ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯಲ್ಲಿ ಮೇಜರ್ ಸರ್ಜರಿಯಾಗಿದೆ. 16 ಐಪಿಎಸ್ ಅಧಿಕಾರಿಗಳ ವರ್ಗಾವಣೆಯನ್ನು ಮಾಡಿ ರಾಜ್ಯ ಸರ್ಕಾರ ಆದೇಶವನ್ನು ಮಾಡಿದೆ.
- ಶ್ರೀನಾಥ್ ಮಹದೇವ ಜೋಶಿ- ಲೋಕಾಯುಕ್ತಾ SP
- ಶಾಂತರಾಜು- ಬೆಸ್ಕಾಂ
- ಸಿ.ಕೆ ಬಾಬಾ- ಆಗ್ನೇಯ ವಿಭಾಗ ಡಿಸಿಪಿ
- ಸಂಜೀವ್ ಪಾಟೀಲ್- ಬೆಳಗಾವಿ ಎಸ್ಪಿ
- ಕಲಾ ಕೃಷ್ಣಸ್ವಾಮಿ- ಪೂರ್ವ ಸಂಚಾರಿ ವಿಭಾಗ ಡಿಸಿಪಿ
- ಹರೀಶ್ ಪಾಂಡೆ- ಎಸಿಬಿ SP
- ಲಕ್ಷ್ಮಣ್ ನಿಂಬರಗಿ- ಬೆಂಗಳೂರು ಪಶ್ಚಿಮ ವಿಭಾಗ ಡಿಸಿಪಿ
- ನಾಗೇಶ್ ಡಿ.ಎಲ್.- ಚಿಕ್ಕಬಳ್ಳಾಪುರ SP,
- ಶ್ರೀನಿವಾಸ್ ಗೌಡ – ಕೇಂದ್ರ ವಿಭಾಗ ಡಿಸಿಪಿ
- ಸಿ.ಕೆ. ಮಿಥುನ್ ಕುಮಾರ್ – ಸಿಐಡಿ SP,
- ಪಿ ಕೃಷ್ಣಕಾಂತ್- ಬೆಂಗಳೂರು ದಕ್ಷಿಣ ವಿಭಾಗ ಡಿಸಿಪಿ
- ಹರಿರಾಂ ಶಂಕರ್- ಹಾಸನ SP
- ಜೈಪ್ರಕಾಶ್- ಬಾಗಲಕೋಟೆ SP
- ಶೋಭಾರಾಣಿ – ಎಸಿಬಿ SP
- ಶಿವಾಂಶು ರಾಜಪೂತ್ – ASP ಹುಮ್ನಾಬಾದ್ ಉಪ ವಿಭಾಗಕ್ಕೆ ವರ್ಗಾವಣೆಯನ್ನು ಮಾಡಿ ಆದೇಶಿಸಲಾಗಿದೆ.
ಕೇಂದ್ರ ವಿಭಾಗದ ಡಿಸಿಪಿಯಾಗಿದ್ದ ಎಂಎನ್ ಅನುಚೇತ್‌ರನ್ನು ವರ್ಗಾವಣೆ ಮಾಡಿ ಎರಡು ತಿಂಗಳು ಕಳೆದಿದ್ದರು ಆ ಜಾಗಕ್ಕೆ ಯಾರನ್ನು ವರ್ಗಾಯಿಸಿರಲಿಲ್ಲ. ಅಪರಾಧ ವಿಭಾಗದ ಡಿಸಿಪಿ ಶರಣಪ್ಪರವರನ್ನು ಪ್ರಭಾರ ಡಿಸಿಪಿಯನ್ನಾಗಿ ನೇಮಿಸಿತ್ತು. ಇದೀಗ ಕೇಂದ್ರ ವಿಭಾಗಕ್ಕೆ ಹಾಸನದಲ್ಲಿ ಎಸ್ಪಿಯಾಗಿದ್ದ ಶ್ರೀನಿವಾಸ್ ಗೌಡರನ್ನು ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಆದೇಶವನ್ನು ಮಾಡಿದೆ. ವಿಧಾನಸೌಧದ ಆವರಣದಲ್ಲೇ ಕೆಂಪೇಗೌಡ ಪ್ರತಿಮೆ ಸ್ಥಾಪನೆ: ಸಿಎಂ ಪ್ರಕಟ- ಮೂವರಿಗೆ ಪ್ರಶಸ್ತಿ ಪ್ರದಾನ
ಬೆಂಗಳೂರಿಗೆ ಮೂವರು ಹೊಸ DCP
ಬೆಂಗಳೂರಿನ ನಾಲ್ವರು ಡಿಸಿಪಿಗಳು ವರ್ಗಾವಣೆಯಾಗಿದ್ದಾರೆ. ಈ ಪೈಕಿ ಮೂವರು ಬೆಂಗಳೂರಿಗೆ ಹೊಸ ಐಪಿಎಸ್ ಅಧಿಕಾರಿಗಳಾಗಿದ್ದಾರೆ. ಬೆಂಗಳೂರು ಪಶ್ಚಿಮ ವಿಭಾಗಕ್ಕೆ ಸಂಜೀವ್ ಪಾಟೀಲ್ ಬದಲಿಗೆ ಲಕ್ಷ್ಮಣ್ ಹಿಬರಗಿ , ಬೆಂಗಳೂರು ದಕ್ಷಿಣ ವಿಭಾಗಕ್ಕೆ ಹರೀಶ್ ಪಾಂಡೆ ಬದಲಾಗಿ ಪಿ. ಕೃಷ್ಣಕಾಂತ್ ರನ್ನು, ಬೆಂಗಳೂರು ಆಗ್ನೇಯ ವಿಭಾಗಕ್ಕೆ ಶ್ರೀನಾಥ್ ಮಹದೇವ್ ಜೋಶಿ ಬದಲಾಗಿ ಸಿ.ಕೆ ಬಾಬರನ್ನು ನೇಮಕ ಮಾಡಲಾಗಿದೆ. ಇದರಲ್ಲಿ ಸಿ.ಕೆ ಬಾಬರವರು ಈ ಹಿಂದೆ ಈಶಾನ್ಯ ವಿಭಾಗದ ಡಿಸಿಪಿಯಾಗಿ ಕರ್ತವ್ಯ ನಿರ್ವಹಿಸಿದ್ದ ಅನುಭವವಿದೆ. ಕೇಂದ್ರ ವಿಭಾಗಕ್ಕೆ ಶ್ರೀನಿವಾಸ್ ಗೌಡರನ್ನು ವರ್ಗಾವಣೆರನ್ನು ವರ್ಗಾವಣೆ ಮಾಡಲಾಗಿದೆ.
More Stories
ರಾಜ್ಯದಲ್ಲಿ ಮುಂದಿನ 5 ದಿನ ಮಳೆಯ ಮುನ್ಸೂಚನೆ
10 ಸಾವಿರ ಕೋಟಿ ಕೈಗಾರಿಕೆ ಸ್ಥಾಪನೆ: ಪ್ರಸ್ತಾವನೆಗೆ ಉನ್ನತ ಮಟ್ಟದ ಸಮಿತಿ ಒಪ್ಪಿಗೆ
ಹೊರರಾಜ್ಯದ ಯುವತಿಯರನ್ನ ಕರೆಸಿ ಹೈಟೆಕ್ ವೇಶ್ಯಾವಾಟಿಕೆ ದಂಧೆ: ಆರೋಪಿ ಬಂಧನ