ಮೈಸೂರು ಪಾಲಿಕೆ‌ ಚುನಾವಣೆ: ಕೊನೇ ಹಂತದಲ್ಲಿ ಸ್ವತಂತ್ರ ಸ್ಪರ್ಧೆ ಮಾಡಿದ ಜೆಡಿಎಸ್

Team Newsnap
1 Min Read

ಮಹಾನಗರ ಪಾಲಿಕೆ‌ ಮೇಯರ್- ಉಪ ಮೇಯರ್ ಚುನಾವಣೆ ಕ್ಷಣಕ್ಷಣಕ್ಕೂ ತಿರುವು ಪಡೆಯುತ್ತಿದೆ. ತೀವ್ರ ಕುತೂಹಲ ಕೆರಳಿಸಿದೆ.

ಕೊನೇ ಹಂತದಲ್ಲಿ ಜೆಡಿಎಸ್​ ಸ್ವತಂತ್ರ ಸ್ಪರ್ಧೆಗೆ ಮುಂದಾಗಿ ಅಚ್ಚರಿ ಮೂಡಿಸಿದೆ.

ಕಳೆದ ರಾತ್ರಿ ಡಿ.ಕೆ ಶಿವಕುಮಾರ್ ಅಖಾಡಕ್ಕಿಳಿದು ಜೆಡಿಎಸ್​​ ಜೊತೆ ಮೈತ್ರಿ ಮುಂದುವರೆಸುವಲ್ಲಿ ಯಶಸ್ವಿಯಾಗಿದ್ದಾರೆ ಎನ್ನಲಾಗಿತ್ತು.

ಆದರೆ ನಂತರದ ಬೆಳವಣಿಗೆಯಲ್ಲಿ ಬಿಜೆಪಿ-ಕಾಂಗ್ರೆಸ್ ಎರಡೂ ಪಕ್ಷಗಳಿಂದ ಅಂತರ ಕಾಯ್ದುಕೊಂಡ ಜೆಡಿಎಸ್, ಪಕ್ಷೇತರರ ಸಹಾಯದಿಂದ ಅಧಿಕಾರ ಹಿಡಿಯಲು ಕಾರ್ಯತಂತ್ರ ರೂಪಿಸಿತ್ತು.
ಕೊನೆ ಕ್ಷಣದಲ್ಲಿ ಜೆಡಿಎಸ್​ ಸ್ವತಂತ್ರವಾಗಿ ಸ್ಪರ್ಧಿಸಲು ನಿರ್ಧರಿಸಿದೆ.

ಮೂರು ಪಕ್ಷದವರೂ ನಾಮಪತ್ರ ಸಲ್ಲಿಕೆ:

  • ಜೆಡಿಎಸ್​ನಿಂದ ಮೇಯರ್ ಸ್ಥಾನಕ್ಕೆ ರುಕ್ಮಿಣಿ ಮಾದೇಗೌಡ ಹಾಗೂ ಉಪಮೇಯರ್ ಸ್ಥಾನಕ್ಕೆ ಶಮಿಯುಲ್ಲಾ ನಾಮಪತ್ರ ಸಲ್ಲಿಸಿದ್ದಾರೆ.
  • ಬಿಜೆಪಿಯಿಂದ ಮೇಯರ್ ಅಭ್ಯರ್ಥಿ ಸುನಂದಾ ಪಾಲನೇತ್ರ ಹಾಗೂ ಉಪಮೇಯರ್ ಅಭ್ಯರ್ಥಿ ಸಾತ್ವಿಕ್ ಸಂದೇಶ್
  • ಕಾಂಗ್ರೆಸ್​ನಿಂದ ಮೇಯರ್ ಅಭ್ಯರ್ಥಿ ಶಾಂತಕುಮಾರಿ ಹಾಗೂ ಉಪ ಮೇಯರ್ ಅಭ್ಯರ್ಥಿ ಅನ್ವರ್ ಬೇಗ್ ಉಮೇದುವಾರಿಕೆ ಸಲ್ಲಿಸಿದ್ದಾರೆ.
Share This Article
Leave a comment