲಿದೆ.

ಬ್ಯಾಟರಿ ಬದಲಾಯಿಸಲು ಖರ್ಚು ಎಷ್ಟು? :

ಪೆಟ್ರೋಲ್ ಇಂಜಿನ್ ಬದಲಿಸಿರುವ ಫೊಟೊಗಳನ್ನು ಹಲವರು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ಜೊತೆಗೆ, ಪೆಟ್ರೋಲ್ ಇಂಜಿನ್ ಬೈಕ್​ನ್ನು ಬ್ಯಾಟರಿ ಬೈಕ್​ಗೆ ಬದಲಿಸಿಕೊಳ್ಳುತ್ತಿ ರುವುದನ್ನು ಹೇಳುತ್ತಿದ್ದಾರೆ.

ಹೀಗೆ ಮಾಡಲು ಸುಮಾರು 10 ಸಾವಿರ ರು ಖರ್ಚಾಗುತ್ತಿದೆ ಎಂದು ಹೇಳಲಾಗು ತ್ತಿದೆ. ಬ್ಯಾಟರಿಗೆ ಅನುಗುಣವಾಗಿ ಖರ್ಚಿನ ಪ್ರಮಾಣ ಹೆಚ್ಚು ಕಡಿಮೆ ಆಗಬಹುದು ಎಂದೂ ಹೇಳುತ್ತಾರೆ.

ಬ್ಯಾಟರಿ ಹಾಕಿಸಿಕೊಂಡ ಬೈಕ್​ಗಳು ಪೆಟ್ರೋಲ್ ಬೈಕ್​ನಷ್ಟೇ ವೇಗವಾಗಿ ಓಡಿಸಬಹುದೇ ಎಂಬ ಪ್ರಶ್ನೆಯೂ ಬೈಕ್ ಸವಾರರನ್ನು ಕಾಡುತ್ತದೆ.

  • ಮೆಕ್ಯಾನಿಕ್​ಗಳು ಪ್ರಕಾರ ಬ್ಯಾಟರಿ ಚಾಲಿತ ಬೈಕ್​ಗಳು ಗಂಟೆಗೆ 65ರಿಂದ 70 ಕಿಮೀ ವೇಗದಲ್ಲಿ ಓಡುತ್ತವೆ.
  • ಇಂಜಿನ್ ಚಾಲಿತ ಬೈಕ್​ಗೆ ಬ್ಯಾಟರಿ ಅಳವಡಿಸುವುದು ಹೇಗೆ?
  • ಪೆಟ್ರೋಲ್ ಇಂಜಿನ್ ಅನ್ನು ಬ್ಯಾಟರಿಗೆ ಬದಲಾಯಿಸುವಾಗ ಗೇರ್ ಬಾಕ್ಸ್ ತೆಗೆಯಬೇಕಾಗುತ್ತದೆ.
  • ಬಳಿಕ, ಬೈಕ್​ನ್ನು ನೇರವಾಗಿ ಎಕ್ಸಲೇಟರ್ ಮೂಲಕ ನಿಯಂತ್ರಿಸಲಾಗುತ್ತದೆ.
  • ಬೈಕ್ ಸ್ಕೂಟರ್ ರೀತಿ ಕಾರ್ಯನಿರ್ವಹಿಸುತ್ತದೆ. ಹಾಗಾದರೆ ಸ್ಕೂಟರ್​ನ ಇಂಜಿನ್ ಕೂಡ ಬ್ಯಾಟರಿಗೆ ಬದಲಾಯಿಸಿಕೊಳ್ಳಬಹುದೇ ಎಂಬ ಪ್ರಶ್ನೆ ಎದುರಾಗುತ್ತದೆ. ಆದರೆ ಅದು ಸಾಧ್ಯವಿಲ್ಲ.
  • ಸ್ಕೂಟರ್ ಇಂಜಿನ್ ಬದಲಿಸಲು ಬಹಳಷ್ಟು ಕೆಲಸ ಮತ್ತು ಖರ್ಚು ಇರುವುದರಿಂದ ಅದು ಅಸಾಧ್ಯ. ಬೈಕ್ ಪೆಟ್ರೋಲ್ ಇಂಜಿನ್​ನ್ನು ಬ್ಯಾಟರಿಗೆ ಬದಲಿಸಿಕೊಳ್ಳಬಹುದು.
  • ಬೈಕ್​ಗೆ ಅಳವಡಿಸಿದ ಬ್ಯಾಟರಿಯನ್ನು ಎರಡು ಗಂಟೆಗಳ ಕಾಲ ಚಾರ್ಜ್ ಮಾಡಿದರೆ 40 ಕಿ.ಮೀ. ಓಡಿಸಬಹುದಂತೆ.
  • ಬ್ಯಾಟರಿ ಪೂರ್ಣ ಚಾರ್ಜ್ ಆಗಿದ್ದರೆ ಸುಮಾರು 300 ಕಿ.ಮೀ.ವರೆಗೂ ಬೈಕ್ ಚಲಿಸುತ್ತದೆ. ಬ್ಯಾಟರಿ ಗುಣಮಟ್ಟದ ಮೇಲೆ ಕೂಡ ಈ ವಿಚಾರ ಅವಲಂಬಿಸಿದೆ. ಆದರೆ, ಪೆಟ್ರೋಲ್​ಗಿಂತ ಇದು ಲಾಭದಾಯಕ ಎನ್ನಲಾಗುತ್ತಿದೆ.
  • ಈ ರೀತಿ ಮಾಡುವ ಮುನ್ನ ಗಮನಿಸಲೇ ಬೇಕಾದ ವಿಚಾರ ಒಂದಿದೆ. ಹೀಗೆ ಬೈಕ್ ಎಂಜಿನ್ ಬದಲಾಯಿಸಿಕೊಳ್ಳುವುದು ಕಾನೂನು ಬಾಹಿರ.
  • ಸೆಕ್ಷನ್ 52, ಮೋಟಾರ್ ವಾಹನ ಆಯಕ್ಟ್ 1988ರ ಅನ್ವಯ ಮೋಟಾರ್ ವಾಹನವನ್ನು ಹೀಗೆ ಮಾಡುವುದು ಅಪರಾಧ. ಕಂಪೆನಿ ತಯಾರಿಸಿರುವ ವಾಹನವನ್ನು ಜನರು ಬೇಕು ಬೇಕಾದಂತೆ ಬದಲಾಯಿಸಿಕೊಳ್ಳುವಂತಿಲ್ಲ. ಹೀಗೆ ಮಾಡಿ ರಸ್ತೆಗೆ ಗಾಡಿ ಓಡಿಸಿಬಿಟ್ಟೀರಾ! ಫೈನ್ ಬೀಳುವುದರ ಜತೆಗೆ ನಿಮ್ಮ ಲೈಸೆನ್ಸ್ ಕೂಡ ರದ್ದಾಗಬಹುದು.
Copyright © All rights reserved Newsnap | Newsever by AF themes.
error: Content is protected !!