February 22, 2026

Newsnap Kannada

The World at your finger tips!

6 CAR

ನಿಂತಿದ್ದ ಟ್ರಕ್‍ಗೆ ಗುದ್ದಿದ ಕಾರು- 6 ಯುವಕರ ದುರಂತ ಸಾವು

Spread the love

ಪೆಟ್ರೋಲ್ ಬಂಕ್ ಸಮೀಪದಲ್ಲಿ ನಿಂತಿದ್ದ  ಟ್ಯಾಂಕರ್‌ಗೆ ಕಾರು ಡಿಕ್ಕಿ ಹೊಡೆದ ಪರಿಣಾಮ ಕಾರಿನಲ್ಲಿದ್ದ 6 ಯುವಕರು ಸಾವನ್ನಪ್ಪಿರುವ ಘಟನೆ ಮಧ್ಯಪ್ರದೇಶದ ತಲವಾಲಿ ಬಳಿ ನಡೆದಿದೆ.

ರಿಶಿ ಪವಾರ್(19), ಸೂರಜ್(25), ಚಂದ್ರಭಾನ ರಘುವಂಶಿ(23), ಸೋನು ಜತ್(23), ಸುಮಿತ್ ಸಿಂಗ್(30) ಮತ್ತು ದೇವ್(28) ಮೃತರು ಎಂದು ಗುರುತಿಸಲಾಗಿದೆ.

6 MEMBERS

ಮೃತರು ಇಂದೋರ್‍ ನಿವಾಸಿಗಳಾಗಿದ್ದಾರೆ. ಈ ಯುವಕರ ತಂಡ ಪಾರ್ಟಿ ಮುಗಿಸಿಕೊಂಡು ಮಾಂಗ್ಲಿಯಾದಿಂದ ತಮ್ಮ ನಗರಕ್ಕೆ ಬರುತ್ತಿರುವಾಗ ಈ ಅಪಘಾತ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ವೇಗವಾಗಿ ಚಲಿಸುತ್ತಿದ್ದ ಕಾರು ಪೆಟ್ರೋಲ್ ಬಂಕ್ ಸಮೀಪದಲ್ಲಿ ನಿಂತಿದ್ದ ತೈಲ ಸಾಗಾಣೆ ಮಾಡುವ ಟ್ಯಾಂಕರ್‍ ಗೆ ಗುದ್ದಿದೆ. ಕಾರ್ ಮುಂಭಾಗ ಸಂಪೂರ್ಣ ಜಖಂ ಆಗಿದೆ. ಈ ವೇಳೆ ಕಾರಿನಲ್ಲಿದ್ದ ಕೆಲ ಯುವಕರ ದೇಹದ ಭಾಗಗಳು ಕಟ್ ಆಗಿವೆ.

ಮೃತ ದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗಾಗಿ ಕಳುಹಿಸ ಲಾಗಿದೆ. ಮರಣೋತ್ತರ ಪರೀಕ್ಷೆ ನಂತರ ಪೋಷಕರಿಗೆ ಮೃತದೇಹವನ್ನು ನೀಡುತ್ತೇವೆ. ಚಾಲಕ ನಿದ್ರೆ ಮಂಪರಿಗೆ ಜಾರಿರಬಹುದು ಅಥವಾ ಅತೀ ವೇಗವಾಗಿ ಕಾರು ಚಲಾಯಿಸಿಕೊಂಡು ಬಂದು ಕಾರು ನಿಯಂತ್ರಣಕ್ಕೆ ಸಿಗದೆ ಅಪಘಾತ ಸಂಭವಿಸಿರಬಹುದು.

error: Content is protected !!