ಬೀದರ್: ಜಿಲ್ಲೆಯ ಚಟ್ನಳಿ ತಾಲೂಕಿನ ಒಂದು ಗ್ರಾಮದಲ್ಲಿ 960 ಎಕರೆ ಜಮೀನುಗಳನ್ನು ವಕ್ಫ್ ಬೋರ್ಡ್‌ಗೆ ಸೇರ್ಪಡೆಗೊಳಿಸಲಾಗಿದ್ದು, 350ಕ್ಕೂ ಹೆಚ್ಚು ರೈತರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಪೂರ್ವದಲ್ಲಿ 50-60 ವರ್ಷಗಳಿಂದ ಕೃಷಿ ಚಟುವಟಿಕೆಗಳನ್ನು ನಿರ್ವಹಿಸುತ್ತಿದ್ದ ಈ ಜಮೀನುಗಳು, 2013ರಲ್ಲಿ ಅಂದಿನ ಜಿಲ್ಲಾಧಿಕಾರಿ ಪಿಸಿ ಜಾಫರ್ ಅವರ ಆದೇಶದ ಮೇಲೆ ಏಕಾಏಕಿ ವಕ್ಫ್ ಬೋರ್ಡ್‌ಗೆ ಸೇರಿಸಲಾಯಿತು. ಈ ಕ್ರಮದಿಂದಾಗಿ ರೈತರು ಸರ್ಕಾರಿ ಸವಲತ್ತುಗಳಿಂದ ವಂಚಿತರಾಗಿದ್ದಾರೆ.
ಈ ತೀರ್ಮಾನವನ್ನು ಹಿಂಪಡೆಯಲು 11 ವರ್ಷಗಳಿಂದ ಹೋರಾಟ ನಡೆಸಿದರೂ, ಸರ್ಕಾರ ಸ್ಪಂದಿಸದ ಕಾರಣ, ಸರ್ಕಾರದ ವಿರುದ್ಧ ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.ಇದನ್ನು ಓದಿ –ಪಡಿತರ ಚೀಟಿದಾರರಿಗೆ ಸಿಹಿ ಸುದ್ದಿ: ಇನ್ಮುಂದೆ ಉಚಿತವಾಗಿ ಅಕ್ಕಿಯ ಜೊತೆಗೆ ಸಿಗಲಿವೆ 9 ಹೊಸ ವಸ್ತುಗಳು!
ಸಿಎಂ ಸಿದ್ದರಾಮಯ್ಯ ಮತ್ತು ವಕ್ಫ್ ಸಚಿವ ಜಮೀರ್ ಅಹ್ಮದ್ ವಿರುದ್ಧ ಗಟ್ಟಿ ಪ್ರತಿಕ್ರಿಯೆ ವ್ಯಕ್ತಪಡಿಸಿದ ರೈತರು, “ನಮ್ಮ ಜೀವವನ್ನೂ ಕೊಡಬಹುದು, ಆದರೆ ಜಮೀನು ಬಿಡುವುದಿಲ್ಲ” ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.
More Stories
2024ನೇ ಸಾಲಿನ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪ್ರಕಟ: 67 ಸಾಧಕರ ಪಟ್ಟಿ ಇಲ್ಲಿದೆ
ಜೆಡಿಎಸ್ ಸ್ಟಾರ್ ಪ್ರಚಾರಕರ ಪಟ್ಟಿ ರಿಲೀಸ್: ಜಿ ಟಿ ದೇವೇಗೌಡನಿಗೆ ಕೊಕ್
ಮುಂದಿನ ಐದು ದಿನ ರಾಜ್ಯದ ಹಲವಡೆ ಭಾರಿ ಮಳೆ ಸಂಭವ