January 29, 2026

Newsnap Kannada

The World at your finger tips!

hubli dr

ಹುಬ್ಬಳ್ಳಿಯ ಖ್ಯಾತ ವೈದ್ಯ ದಂಪತಿಗಳ‌‌ ಸಂಸಾರದಲ್ಲಿ ಬಿರುಕು – ಪೋಲೀಸ್ ಠಾಣೆಯ ಮೆಟ್ಟಿಲೇರಿದ ಜಗಳ:ದೂರು

Spread the love

ಹುಬ್ಬಳ್ಳಿಯ ನರರೋಗ ತಜ್ಞ ವೈದ್ಯ ಡಾ ಕಾಂತ್ರಿ ಕಿರಣ್ ಹಾಗೂ ಪತ್ನಿ ಡಾ. ಶೋಭಾ ನಡುವೆ ವೈಮನಸ್ಸು ಈಗ ಬೀದಿ ರಂಪ ಆಗಿ ಪೋಲಿಸ್ ಠಾಣೆಯ ಮೆಟ್ಟಿಲೇರಿದೆ.ಕ್ರಾಂತಿ ಕಿರಣ್ ಪತ್ನಿ ಹಾಗೂ ಅಸ್ಪತ್ರೆಯ ನಿರ್ದೇಶಕಿ ಯಾಗಿರೋ ಡಾ.ಶೋಭಾ ಪತಿ ವಿರುದ್ಧವೇ ದೂರು ದಾಖಲಿಸಿದ್ದಾರೆ.

ಪತಿಯಿಂದ ಜೀವ ಬೆದರಿಕೆ ಇದ್ದು, ಹಲ್ಲೆ ಮಾಡಿದ್ದಾರೆ ಅಂತಾ ದೂರಿನಲ್ಲಿ ಉಲ್ಲೇಖ ಮಾಡಿದ್ದಾರೆ.ಹಾಗೇ ಚೀಟಿಂಗ್ ಕೇಸ್ ಕೂಡ ದಾಖಲಿಸಿದ್ದಾರೆ.

ಮತ್ತೊಂದೆಡೆ ಪತಿ ಕ್ರಾಂತಿಕಿರಣ್ ಆಸ್ಪತ್ರೆ ಬೋಡ್೯ ಮೀಟಿಂಗ್ ನಡೆಸದೇ ಬ್ಯಾಂಕ್ ಅಕೌಂಟ್ ಚೇಂಜ್ ಮಾಡಿಸಲು ಹುನ್ನಾರ ನಡೆಸಿದ್ದಾರೆಂದು ಡಾ.ಶೋಭಾ ತಮ್ಮ ಈ ದೂರಿನಲ್ಲಿ ಆರೋಪಿಸಿದ್ದಾರೆ.

ಇದಕ್ಕೆ ಪ್ರತಿಯಾಗಿ ಡಾ. ಕ್ರಾಂತಿಕಿರಣ್ ಪತ್ನಿ ವಿರುದ್ಧ ದೂರು ದಾಖಲಿಸಿದ್ದಾರೆ. ಡಾ. ಶೋಭಾ 17 ಲಕ್ಷ ರೂಪಾಯಿ ಬೇರೆಯವರಿಗೆ ವರ್ಗಾಯಿಸಿದ್ದಾರೆಂದು ದೂರು ನೀಡಿದ್ದಾರೆ. ದಂಪತಿಗಳು ಪರಸ್ಪರ ಹುಬ್ಬಳ್ಳಿಯ ವಿದ್ಯಾನಗರ ಠಾಣೆಗೆ ಕಂಪ್ಲೆಂಟ್ ಕೊಟ್ಟಿದ್ದಾರೆ.

ಘಟನೆ ಏನು?

ಕಳೆದ ವರ್ಷವೇ ಡಾ. ಕ್ರಾಂತಿ ಕಿರಣ್ ಸಂಸಾಸರದಲ್ಲಿ ಬಹುದೊಡ್ಡ ಕ್ರಾಂತಿ ಎದ್ದಿತ್ತು ಅಲ್ಲದೇ ಅಂದೇ ತನ್ನ ಪತ್ನಿಯ ವಿರುದ್ಧ, ಪ್ರಾಣ ಬೆದರಿಕೆ ದೂರು ದಾಖಲಿಸಿದ್ದರು‌.

ತನ್ನ ಪತ್ನಿಗೆ ಓರ್ವ ಪರಪುರುಷನ ಜೊತೆ ಅನೈತಿಕ ಸಂಬಂಧವಿದೆ. ಅದನ್ನು ಪ್ರಶ್ನಿಸಿದ್ದಕ್ಕೆ ಪತ್ನಿ ಹಾಗೂ ಪ್ರಿಯಕರ ಪ್ರಾಣ ಬೆದರಿಕೆಯನ್ನು ಹಾಕುತ್ತಿದ್ದಾರೆಂದು ಇದೇ ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಸಿದ್ದರು.

ಅಂದಿನಿಂದ ಇಂದಿನವರೆಗೂ ಇಬ್ಬರ ಮಧ್ಯೆ ಮುನಿಸು ಮಂದುವರೆಯುತ್ತಿದೆ. ತಾನು ಕಟ್ಟಿಸಿದ ಆಸ್ಪತ್ರೆಯಿಂದಲೇ ಆಕೆ ಲಕ್ಷಾಂತರ ರೂಪಾಯಿ ಹಣ ಎಗರಿಸಿದ್ದಲ್ಲದೇ, ನಿತ್ಯವೂ ಮಾನಸಿಕ ಕಿರುಕುಳ ನೀಡುತ್ತಿದ್ದಾರೆಂದು ಆರೋಪ ಮಾಡಿದ್ದರು.

ಕ್ರಾಂತಿಕಿರಣ್ ರಾಜಕೀಯದಲ್ಲಿ ಸಕ್ರಿಯರಾಗಿದ್ದಾರೆ. ಸದ್ಯ, ಬಿಜೆಪಿಯಲ್ಲಿ ಉನ್ನತ ಸ್ಥಾನ ಹೊಂದಿರುವ ವೈದ್ಯರು ಆಸ್ಪತ್ರೆಯನ್ನ ಕೂಡಾ ನಡೆಸುತ್ತಿದ್ದಾರೆ. ಆದರೆ‌ ಈ ಪ್ರಕರಣದ ಬಗ್ಗೆ ಡಾ. ಕ್ರಾಂತಿ‌ಕಿರಣ್ ಪ್ರತಿಕ್ರಿಯೆ ನೀಡಲು ಬಯಸುತ್ತಿಲ್ಲ.

error: Content is protected !!