ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಆಪ್ತ, ಪ್ರಥಮ ದಜೆ೯ ಗುತ್ತಿಗೆದಾರ ಯುಬಿ ಶೆಟ್ಟಿ ನಿವಾಸದಲ್ಲಿ 70 ಕೋಟಿ ರೂಗಳಿಗೂ ಹೆಚ್ಚು ಅಕ್ರಮ ಆಸ್ತಿ ಪತ್ತೆಯಾಗಿದೆ.
ಉಪಚುನಾವಣೆಯ ವೇಳೆ ಅಕ್ಟೋಬರ್ 28ರಂದು ಧಾರವಾಡ ಮತ್ತು ಉಡುಪಿಯ ನಿವಾಸಗಳ ಮೇಲೆ ಐಟಿ ದಾಳಿ ಮಾಡಿತ್ತು.
ಪ್ರಾಜೆಕ್ಟ್ ನಿರ್ಮಾಣದ ವೇಳೆ ನಕಲಿ ಬಿಲ್ ತೋರಿಸಿ ಕಬ್ಬಿಣ ಸೇರಿ ಹಲವು ಸಾಮಗ್ರಿ ಖರೀದಿ ಮಾಡಿದ್ದಾರೆ. 40ಕ್ಕೂ ಹೆಚ್ಚು ಬೋಗಸ್ ಉಪ ಗುತ್ತಿಗೆ ಕ್ಲೈಮ್ ಮಾಡಿರುವುದು ಬೆಳಕಿಗೆ ಬಂದಿದೆ.
ಅಕ್ಟೋಬರ್ 27ರಂದು ಹಸು, ಕುರಿ, ಕೋಳಿ ಸೇರಿ ಇತರೆ ಪ್ರಾಣಿಗಳ ಆಹಾರ ಉತ್ಪಾದನಾ ಘಟಕಗಳ ಮೇಲೂ ಐಟಿ ದಾಳಿ ನಡೆಸಿತ್ತು.
ತಮಿಳುನಾಡು, ಕರ್ನಾಟಕ, ಕೇರಳದಲ್ಲಿ ಏಕಕಾಲಕ್ಕೆ 40 ಕಡೆ ರೇಡ್ ಮಾಡಲಾಗಿತ್ತು. ದಾಳಿ ವೇಳೆ 3.3 ಕೋಟಿ ರೂಪಾಯಿ ನಗದು, 300 ಕೋಟಿಗೂ ಅಧಿಕ ಅಕ್ರಮ ಆಸ್ತಿ ಪತ್ತೆಯಾಗಿದೆ.
More Stories
ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
Karnataka Budget 2025-26 : ಶಕ್ತಿ ಯೋಜನೆಗೆ 5,300 ಕೋಟಿ ಅನುದಾನ
ಪೊಲೀಸ್ ಅಧಿಕಾರಿಯ ಕಿರುಕುಳಕ್ಕೆ ಮನನೊಂದು ವ್ಯಕ್ತಿ ಆತ್ಮಹತ್ಯೆ ಆರೋಪ