ಚಾಜ್೯ ಶೀಟ್ ಹಾಕಲು 80 ಸಾವಿರ ರು ಲಂಚ : ಪೊಲೀಸ್ ಅಧಿಕಾರಿಗಳ ವಿರುದ್ದವೇ ಎಫ್‌ಐಆರ್

Team Newsnap
1 Min Read

ಚಾರ್ಜ್ ಶೀಟ್ ಹಾಕಲು 80 ಸಾವಿರ ರು ಲಂಚ ಪಡೆದ ಆರೋಪದಲ್ಲಿ ಪೊಲೀಸ್ ಇನ್ಸ್ ಪೆಕ್ಟರ್ ವಿರುದ್ಧ ಎಫ್‌ಐಆರ್ ದಾಖಲಾದ ಘಟನೆ ಬೆಂಗಳೂರಿನಲ್ಲಿ ಜರುಗಿದೆ

ಇನ್ಸ್ ಪೆಕ್ಟರ್ ಜಯರಾಜ್ ಹಾಗೂ ಎಎಸ್‌ಐ ಶಿವಕುಮಾರ್ ಆರೋಪಿಗಳು. ಜಯರಾಜ್ ಈ ಹಿಂದೆ ಕೆಆರ್ ಪುರಂ ಠಾಣೆಯಲ್ಲಿ ಇನ್ಸ್ ಪೆಕ್ಟರ್ ಆಗಿದ್ದರು. ಸದ್ಯ ಸಿಐಡಿಯಲ್ಲಿ ಇನ್ಸ್ ಪೆಕ್ಟರ್ ಜಯರಾಜ್ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

ಕೌಟುಂಬಿಕ ಕಲಹದಲ್ಲಿ ಪತಿ ವಿರುದ್ಧ ಪತ್ನಿ ದೂರು ದಾಖಲಿಸಿದ್ದರು. ಪತ್ನಿಯ ದೂರಿನನ್ವಯ ಗಂಡ ಸಂಜು ರಾಜನ್‌ನನ್ನು ಕೆಆರ್ ಪುರಂ ಪೊಲೀಸರು ಬಂಧಿಸಿ ಜೈಲಿಗೆ ಕಳುಹಿಸಿದ್ದರು.

ಬಳಿಕ ಜಾಮೀನು ಪಡೆದು ಸಂಜು ರಾಜನ್ ಜೈಲಿನಿಂದ ಬಿಡುಗಡೆಯಾಗಿದ್ದರು. ಆದರೆ
ಪ್ರತಿವಾರ ಠಾಣೆಗೆ ಆಗಮಿಸಿ ಸಹಿ ಮಾಡಲು 500 ರಿಂದ 10 ಸಾವಿರದವರಗೆ ಪೊಲೀಸರು ಲಂಚ ಪಡೆಯುತ್ತಿದ್ದರು. ಬೇಗ ಚಾರ್ಜ್ ಶೀಟ್ ಮಾಡಲು 80 ಸಾವಿರ ರೂ. ಲಂಚ ಪಡೆದಿದ್ದಾರೆ ಎಂದು ಆರೋಪಿಸಿದ್ದಾರೆ.

ಸಕ್ಷಮ ಪ್ರಾಧಿಕಾರದ ಅನುಮತಿ ಮೇರೆಗೆ ಇನ್ಸ್ಪೆಕ್ಟರ್ ಜಯರಾಜ್ ಹಾಗೂ ಎಎಸ್‌ಐ ಶಿವಕುಮಾರ್ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಇಬ್ಬರ ವಿರುದ್ಧ ಎಫ್‌ಐಆರ್ ದಾಖಲಿಸಿ ಎಸಿಬಿ ತನಿಖೆ ನಡೆಸುತ್ತಿದ್ದಾರೆ.

Share This Article
Leave a comment