ನಾನೂ ಸೇರಿದಂತೆ ನನ್ನ ಕುಟುಂಬದ ಎಂಟು ಜನ ಕೋವಿಡ್ ಬಾಧಿತರಿದ್ದೇವೆ. ಒಂದು ಘಟನೆಯಿಂದ ವ್ಯಕ್ತಿಯನ್ನು ಅಳೆಯಬೇಡಿ ಎಂದು ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ತಿಳಿಸಿದರು.
ನೆರೆ ಪೀಡಿತ ಪ್ರದೇಶಗಳಿಗೆ ಭೇಟಿ ನೀಡದೇ, ಶಿರಾ ಉಪಚುಣಾವಣೆಯ ನಿಮಿತ್ತ ರಾಜೇಶ ಗೌಡ ನಾಮಪತ್ರ ಸಲ್ಲಿಸುವಿಕೆಯ ವೇಳೆಯಲ್ಲಿ ಶಿರಾಗೆ ಕಾರಜೋಳ ಭೇಟಿ ನೀಡಿದ್ದು ವ್ಯಾಪಕ ಟೀಕೆಗೆ ಒಳಗಾಗಿತ್ತು.
ಸುದ್ದಿಗಾರರೊಂದಿಗೆ ಮಾತನಾಡಿದ ಡಿಸಿಎಂ ತಮ್ಮ ಪರಿಸ್ಥಿತಿಯ ಕುರಿತು ವಿವರಣೆ ನೀಡಿ ನನ್ನ ಪುತ್ರ ಡಾ. ಗೋಪಾಲ ಕಾರಜೋಳ 23 ದಿನಗಳಿಂದ ಕೊರೋನಾ ಪೀಡಿತನಾಗಿ ವೆಂಟಿಲೇಟರ್ ಚಿಕಿತ್ಸೆಯಲ್ಲಿದ್ದಾನೆ. ನಾನು ದೂರದ ಪ್ರಯಾಣ ಮಾಡದಂತೆ ವೈದ್ಯರ ಸಲಹೆ ಇದೆ.’ ಎಂದು ಅವರು ತಮ್ಮ ಅಳಲನ್ನು ತೋಡಿಕೊಂಡರು.
‘ನಾನು ಈಗ ತಾನೇ ಕೋವಿಡ್‌ನಿಂದ ಗುಣಮುಖನಾಗಿದ್ದೇನೆ. ಹಾಗಾಗಿ ನಾನು ದೂರ ಪ್ರಯಾಣ ಮಾಡಲಾಗುವುದಿಲ್ಲ. ನಾನು ನೆರೆ ಪೀಡಿತ ಪ್ರದೇಶಗಳಿಗೆ ಭೇಟಿ ನೀಡದೇ ಇದ್ದರೂ ಪರಿಹಾರ ಕ್ರಮ ಕೈಗೊಳ್ಳುವಲ್ಲಿ ನಿರಂತರವಾಗಿ ಅಧಿಕಾರಿಗಳ ಜೊತೆ ಸಂಪರ್ಕದಲ್ಲಿದ್ದೇನೆ. ನಾನು ಅಲ್ಲಿಗೆ ಭೇಟಿ ನೀಡದೇ ಇದ್ದರೂ ಸಹ ನನ್ನ ಕೆಲಸವನ್ನು ನಾನು ಮಾಡುತ್ತಿದ್ದೇನೆ’ ಎಂದು ಅವರು ಸ್ಪಷ್ಟನೆ ನೀಡಿದರು
More Stories
ಮೈಸೂರು- 40 ಸಾವಿರ ಲಂಚ ಸ್ವೀಕರಿಸುತ್ತಿದ್ದ ಬಿಲ್ ಕಲೆಕ್ಟರ್ ಲೋಕಾಯುಕ್ತ ಬಲೆಗೆ
IDBI ಬ್ಯಾಂಕಿನಲ್ಲಿ 600 ಹುದ್ದೆಗಳ ನೇಮಕಾತಿ – 2024
ರಾಜ್ಯದ ಸರ್ಕಾರಿ ಆಸ್ಪತ್ರೆಗಳಲ್ಲಿ ಸೇವಾ ದರ ಹೆಚ್ಚಳ