ಈ ಕೃತ್ಯಕ್ಕೆ ಸೌಂಧರ್ಯವೆ ಈಕೆಗ ತನ್ನ ಸೌಂದರ್ಯ ವನ್ನು ಬಂಡವಾಳ ಮಾಡಿಕೊಂಡು ಯುವಕರನ್ನು ಹನಿ ಟ್ರ್ಯಾಪ್ ಮೂಲಕ ಖೆಡ್ಡಾಕ್ಕೆ ಕೆಡವುತ್ತಿದ್ದ ಮಂಗಳೂರಿನ ಯುವತಿ ಸೇರಿ ನಾಲ್ವರನ್ನು ಪೋಲಿಸರು ಬಂಧಿಸಿದ್ದಾರೆ.
ದಿಢೀರ್ ಶ್ರೀಮಂತರಾಗುವ ಹುಚ್ಚು ಹೆಚ್ಚಾಗಿ ಕೇರಳ ಮೂಲದ ಯುವಕನಿಗೆ ಈ ಯುವತಿ ಹನಿಟ್ರ್ಯಾಪ್ ಮಾಡಿದ್ದಳು.
ಮಂಗಳೂರಿನ ರೇಷ್ಮಾ ಅಲಿಯಾಸ್ ನೀಮಾ ಹಾಗೂ ತಂಡವನ್ನು ಪೋಲಿಸರು ತಮ್ಮ ಖೆಡ್ಡಾಕ್ಕೆ ಬೀಳಿಸಿಕೊಂಡಿದ್ದಾರೆ.
ರೇಷ್ಮಾ ಯುವಕರನ್ನು ಫೇಸ್ ಬುಕ್ ಮೂಲಕ ಪರಿಚಯ ಮಾಡಿಕೊಂಡು ಇದುವರೆಗೂ 6 ಮಂದಿ ಹನಿ ಟ್ರ್ಯಾಪ್ ಮಾಡಿ ಸಾಕಷ್ಟು ಹಣ ಕಿತ್ತಿದ್ದಾಳೆ.
ಈಗ ಕೇರಳದ ಯುವಕನ ಪರಿಚಯ ಮಾಡಿಕೊಂಡಿದ್ದಾಳೆ. ಮಂಗಳೂರಿನ ಸೂರತ್ಕಲ್ ಗೆ ಆ ಯುವಕನನ್ನು ಕರೆಸಿಕೊಂಡು ಹನಿಟ್ರ್ಯಾಪ್ ಖೆಡ್ಡಾಗೆ ಬೀಳಿಸಿಕೊಂಡು ಆತನೊಂದಿಗೆ ದೈಹಿಕ ಸಂಪರ್ಕ ಬೆಳೆಸಿದ ವೇಳೆ ವಿಡಿಯೋ ಮತ್ತು ಪೋಟೋ ತೆಗೆದುಕೊಂಡಿದ್ದಾಳೆ.
ಈ ಕೃತ್ಯಕ್ಕೆ ಜೀನತ್, ಮೊಹಮ್ಮದ್ ಇಕ್ಬಾಲ್ ಮತ್ತು ಅಬ್ದುಲ್ ಖಾದರ್ ನಾಜಿಬ್ ಸಾಥ್ ನೀಡಿದರು.
ಜನವರು 17 ರಂದು ಮಂಗಳೂರಿಗೆ ಕರೆಸಿಕೊಂಡು ಬ್ರ್ಯಾಕ್ ಮೇಲ್ ಮಾಡಿದ್ದಾರೆ. ಹಣ ಕೊಡದ ಯುವಕನಿಗೆ ಚೆನ್ನಾಗಿ ಥಳಿಸಿದ್ದಾರೆ.
ಈ ಸಂಬಂಧ ಯುವಕ ಸೂರತ್ಕಲ್ ಪೋಲಿಸರಿಗೆ ದೂರು ನೀಡಿದ್ದಾನೆ.
ಪ್ರಕರಣ ದಾಖಲಿಸಿಕೊಂಡ ಪೋಲಿಸರು ನಾಲ್ವರನ್ನು ಬಂಧಿಸಿದ್ದಾರೆ.
ಈ ನಾಲ್ವರು ಸೇರಿ ಆರು ಮಂದಿಗೆ ಹನಿ ಟ್ರ್ಯಾಪ್ ಮಾಡಿದ್ದಾರೆ. ಈ ಎಲ್ಲಾ ಕೃತ್ಯಗಳು ಪೋಲಿಸರ ತನಿಖೆಯಿಂದ ಬಯಲಾಗಿದೆ.
ಸುರತ್ಕಲ್ ಪೋಲಿಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
- ಹೊರರಾಜ್ಯದ ಯುವತಿಯರನ್ನ ಕರೆಸಿ ಹೈಟೆಕ್ ವೇಶ್ಯಾವಾಟಿಕೆ ದಂಧೆ: ಆರೋಪಿ ಬಂಧನ
- ಬೆಂಗಳೂರಿನಲ್ಲಿ ಮಹಿಳೆಗೆ 30 ಲಕ್ಷ ರೂ. ವಂಚನೆ!
- ಎಪಿಗಾಮಿಯಾ ಸಹ-ಸಂಸ್ಥಾಪಕ ರೋಹನ್ ಮಿರ್ಚಂದಾನಿ ನಿಧನ
- ಮಾತೃವಾತ್ಸಲ್ಯದ ಗಣಿ, ಪ್ರೇಮಮಯಿ ಜಗನ್ಮಾತೆ ಶಾರದಾದೇವಿ
- ಜನವರಿ 23, 24, 25 ರಂದು ಅಂತರಾಷ್ಟ್ರೀಯ ಸಿರಿಧಾನ್ಯ ಮೇಳ ಜರುಗಲಿದೆ: ಎನ್ ಚಲುವರಾಯಸ್ವಾಮಿ
More Stories
ಹೊರರಾಜ್ಯದ ಯುವತಿಯರನ್ನ ಕರೆಸಿ ಹೈಟೆಕ್ ವೇಶ್ಯಾವಾಟಿಕೆ ದಂಧೆ: ಆರೋಪಿ ಬಂಧನ
ಬೆಂಗಳೂರಿನಲ್ಲಿ ಮಹಿಳೆಗೆ 30 ಲಕ್ಷ ರೂ. ವಂಚನೆ!
ಎಪಿಗಾಮಿಯಾ ಸಹ-ಸಂಸ್ಥಾಪಕ ರೋಹನ್ ಮಿರ್ಚಂದಾನಿ ನಿಧನ