ನಿರಂತರವಾಗಿ 53 ದಿನಗಳ ಕಾಲ ಸಂಪೂರ್ಣ ತುಂಬಿ ಹರಿಯುವ ಮೂಲಕ ಕೆಆರ್‌ಎಸ್ ದಾಖಲೆ ನಿರ್ಮಿಸಿದೆ.
ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದಲ್ಲಿರುವ ಕೆಆರ್‌ಎಸ್ ಜಲಾಶಯ ತುಂಬಿ ಹರಿಯುತ್ತಿದೆ. ಸೆಪ್ಟೆಂಬರ್ ಹಾಗೂ ಅಕ್ಟೋಬರ್ ತಿಂಗಳಿನಲ್ಲಿ ಸುರಿದ ಧಾರಾಕಾರ ಮಳೆಯ ಹಿನ್ನೆಲೆಯಲ್ಲಿ ಕಾವೇರಿ ಉಕ್ಕಿ ಹರಿದಿದ್ದಾಳೆ.
ಸತತವಾಗಿ 53 ದಿನಗಳ ಕಾಲ ಸಂಪೂರ್ಣವಾಗಿ ತುಂಬಿ ಹರಿದ ಇತಿಹಾಸ ಮರುಕಳಿಸಿರಲಿಲ್ಲ. 90 ವರ್ಷಗಳ ದಾಖಲೆಯನ್ನು ಕೆಆರ್‌ಎಸ್ ಈ ವರ್ಷ ಸರಿಗಟ್ಟಿದೆ.
ಅಕ್ಟೋಬರ್ 29ರಿಂದ ಡಿಸೆಂಬರ್ 23ರ ತನಕ ಕೆಆರ್‌ಎಸ್ ಜಲಾಶಯ ಸಂಪೂರ್ಣ ಭರ್ತಿಯಾಗಿತ್ತು.
53 ದಿನಗಳ ವರೆಗೆ 124.80 ಅಡಿ ಎಂದರೆ ಗರಿಷ್ಠ ಮಟ್ಟ ಇತ್ತು. ಈ ದಾಖಲೆಯಿಂದ ಬೇಸಿಗೆ ಸಮಯದಲ್ಲಿ ಜಿಲ್ಲೆಯ ಹಾಗೂ ಕಾವೇರಿಯನ್ನು ಅವಲಂಬಿಸಿರುವ ಜನರು ಚಿಂತಿಸುವ ಅಗತ್ಯ ಇಲ್ಲ ಎಂದು ರೈತರು ಖುಷಿಯಾಗಿದ್ದಾರೆ.
More Stories
ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ ನಟ ದರ್ಶನ್
ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
ಅತ್ತೆ-ಸೊಸೆ ಜಗಳ: ತಾಯಿ-ಮಗ ಆತ್ಮಹತ್ಯೆ ಗೆ ಶರಣು