December 19, 2024

Newsnap Kannada

The World at your finger tips!

yatnal

ಕರ್ನಾಟಕದಲ್ಲಿ 6 ಲಕ್ಷ ಎಕರೆ ವಕ್ಫ್‌ ಆಸ್ತಿಗೆ ಪರಿಗಣನೆ: ಬಿಜೆಪಿ ಶಾಸಕ ಯತ್ನಾಳ್‌ ಆರೋಪ

Spread the love

ಬೆಂಗಳೂರು: ಕರ್ನಾಟಕ ಸರ್ಕಾರ 6 ಲಕ್ಷ ಎಕರೆ ಭೂಮಿಯನ್ನು ವಕ್ಫ್‌ ಆಸ್ತಿಯಾಗಿ ಪರಿಗಣಿಸಲು ಮುಂದಾಗಿದೆ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌ ಗಂಭೀರ ಆರೋಪ ಮಾಡಿದ್ದಾರೆ.

ನಗರದಲ್ಲಿ ಮಾತನಾಡಿದ ಅವರು, “ವಕ್ಫ್‌ ಟ್ರಿಬ್ಯುನಲ್ ರೈತರು, ಮಠಗಳು ಸೇರಿದಂತೆ ಇತರರ ಮೇಲೆ ದೊಡ್ಡ ಅನ್ಯಾಯ. ಈ ಟ್ರಿಬ್ಯುನಲ್‌ ಒತ್ತಡವಾಗಿ ಪರಿಣಮಿಸಿದೆ, ಹಾಗಾಗಿ ಇದನ್ನು ರದ್ದುಪಡಿಸಬೇಕು. ನ್ಯಾಯಾಲಯದ ಮೂಲಕವೇ ಇಂತಹ ವಿಷಯಗಳಿಗೆ ಪರಿಹಾರ ಕಾಣಬೇಕಾಗಿದೆ,” ಎಂದು ಹೇಳಿದರು.

ಯತ್ನಾಳ್‌ ಅವರು, 2,700 ಎಕರೆ ಜಾಗವನ್ನು ಕಂದಾಯ ಇಲಾಖೆ ಖಬರ್‌ಸ್ತಾನಗಳಿಗೇ ನೀಡಲು ನಿರ್ಧರಿಸಿದೆ ಎಂದು ಆರೋಪಿಸಿದರು. ವಕ್ಫ್‌ಗೆ ಅನೇಕ ಜಾಗಗಳನ್ನು ಮೀಸಲು ಮಾಡಲು ಸರ್ಕಾರ ಪಟ್ಟಿ ಮಾಡಿಕೊಂಡಿದೆ ಎಂದು ಹೇಳಿ, “ಕರ್ನಾಟಕದಲ್ಲಿ 6 ಲಕ್ಷ ಎಕರೆ ವಕ್ಫ್‌ ಆಸ್ತಿ ಮಾಡಲು ಮುಂದಾಗಿದ್ದಾರೆ,” ಎಂದು ಕಿಡಿಕಾರಿದರು.

ನಿತೀಶ್ ಕುಮಾರ್ ಮತ್ತು ಚಂದ್ರಬಾಬು ನಾಯ್ಡು ಸೇರಿದಂತೆ ಕೆಲವು ನಾಯಕರು ದಂಗೆ ಎಬ್ಬಿಸುತ್ತಿದ್ದಾರೆ ಎಂದು ಆರೋಪಿಸಿ, ಈ ಬಗ್ಗೆ ಜಂಟಿ ಸಂಸದೀಯ ಸಮಿತಿಗೆ ವರದಿ ಸಲ್ಲಿಸಲು ಅಭಿಯಾನ ಮಾಡಲಾಗುತ್ತಿದೆ. “ವಕ್ಫ್‌ ಟ್ರಿಬ್ಯುನಲ್ ರದ್ದಾದರೆ ಅನೇಕ ಸಮಸ್ಯೆಗಳು ಪರಿಹಾರವಾಗುತ್ತವೆ. ಈ ಸಮಸ್ಯೆಗಳ ಕುರಿತು ಜನಜಾಗೃತಿ ಅಭಿಯಾನ ನಡೆಸಲಾಗುತ್ತಿದೆ,” ಎಂದು ಯತ್ನಾಳ್‌ ಹೇಳಿದರು.ಇದನ್ನು ಓದಿ –ದರ್ಶನ್‌ ಮಧ್ಯಂತರ ಜಾಮೀನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ನಲ್ಲಿ ಮೇಲ್ಮನವಿ ಅರ್ಜಿ ಸಲ್ಲಿಸಲು ತೀರ್ಮಾನ

ಅಧಿಕಾರಿಗಳಿಗೆ ಧಮ್ಕಿ ನೀಡುತ್ತ, ವಕ್ಫ್‌ ನೋಟಿಸ್‌ಗಳನ್ನು ಹಿಂದಕ್ಕೆ ಪಡೆಯಲು ಒತ್ತಡ ಹಾಕಲಾಗಿದೆ. “ಈ ವಿಚಾರದಲ್ಲಿ ಬಿಜೆಪಿ ಪಕ್ಷದಿಂದಲೇ ಹೋರಾಟ ಮುಂದುವರಿಸುತ್ತೇವೆ,” ಎಂದು ಯತ್ನಾಳ್‌ ಸ್ಪಷ್ಟಪಡಿಸಿದರು.

Copyright © All rights reserved Newsnap | Newsever by AF themes.
error: Content is protected !!