ವಿಧಾನಸಭೆಯಲ್ಲಿ ಧ್ವನಿಮತದ ಮೂಲಕ 2020ನೇ ಭೂಕಂದಾಯ ಮುಸೂದೆಯ ತಿದ್ದುಪಡಿಯನ್ನು ಅಂಗೀಕರಿಸಲಾಯ್ತು.
ಈ ವೇಳೆ ವಿಧೇಯಕ ಮಂಡಿಸಿ, ವಿಧಾನಸಭೆಯಲ್ಲಿ ಮಾತನಾಡಿದ ಕಂದಾಯ ಸಚಿವ ಆರ್. ಅಶೋಕ್ ‘ಅರಣ್ಯದಲ್ಲಿ ಮನೆ ಹಾಗೂ ಸಾಗುವಳಿ ಮಾಡಿಕೊಂಡಿರುವ ಜನರಿಗೆ ಅನುಕೂಲವಾಗುವ ಉದ್ದೇಶದಿಂದ ಅರಣ್ಯ ಇಲಾಖೆಯ 6.64 ಲಕ್ಷ ಹೆಕ್ಟೇರ್ ಪ್ರದೇಶವನ್ನು ಕಂದಾಯ ಇಲಾಖೆಗೆ ವರ್ಗಾಯಿಸಿಕೊಂಡು ಸಾಗುವಳಿ ನಡೆಸಲು ನೀಡಲು ತೀರ್ಮಾನಿಸಲಾಗಿದೆ’ ಎಂದು ಹೇಳಿದರು.
‘ಅನೇಕ ಜನ ರೈತರು ಅರಣ್ಯ ಭೂಮಿ ಬಳಸಿಕೊಂಡು ಕೃಷಿ ಹಾಗೂ ಇತೆರೆ ಕೆಲಸಗಳನ್ನು ಮಾಡುವ ತಮ್ಮ ಬದುಕು ಕಟ್ಟಿಕೊಂಡಿದ್ದಾರೆ. ಅಲ್ಲಿನ ಜನ, ರೈತರು, ಜನಪ್ರತಿನಿಧಿಗಳ ವಿನಂತಿಯ ಮೇರೆಗೆ ಇಂದು ಕೃಷಿಮಸೂದೆ ತಿದ್ದುಪಡಿ ತರಲಾಗುತ್ತಿದೆ’ ಎಂದರು.
ಇದೇ ವೇಳೆ ಬಗರ್ ಹುಕುಂ ಸಾಗುವಳಿದಾರರು ಅರ್ಜಿಸಲ್ಲಿಸಲು 2 ವರ್ಷ ಅವಧಿ ವಿಸ್ತರಣೆ ಮಾಡಿರುವದಾಗಿ ಅವರು ಹೇಳಿದರು.
More Stories
ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
Karnataka Budget 2025-26 : ಶಕ್ತಿ ಯೋಜನೆಗೆ 5,300 ಕೋಟಿ ಅನುದಾನ
ಪೊಲೀಸ್ ಅಧಿಕಾರಿಯ ಕಿರುಕುಳಕ್ಕೆ ಮನನೊಂದು ವ್ಯಕ್ತಿ ಆತ್ಮಹತ್ಯೆ ಆರೋಪ