December 23, 2024

Newsnap Kannada

The World at your finger tips!

3dc40caf 784c 4aa3 be8a 02d3224a2454

6ನೇ ಮಾಜಿ ಪತ್ನಿಗೆ ದುಬೈ ಪ್ರಧಾನಿ 5500 ಕೋಟಿ ರು ಜೀವನಾಂಶ ಕೊಡಲು ಕೋರ್ಟ್​ ಆದೇಶ

Spread the love

ಪ್ರಧಾನಿ ಶೇಖ್ ಮೊಹಮ್ಮದ್ ತನ್ನ ಆರನೇ ಪತ್ನಿ ಹಯಾ ಬಿಂಟ್​ಗೆ ಡಿವೋರ್ಸ್​ ಕೊಟ್ಟು ಈಗಾಗಲೇ ಎರಡು ವರ್ಷ ಕಳೆದಿವೆ. ತನ್ನ ವಿಚ್ಛೇದಿತ ಪತ್ನಿಯ ಪರವಾಗಿ ಲಂಡನ್​ ಕೋರ್ಟ್​​ವೊಂದು ನೀಡಿದ ತೀರ್ಪು ಜಾಗತಿಕ ಮಟ್ಟದಲ್ಲಿ ಸದ್ದು ಮಾಡಿದೆ

ತನ್ನ ಮಾಜಿ ಪತ್ನಿಗೆ ವಿಚ್ಛೇಧನ ಮೊತ್ತ ಹಾಗು ಮಕ್ಕಳ ಪರಿಹಾರ ಭದ್ರತೆಗಾಗಿ ಹಣ ಪರಿಹಾರ ಕೊಡಬೇಕೇಂದು ಲಂಡನ್​ ಕೋರ್ಟ್​ ತಿಳಿಸಿದೆ. ಬರೋಬ್ಬರಿ 734 ಮಿಲಿಯನ್​ ಅಮೆರಿಕನ್ ಡಾಲರ್ ಅಂದ್ರೆ 5500 ಕೋಟಿ ರು ಡಿವೋರ್ಸ್​ ಮೊತ್ತ ಕೊಡಬೇಕೆಂದು ಸೂಚನೆ ನೀಡಿದೆ.

ಡಿವೋರ್ಸ್​ಗೆ ಕಾರಣ ಏನು ಗೊತ್ತಾ?

2004ರಲ್ಲಿ ರಾಜಕುಮಾರನನ್ನು ವರಿಸಿದ್ಧ ಹಯಾ ಬಿಂಟ್ ಹುಸೇನ್ ತನ್ನ ಪತಿಯ ಬಾಡಿಗಾರ್ಡ್​ ಜೊತೆ ಸಂಬಂಧ ಹೊಂದಿದ್ದರು.

ಜಗತ್ತಿಗೆ ಈ ವಿಷಯ ಗೊತ್ತಾಗಿ ಪ್ರಧಾನಿ ಶೇಖ್ ಮೊಹಮ್ಮದ್ ಬಿನ್ ರಶೀದ್ ಅಲ್​ಮುಕ್ತೋಮ್ ಕೆರಳಿ ಕೆಂಡವಾಗಿದ್ದ. ವಿಷ್ಯಾ ಲೀಕ್​ ಆಗಿದ್ದರಿಂದ ದುಬೈನಲ್ಲಿ ರಾಜಕುಮಾರಿಗೆ ಬದುಕು ನಡೆಸುವುದು ದುಸ್ತರವಾಗಿ ದುಬೈಗೆ ಗುಡ್​​ ಬೈ ಹೇಳಿದರು

ಪ್ರಾಣಭಯದ ಕಾರಣದಿಂದಲೇ 2019ರಲ್ಲಿ ಹಯಾ ಬಿಂಟ್ ಅಲ್​ ಹುಸೇನ್ ದುಬೈ ಬಿಟ್ಟು ಬ್ರಿಟನ್ ಸೇರಿದ್ರು. ಇದೇ ಕಾರಣಕ್ಕೆ ದುಬೈ ಪ್ರಧಾನಿ ಶೇಖ್ ಮೊಹಮ್ಮದ್ ತನ್ನ ಆರನೇ ಪತ್ನಿಗೆ ಡಿವೋರ್ಸ್​ ಕೊಟ್ಟಿದರು. ಈಗ ಪರಿಹಾರದ ಮೊತ್ತ ಪಾವತಿ ಮಾಡಬೇಕಗಿದೆ

Copyright © All rights reserved Newsnap | Newsever by AF themes.
error: Content is protected !!