January 12, 2025

Newsnap Kannada

The World at your finger tips!

cm meet

ಸೆ.6 ರಿಂದಲೇ 6 ರಿಂದ 8ನೇ ತರಗತಿ ಶಾಲೆ ಆರಂಭ – ಸಚಿವ ಆರ್.ಅಶೋಕ್ ಪ್ರಕಟ

Spread the love

ರಾಜ್ಯದಲ್ಲಿ ಕೆಲವು ಜಿಲ್ಲೆ ಹೊರತು ಪಡಿಸಿ ಸೆ. 6ರಿಂದ 6 ರಿಂದ 8 ತರಗತಿಗಳ ಶಾಲೆಗಳು ಆರಂಭವಾಗಲಿವೆ.

ಸಿಎಂ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಸೋಮವಾರ ನಡೆದ ಉನ್ನತ ಮಟ್ಟದ ಸಭೆಯಲ್ಲಿ ಬರುವ ಸೆ. 6ರಿಂದಲೇ 6, 7 ಮತ್ತು 8ನೇ ತರಗತಿ ವರೆಗೂ ಶಾಲೆ ಆರಂಭ ಮಾಡಲು ನಿರ್ಧಾರ ಮಾಡಲಾಗಿದೆ.

ಸಿಎಂ ಸಭೆ ಬಳಿಕ ಸುದ್ದಿಗಾರರಿಗೆ ಈ ವಿಷಯ ತಿಳಿಸಿದ ಸಚಿವ ಅಶೋಕ್​ , ಸಭೆಯಲ್ಲಿ ಮುಂದಿನ ದಿನಗಳಲ್ಲಿ ಸರ್ಕಾರದ ನೀತಿ ನಿಯಮಗಳು ಏನಿರಬೇಕು? ಎಂಬುದರ ಬಗ್ಗೆ ಚರ್ಚೆ ಆಗಿದೆ. ಕೇರಳದಲ್ಲಿ ಕೋವಿಡ್-19 ಸೋಂಕು ಹೆಚ್ಚಾಗುತ್ತಿದೆ. ಕೇರಳದಿಂದ ಬರುತ್ತಿರುವವರಿಗೆ ಕ್ವಾರೆಂಟೈನ್ ಮಾಡಬೇಕು. ಕಡ್ಡಾಯವಾಗಿ ಕ್ವಾರಂಟೈನ್ ಮಾಡಲಾಗುವುದು. ಒಂದು ವಾರದ ಬಳಿಕ ಪರೀಕ್ಷೆ ಕಡ್ಡಾಯ ಮಾಡಲಾಗಿದೆ ಎಂದು ವಿವರಿಸಿದರು.

ಶಾಲೆಗಳ ಆರಂಭಕ್ಕೆ ಮಾರ್ಗದರ್ಶಿ ಸೂತ್ರಗಳು :

ಗಣೇಶ ಚತುರ್ಥಿಗೂ ಮುನ್ನವೇ ಶಾಲೆಗಳ ಆರಂಭ –

  • 6, 7 ಮತ್ತು 8ನೇ ತರಗತಿ ತೆರೆಯಲು ಸರ್ಕಾರದ ಅನುಮತಿ ನ
  • ಸೆಪ್ಟೆಂಬರ್‌ 6 ರಿಂದ ತರಗತಿಗಳು ಆರಂಭವಾಗಲಿದೆ. ದಿನ ಬಿಟ್ಟು ದಿನ ತೆರೆಯಲು ಅನುಮತಿ ನೀಡಲಾಗುತ್ತದೆ.
  • ಮಕ್ಕಳು ಬ್ಯಾಚ್ ಪ್ರಕಾರ ಶಾಲೆಗೆ ಆಗಮಿಸಲು ಅನುಮತಿ.
  • ಅರ್ಧ ದಿನ ಮಾತ್ರ ಶಾಲೆಗಳು ಕಾರ್ಯನಿರ್ವಹಿಸಲಿದೆ.
  • ವಾರಕ್ಕೆ ಐದು ದಿನ ಮಾತ್ರ ಶಾಲೆಗಳಲ್ಲಿ ತರಗತಿಗಳು ನಡೆಯಬೇಕು.

ಕೊರೋನಾ ಪಾಸಿಟಿವ್ ದರ ಶೇ.2 ಕ್ಕಿಂತ ಕಡಿಮೆಯಿರುವ ಸೋಂಕಿನ ಪ್ರಮಾಣದ ತಾಲೂಕಿನಲ್ಲಿ ಶಾಲೆಗಳು ಆರಂಭವಾಗಲಿದೆ.

  • ಶನಿವಾರ ಮತ್ತು ಭಾನುವಾರ ಕೂಡ ಶಾಲೆಗಳು ಓಪನ್ ಆಗಲಿದವೆ
  • 9, 10, 11 ಹಾಗೂ 12 ನೇ ಕ್ಲಾಸ್ ನ‌ 6,472 ಮಕ್ಕಳ ಸ್ಯಾಂಪಲ್ ಸಂಗ್ರಹ ಮಾಡಿದಾಗ ಅದರಲ್ಲಿ ಕೇವಲ 14 ಮಕ್ಕಳಲ್ಲಿ ಮಾತ್ರ ಪಾಸಿಟಿವ್ ವರದಿ ಬಂದಿದೆ.
Copyright © All rights reserved Newsnap | Newsever by AF themes.
error: Content is protected !!