March 19, 2025

Newsnap Kannada

The World at your finger tips!

dengue

ಡೆಂಘಿ ಜ್ವರಕ್ಕೆ 7 ವರ್ಷದ ಬಾಲಕ ಬಲಿ: ವೈದ್ಯರ ನಿರ್ಲಕ್ಷ್ಯಕ್ಕೆ ಪೋಷಕರ ಆಕ್ರೋಶ

Spread the love

ತುಮಕೂರು: ಸಾಮಾನ್ಯವಾಗಿ ಮಳೆಗಾಲದಲ್ಲಿ ಕಾಣಿಸಿಕೊಳ್ಳುವ ಡೆಂಘಿ ಜ್ವರ ಈಗಲೂ ಮುಂದುವರಿದಿದ್ದು, 7 ವರ್ಷದ ಬಾಲಕನೊಬ್ಬ ಈ ಕಾಯಿಲೆಗೆ ಬಲಿಯಾಗಿರುವ ಘಟನೆ ತುಮಕೂರು ಜಿಲ್ಲೆಯ ಪಾವಗಡದಲ್ಲಿ ನಡೆದಿದೆ.

ಪಾವಗಡ ಪಟ್ಟಣದ ಬಾಬೈಯನ ಗುಡಿ ಬೀದಿಯ ನಿವಾಸಿ ಕರುಣಾಕರ್ ಡೆಂಘಿ ಜ್ವರದಿಂದ ಸಾವನ್ನಪ್ಪಿದ್ದು, ಈ ಘಟನೆ ಸ್ಥಳೀಯರಲ್ಲಿ ಭಯ ಮೂಡಿಸಿದೆ. ಬಾಲಕನ ತಂದೆ ಹರೀಶ್ ಕುಮಾರ್ ಮಗುವನ್ನು ತೀವ್ರ ಜ್ವರದ ಕಾರಣ ಕಳೆದ 8 ದಿನಗಳಿಂದ ಪಾವಗಡದ ಖಾಸಗಿ ಕ್ಲಿನಿಕ್‌ನಲ್ಲಿ ಚಿಕಿತ್ಸೆ ಕೊಡಿಸುತ್ತಿದ್ದರು. ಆದರೆ, ಚಿಕಿತ್ಸೆ ಫಲಿಸದೆ ಮಗುವಿನ ಸ್ಥಿತಿ ಗಂಭೀರಗೊಂಡು ಮೃತಪಟ್ಟಿದೆ.

ಮಗುವಿಗೆ ಡೆಂಘಿ ಜ್ವರ ಇರುವುದು ಕೊನೆಯ ಕ್ಷಣದವರೆಗೂ ಪೋಷಕರಿಗೆ ವೈದ್ಯರು ತಿಳಿಸಿರಲಿಲ್ಲ ಎಂಬ ಗಂಭೀರ ಆರೋಪಗಳು ಕೇಳಿಬಂದಿವೆ.ಇದನ್ನು ಓದಿ – ಟೋಲ್ ತಪ್ಪಿಸುವ ವಾಹನ ಸವಾರರಿಗೆ ಬಿಗ್ ಶಾಕ್: ಬೆಂ-ಮೈ ಎಕ್ಸ್‌ಪ್ರೆಸ್‌ವೇ ಸರ್ವೀಸ್ ರಸ್ತೆ ಬಂದ್

ಈ ನಿರ್ಲಕ್ಷ್ಯವೇ ಮಗನ ಸಾವಿಗೆ ಕಾರಣ ಎಂದು ಆಕ್ರೋಶಗೊಂಡ ಪೋಷಕರು, ಸ್ಥಳೀಯರೊಂದಿಗೆ ಸೇರಿ ಖಾಸಗಿ ಕ್ಲಿನಿಕ್ ಎದುರು ಪ್ರತಿಭಟನೆ ನಡೆಸಿದ್ದಾರೆ. ಕೂಡಲೇ ಸಂಬಂಧಿತ ವೈದ್ಯರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದ್ದಾರೆ.

Copyright © All rights reserved Newsnap | Newsever by AF themes.
error: Content is protected !!