5ನೇ ಬಾರಿಗೆ ಬಿ.ಶರತ್ ಸಿಎಟಿ ಅರ್ಜಿ ವಿಚಾರಣೆ ಮುಂದೂಡಿಕೆ : ಡಿ.ಸಿ ರೋಹಿಣಿಗೆ ರಿಲೀಫ್

Team Newsnap
1 Min Read

ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ನೇಮಕ ವಿಚಾರಕ್ಕೆ ಸಂಬಂಧಿಸಿದಂತೆ ಅವಧಿಗೂ ಮುನ್ನವೇ ತಮ್ಮನ್ನ ವರ್ಗಾವಣೆ ಮಾಡಿದ ಸರ್ಕಾರದ ನಿರ್ಧಾರ ಪ್ರಶ್ನಿಸಿ ಬಿ.ಶರತ್ ಸಲ್ಲಿಸಿದ್ದ ಅರ್ಜಿ ವಿಚಾರಣೆಯನ್ನು ಮತ್ತೆ ಸಿಎಟಿ ನವೆಂಬರ್ 10 ಕ್ಕೆ ಮುಂದೂಡಿದೆ.

ಇಂದು ವಿಚಾರಣೆ ನಡೆಸಿದ ಸಿಎಟಿ ವಾದ ಪ್ರತಿವಾದಗಳನ್ನು ಆಲಿಸಿ ವಿಚಾರಣೆಯನ್ನು ನವೆಂಬರ್ 10 ಕ್ಕೆ ಮುಂದೂಡಿತು. ಇದರಿಂದ ಡಿ.ಸಿ ರೋಹಿಣಿ ಸಿಂಧೂರಿಗೆ ಮತ್ತೆ ರಿಲೀಫ್ ಸಿಕ್ಕಂತಾಗಿದೆ.

rohini and sharat

ಅವಧಿಗೂ ಮುನ್ನವೇ ತಮ್ಮನ್ನು ವರ್ಗಾವಣೆ ಮಾಡಿದ ಸರ್ಕಾರದ ನಿರ್ಧಾರ ಪ್ರಶ್ನಿಸಿ ಬಿ.ಶರತ್ ಸಲ್ಲಿಸಿದ್ದ ಅರ್ಜಿ ವಿಚಾರಣೆಯನ್ನು ಸಿಎಟಿ ಈ ಹಿಂದೆ ಅಕ್ಟೋಬರ್ 23ಕ್ಕೆ ಮುಂದೂಡಿತ್ತು.

ಅರ್ಜಿದಾರರ ಪರ ವಕೀಲ, ಎ.ಎಸ್.ಪೊನ್ನಣ್ಣ ವಾದ ಮಂಡನೆ ಬಳಿಕ ಪ್ರತಿವಾದ ಮಂಡಿಸಲು ಎಜಿ ಮತ್ತೆ ಕಾಲಾವಕಾಶ ಕೋರಿದರು .ಈ ಹಿನ್ನೆಲೆ ಸಿಎಟಿ ಅರ್ಜಿ ವಿಚಾರಣೆಯನ್ನು ಅಕ್ಟೋಬರ್ 23 ಕ್ಕೆ ಮುಂದೂಡಿತ್ತು. ಮತ್ತೆ ಮರು ಕಾಲಾವಕಾಶ ಕೇಳಿದ ಹಿನ್ನೆಲೆಯಲ್ಲಿ ನವೆಂಬರ್ 3 ಕ್ಕೆ ಮುಂದೂಡಿಕೆಯಾಗಿತ್ತು. ಇದೀಗ ಮತ್ತೆ ಮರು ಕಾಲಾವಕಾಶ ಕೇಳಿದ ಹಿನ್ನೆಲೆಯಲ್ಲಿ ಐದನೇ ಬಾರಿಗೆ ಅರ್ಜಿ ವಿಚಾರಣೆ ಮುಂದೂಡಿಕೆಯಾಗಿದೆ.

Share This Article
Leave a comment