ಚುನಾವಣೆಗೆ ಮೂರು ತಿಂಗಳು ಇರುವಂತೆ ಅಲ್ಪಮತಕ್ಕೆ ಕುಸಿದಿರುವ ಪಾಂಡಿಚೇರಿ ಕಾಂಗ್ರೆಸ್ ಸರ್ಕಾರ ಪತನವಾಗೋದು ಬಹುತೇಕ ನಿಶ್ಚಿತವಾಗಿದೆ.
ಬಹುಮತ ಸಾಬೀತುಪಡಿಸಲು ಕಾಂಗ್ರೆಸ್ ಮುಂದಾಗಿರುವ ಹೊತ್ತಲ್ಲೇ ನಿನ್ನೆ ಮತ್ತೊಬ್ಬ ಕೈ ಶಾಸಕನ ರಾಜೀನಾಮೆ ಶಾಕ್ ನೀಡಿದೆ. ಇದೆಲ್ಲದರ ನಡುವೆ ಇಂದು ಸಂಜೆ ಸಿಎಂ ನಾರಾಯಣಸ್ವಾಮಿ ವಿಧಾನಸಭೆಯಲ್ಲಿ ವಿಶ್ವಾಸಮತ ಯಾಚಿಸಲಿದ್ದಾರೆ.
ಡಿಎಂಕೆ ಹಾಗೂ ಪಕ್ಷೇತರ ಶಾಸಕರ ಬೆಂಬಲದಿಂದ ಪುದುಚೆರಿ ಸರ್ಕಾರದ ಗದ್ದುಗೆ ಏರಿದ್ದ ಕಾಂಗ್ರೆಸ್ಗೆ ಇದುವರೆಗೂ 5 ಶಾಸಕರು ರಾಜೀನಾಮೆ ನೀಡುವುದರ ಮೂಲಕ ಸರ್ಕಾರ ಅಲ್ಪಮತಕ್ಕೆ ಕುಸಿದಿದೆ.
3 ನಾಮನಿರ್ದೇಶಿತರು ಸೇರಿ ಪುದುಚೆರಿ ವಿಧಾನಸಭೆಯ ಒಟ್ಟು ಸದಸ್ಯ ಬಲ 33 ಆಗಿದೆ. 1 ಪಕ್ಷೇತರ, 3 ಡಿಎಂಕೆ, 15 ಕಾಂಗ್ರೆಸ್, 14 ಮಂದಿ ಬಿಜೆಪಿ ಬೆಂಬಲಿತ ಸದಸ್ಯರಿದ್ದಾರೆ. ಡಿಎಂಕೆ ಜೊತೆ ಮೈತ್ರಿ ಹಾಗೂ ಪಕ್ಷೇತರರ ಬೆಂಬಲದಿಂದ ಕಾಂಗ್ರೆಸ್ 19 ಸದಸ್ಯರೊಂದಿಗೆ ಪುದುಚೇರಿಯ ಅಧಿಕಾರದ ಚುಕ್ಕಾಣಿ ಹಿಡಿದಿತ್ತು.
ಅಲ್ಪಮತಕ್ಕೆ ಕಾರಣವೇನು? :
19 ಸದಸ್ಯರ ಬಲದಿಂದ ನಾಲ್ಕು ಮುಕ್ಕಾಲು ವರ್ಷ ಅಧಿಕಾರ ಪೂರೈಸಿರುವ ಸಿಎಂ ನಾರಾಯಣಸ್ವಾಮಿ ನೇತೃತ್ವದ ಕಾಂಗ್ರೆಸ್ ಸರ್ಕಾರ ಚುನಾವಣೆಗೆ 3 ತಿಂಗಳು ಇರುವಂತೆಯೇ ಸದ್ಯ ಅಲ್ಪಮತಕ್ಕೆ ಕುಸಿದಿದೆ. ಸರ್ಕಾರ ಅಲ್ಪಮತಕ್ಕೆ ಕುಸಿಯಲು ಕಾರಣಗಳನ್ನು ನೋಡುವುದಾರೇ, ಕಾಂಗ್ರೆಸ್ನ ಓರ್ವ ಶಾಸಕನನ್ನು ಅಮಾನತು ಮಾಡಲಾಗಿದ್ದು, 5 ಶಾಸಕರು ರಾಜೀನಾಮೆ ಸಲ್ಲಿಸಿದ್ದಾರೆ. ಹೀಗಾಗಿ 13 ಸದಸ್ಯರೊಂದಿಗೆ ಕಾಂಗ್ರೆಸ್ ಸರ್ಕಾರ ಅಲ್ಪಮತಕ್ಕೆ ಕುಸಿದಿದೆ. ರಾಜ್ಯ ವಿಧಾನಸಭೆಯ ಸದಸ್ಯ ಬಲ 27ಕ್ಕೆ ಇಳಿಕೆಯಾಗಿದೆ.
ರಾಜೀನಾಮೆ ಪರ್ವ!
ಪುದುಚೆರಿ ಆಡಳಿತಾರೂಢ ಕಾಂಗ್ರೆಸ್ ಪಕ್ಷದ ನಡೆಯಿಂದ ಬೇಸತ್ತು ರಾಜೀನಾಮೆ ನೀಡುತ್ತಿರುವ ನಾಯಕರು ಬಿಜೆಪಿಯತ್ತ ಮುಖಮಾಡಿದ್ದಾರೆ.
ಬಹುಮತ ಸಾಬೀತುಪಡಿಸಲು ಸಿಎಂಗೆ ರಾಜ್ಯಪಾಲರ ಸೂಚನೆ
ಕಾಂಗ್ರೆಸ್ ಸರ್ಕಾರ ಬಹುಮತ ಸಾಬೀತುಪಡಿಸಲು ವಿಶೇಷ ಅಧಿವೇಶನ ಕರೆಯುವಂತೆ ವಿಪಕ್ಷ ಮಾಡಿದ್ದ ಮನವಿಗೆ ರಾಜ್ಯಪಾಲರು ಸ್ಪಂದಿಸಿದ್ದಾರೆ. ಇಂದು ಸಂಜೆಯೊಳಗೆ ಬಹುಮತ ಸಾಬೀತುಪಡಿಸುವಂತೆ ರಾಜ್ಯಪಾಲೆ ತಮಿಳಿಸಾಯಿ ಸುಂದರರಾಜನ್ ಸಿಎಂ ವಿ. ನಾರಾಯಣಸ್ವಾಮಿ ಅವರಿಗೆ ಸೂಚನೆ ನೀಡಿದ್ದಾರೆ.
ಇಂದು ವಿಶ್ವಾಸಮತ
ಇಂದು ಸಂಜೆ 5 ಗಂಟೆಗೆ ವಿಧಾನಸಭೆಯಲ್ಲಿ ವಿಶ್ವಾಸಮತ ಯಾಚನೆ ಪ್ರಕ್ರಿಯೆ ನಡೆಯಲಿದೆ. ಕಾಂಗ್ರೆಸ್ ಮೈತ್ರಿಕೂಟದಲ್ಲಿ 13, ಬಿಜೆಪಿಯಲ್ಲಿ 14 ಮಂದಿ ಸದಸ್ಯ ಬಲ ಇದೆ. ಬಹುಮತಕ್ಕೆ ಕಾಂಗ್ರೆಸ್ಗೆ 14 ಸದಸ್ಯರ ಬೆಂಬಲ ಅಗತ್ಯವಿದೆ. ಮುಖ್ಯಮಂತ್ರಿ ವಿ. ನಾರಾಯಣಸಾಮಿ ವಿಶ್ವಾಸಮತ ಯಾಚಿಸಲಿದ್ದಾರೆ. ಬಹುಮತ ಸಾಬೀತುಪಡಿಸುವಲ್ಲಿ ಕಾಂಗ್ರೆಸ್ ವಿಫಲವಾದರೆ ಬಿಜೆಪಿಗೂ ಗದ್ದುಗೆ ಸಿಗಲ್ಲ. ಏಕೆಂದರೆ ಚುನಾವಣೆಗೆ 3 ತಿಂಗಳಷ್ಟೇ ಇದೆ. ಮುಂದಿನ ಮೂರು ತಿಂಗಳ ಕಾಲ ರಾಷ್ಟ್ರಪತಿ ಆಡಳಿತ ಜಾರಿಗೆ ಬರುವ ಸಾಧ್ಯತೆ ಇದೆ.
- ರಾಜ್ಯದಲ್ಲಿ ಮುಂದಿನ 5 ದಿನ ಮಳೆಯ ಮುನ್ಸೂಚನೆ
- 10 ಸಾವಿರ ಕೋಟಿ ಕೈಗಾರಿಕೆ ಸ್ಥಾಪನೆ: ಪ್ರಸ್ತಾವನೆಗೆ ಉನ್ನತ ಮಟ್ಟದ ಸಮಿತಿ ಒಪ್ಪಿಗೆ
- ನಾನೊಬ್ಬ ರೈತ (ರೈತ ದಿನಾಚರಣೆಯ ಪ್ರಯುಕ್ತ )
- ಹೊರರಾಜ್ಯದ ಯುವತಿಯರನ್ನ ಕರೆಸಿ ಹೈಟೆಕ್ ವೇಶ್ಯಾವಾಟಿಕೆ ದಂಧೆ: ಆರೋಪಿ ಬಂಧನ
- ಬೆಂಗಳೂರಿನಲ್ಲಿ ಮಹಿಳೆಗೆ 30 ಲಕ್ಷ ರೂ. ವಂಚನೆ!
More Stories
ರಾಜ್ಯದಲ್ಲಿ ಮುಂದಿನ 5 ದಿನ ಮಳೆಯ ಮುನ್ಸೂಚನೆ
10 ಸಾವಿರ ಕೋಟಿ ಕೈಗಾರಿಕೆ ಸ್ಥಾಪನೆ: ಪ್ರಸ್ತಾವನೆಗೆ ಉನ್ನತ ಮಟ್ಟದ ಸಮಿತಿ ಒಪ್ಪಿಗೆ
ಹೊರರಾಜ್ಯದ ಯುವತಿಯರನ್ನ ಕರೆಸಿ ಹೈಟೆಕ್ ವೇಶ್ಯಾವಾಟಿಕೆ ದಂಧೆ: ಆರೋಪಿ ಬಂಧನ