January 5, 2025

Newsnap Kannada

The World at your finger tips!

bda

ಸೈಟ್ ಕಬಳಿಕೆಯ ಯತ್ನದ ಆರೋಪ: ಐದು ಮಂದಿ ಬಿಡಿಎ ಎಂಜಿನಿಯರ್​​​ಗಳ ಬಂಧನ

Spread the love

 ನಕಲಿ ದಾಖಲೆ ಸೃಷ್ಟಿಸಿ ಬಿಡಿಎ ಸೈಟ್ ಕಬಳಿಸಲು ಯತ್ನಿಸಿದ ಆರೋಪದ ಹಿನ್ನೆಲೆ ಐದು ಮಂದಿ ಬಿಡಿಎ
ಎಂಜಿನಿಯರ್​ಗಳನ್ನು ಬೆಂಗಳೂರಿನ ಶೇಷಾದ್ರಿಪುರಂ ಪೊಲೀಸರು ಬಂಧಿಸಿದ್ದಾರೆ.

ಬಂಧಿತರು ಯಾರು?

ಬಿಡಿಎ ಉತ್ತರ ವಿಭಾಗದ ಎಂ.ಎಸ್. ಶಂಕರಮೂರ್ತಿ(50), ಕೆ.ಎನ್. ರವಿಕುಮಾರ್(50), ಶಬೀರ್ ಅಹ್ಮದ್(50), ಡಿ. ಶ್ರೀರಾಮ್(50) ಹಾಗೂ ಶ್ರೀನಿವಾಸ್ ಬಂಧಿತರು.

ಈ ಐವರು ದಶಕಗಳಿಂದ ಬಿಡಿಎನಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ನಗರ ಯೋಜನೆಯ ಜಯನಗರ, ಬನಶಂಕರಿ ಹಾಗೂ ಆರ್.ಟಿ.ನಗರ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದಾರೆ.

 ನಿಖರ ಅಳತೆ ವರದಿ(ಸಿಡಿ) ತಯಾರಿಕೆಯಲ್ಲಿ ನಿವೇಶನಗಳಿವೆ ಎಂದು ತೋರಿಸಿ ಬಳಿಕ ನಕಲಿ ದಾಖಲೆ ಸೃಷ್ಟಿಸಿರುವ ಆರೋಪ ಇವರಗಳ ವಿರುದ್ಧ ಕೇಳಿಬಂದಿದೆ.

30ಕ್ಕೂ ಹೆಚ್ಚು ನಿವೇಶನಗಳಿಗೆ ನಕಲಿ ದಾಖಲೆ ಸೃಷ್ಟಿಸಿರುವ ಶಂಕೆ ವ್ಯಕ್ತವಾಗಿದೆ
ಬಡಾವಣೆಗಳ ಭೂ ದಾಖಲೆ ಪರಿಶೀಲನೆ ವೇಳೆ ಅಕ್ರಮ ಬೆಳಕಿಗೆ ಬಂದಿತ್ತು. ಈ ಹಿನ್ನೆಲೆ ಬಿಡಿಎ ಆಯುಕ್ತರ ಸೂಚನೆ ಮೇರೆಗೆ ಶೇಷಾದ್ರಿಪುರಂ ಠಾಣೆಯಲ್ಲಿ ಎಫ್‌ಐಆರ್​ ದಾಖಲಾಗಿತ್ತು.

ಐವರು ಇಂಜಿನಿಯರ್‌ಗಳನ್ನು ಶೇಷಾದ್ರಿಪುರಂ ಪೊಲೀಸರು ಬಂಧಿಸಿದ್ದು, ಕೋರ್ಟ್​ ಇವರುಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ

Copyright © All rights reserved Newsnap | Newsever by AF themes.
error: Content is protected !!