December 25, 2024

Newsnap Kannada

The World at your finger tips!

pogaru

ಪೊಗರು‌ ವಿವಾದಿತ ಸೀನ್ ಕಟ್ – ಬ್ರಾಹ್ಮಣರು ಫುಲ್ ಖುಷ್

Spread the love

ಪೊಗರು ಚಿತ್ರದ ವಿವಾದಿತ ಸೀನ್ ಕಟ್ ಮಾಡಿದ ಬಳಿಕ ಚಿತ್ರ ವೀಕ್ಷಣೆ ಮಾಡಿದ ಬ್ರಾಹ್ಮಣ ಸಮುದಾಯ ಪೊಗರಿಗೆ ಮೆಚ್ಚುಗೆ ಸೂಚಿಸಿ ಫುಲ್ ಖುಷ್ ಆಗಿದೆಪೊಗರು’ ಸಿನಿಮಾದ ವಿವಾದ ಸುಖಾಂತ್ಯ ಕಂಡಿದೆ.

ನಂದ ಕಿಶೋರ್​ ನಿರ್ದೇಶಸಿ, ಧ್ರುವ ಸರ್ಜಾ ನಟಿಸಿರುವ ‘ಪೊಗರು’ ಸಿನಿಮಾ ಕಳೆದ ಶುಕ್ರವಾರ ತೆರೆ ಕಂಡಿದೆ. ಬ್ರಾಹ್ಮಣರಿಗೆ ಅವಹೇಳನ ಮಾಡುವ ಡೈಲಾಗ್​ಗಳನ್ನು ಹಾಗೂ ಸೀನ್​ಗಳನ್ನು ಸಿನಿಮಾದಲ್ಲಿ ತೋರಿಸಲಾಗಿದೆ ಅನ್ನೋ ಕಾರಣಕ್ಕೆ ಬ್ರಾಹ್ಮಣ ಸಮುದಾಯ ‘ಪೊಗರು’ ಸಿನಿಮಾದ ವಿರುದ್ಧ ನಿಂತಿತ್ತು. ಇದೀಗ ‘ಪೊಗರು’ ಸಿನಿಮಾದ ಕಾಂಟ್ರವರ್ಸಿ ಸುಖಾಂತ್ಯ ಕಂಡಿದೆ.

ನಿನ್ನೆ ಬ್ರಾಹ್ಮಣ ಸಭಾದ ಸದಸ್ಯರು ಫಿಲ್ಮ್​ ಚೇಂಬರ್​ ಮೆಟ್ಟಿಲೇರಿದ್ದು, ‘ಪೊಗರು’ ಸಿನಿಮಾದಲ್ಲಿ ಬ್ರಾಹ್ಮಣರಿಗೆ ಅವಮಾನ ಮಾಡಿರುವ ದೃಶ್ಯಗಳನ್ನ ತೆಗೆಯುವಂತೆ ಆಗ್ರಹಿಸಿದ್ದರು. ಸಿನಿಮಾದ ನಿರ್ಮಾಪಕ ಬಿ.ಕೆ ಗಂಗಾಧರ್​ ಹಾಗೂ ನಿರ್ದೇಶಕ ನಂದ ಕಿಶೋರ್​ ಬ್ರಾಹ್ಮಣ ಸಮುದಾಯದ ಜೊತೆ ಚರ್ಚಿಸಿ ಆ ಥರದ ಎಲ್ಲಾ ದೃಶ್ಯಗಳನ್ನೂ ಎಡಿಟ್​ ಮಾಡುವಂತೆ ತಿಳಿಸಿ ಸಮಾಧಾನ ಪಡಿಸಿದ್ದರು.

ಸದ್ಯ ನಂದಕಿಶೋರ್ ಮತ್ತು ಸಮುದಾಯದ ಸದಸ್ಯರ ಮಾತುಕತೆ ಸಫಲವಾಗಿದೆ. ‘ಪೊಗರು’ ಸಿನಿಮಾ ನೋಡಿ ಬ್ರಾಹ್ಮಣ ಸಭಾದ ಸದಸ್ಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಸಮುದಾಯದ ಸದಸ್ಯರು ಹೇಳಿದ ಸೀನ್​ಗಳಿಗೆ ‘ಪೊಗರು’ ಚಿತ್ರತಂಡ ಕತ್ತರಿ ಹಾಕಿದ್ದಾರೆ. ಬ್ರಾಹ್ಮಣ ಸಮುದಾಯದ ಸದಸ್ಯರು ‘ಪೊಗರು’ ತಂಡಕ್ಕೆ ಶುಭ ಹಾರೈಸಿದ್ದಾರೆ.

Copyright © All rights reserved Newsnap | Newsever by AF themes.
error: Content is protected !!