5G ನೆಟ್ವರ್ಕ್ ಹರಾಜಿಗೆ ಬುಧವಾರ ಕೇಂದ್ರ ಕ್ಯಾಬಿನೆಟ್ ಅಸ್ತು ಎಂದಿದೆ ಶೀಘ್ರದಲ್ಲೇ ದೇಶದಲ್ಲಿ 5G ನೆಟ್ವರ್ಕ್ ಸೇವೆಗಳು ಆರಂಭವಾಗುವ ಮುನ್ಸೂಚನೆ ಸಿಕ್ಕಿದೆ. ಇದು 4G ಗಿಂತ ಸುಮಾರು 10 ಪಟ್ಟು ವೇಗವಾಗಿರಲಿದೆ. ಟೆಲಿಕಾಂ ಸೇವಾ ಪೂರೈಕೆದಾರರಿಗೆ ವ್ಯಾಪಾರ ವೆಚ್ಚವನ್ನು ಕಡಿಮೆ ಮಾಡಲು 5G ನೆಟ್ವರ್ಕ್ ಸಹಾಯ ಮಾಡುತ್ತದೆ ಎಂದು ಹೇಳಲಾಗಿದೆ.
72 GHz ಗಿಂತ ಹೆಚ್ಚಿನ 5G ಸೇವೆಯನ್ನ 20 ವರ್ಷಗಳ ಅವಧಿಗೆ ಹರಾಜು ಮಾಡಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ನಡೆದ ಸಂಪುಟ ಸಭೆಯಲ್ಲಿ ದೂರಸಂಪರ್ಕ ಇಲಾಖೆಯು 5G ಸ್ಪೆಕ್ಟ್ರಮ್ ಹರಾಜು ಪ್ರಸ್ತಾಪಿಸಿತ್ತು.
. ಕೇಂದ್ರ ಸಂಪುಟದ ನಿರ್ಧಾರದಂತೆ ಹರಾಜು ಪ್ರಕ್ರಿಯೆ ಜುಲೈನಲ್ಲಿ ಶುರುವಾಗಲಿದೆ. ಒಟ್ಟು 72097.85 MHz ಸ್ಪೆಕ್ಟ್ರಮ್ ಅನ್ನು ಕೇಂದ್ರ ಸರ್ಕಾರ ಹರಾಜು ಮಾಡಲಿದೆ. ಜುಲೈ ಅಂತ್ಯದ ವೇಳೆಗೆ 5G ಸ್ಪೆಕ್ಟ್ರಂ ಹರಾಜು ಪ್ರಕ್ರಿಯೆ ಪೂರ್ಣಗೊಳ್ಳಲಿದೆ.
ಇದನ್ನು ಓದಿ – MGM ಕಂಪನಿ ಮೇಲೆ ಐಟಿ ದಾಳಿ; ಬೆಂಗಳೂರು ಸೇರಿ ಒಟ್ಟು 50 ಕಡೆ ಶೋಧ
ಯಾವ ಕಂಪನಿ ಪಾಲಾಗುತ್ತೆ..?
ಮೂರು ಪ್ರಮುಖ ಕಂಪನಿಗಳಾದ ವೊಡಾಫೋನ್ ಐಡಿಯಾ, ಭಾರ್ತಿ ಏರ್‌ಟೆಲ್ ಲಿಮಿಟೆಡ್ ಮತ್ತು ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಹರಾಜಿನಲ್ಲಿ ಭಾಗವಹಿಸುವ ನಿರೀಕ್ಷೆಯಿದೆ. ಯಶಸ್ವಿ ಬಿಡ್‌ದಾರರು 5G ಸ್ಪೆಕ್ಟ್ರಮ್ ಅನ್ನು 20 ವರ್ಷಕ್ಕೆ ಇಎಂಐ ಮೂಲಕ ಖರೀದಿಸಲಿದ್ದಾರೆ. 5G ಸೇವೆಯು ಸಂಪೂರ್ಣ ಇಕೋ ಸಿಸ್ಟಮ್ ಆಗಿರಲಿದೆ.
- ರಾಜ್ಯದಲ್ಲಿ ಮುಂದಿನ 5 ದಿನ ಮಳೆಯ ಮುನ್ಸೂಚನೆ
- 10 ಸಾವಿರ ಕೋಟಿ ಕೈಗಾರಿಕೆ ಸ್ಥಾಪನೆ: ಪ್ರಸ್ತಾವನೆಗೆ ಉನ್ನತ ಮಟ್ಟದ ಸಮಿತಿ ಒಪ್ಪಿಗೆ
- ನಾನೊಬ್ಬ ರೈತ (ರೈತ ದಿನಾಚರಣೆಯ ಪ್ರಯುಕ್ತ )
- ಹೊರರಾಜ್ಯದ ಯುವತಿಯರನ್ನ ಕರೆಸಿ ಹೈಟೆಕ್ ವೇಶ್ಯಾವಾಟಿಕೆ ದಂಧೆ: ಆರೋಪಿ ಬಂಧನ
- ಬೆಂಗಳೂರಿನಲ್ಲಿ ಮಹಿಳೆಗೆ 30 ಲಕ್ಷ ರೂ. ವಂಚನೆ!
More Stories
ರಾಜ್ಯದಲ್ಲಿ ಮುಂದಿನ 5 ದಿನ ಮಳೆಯ ಮುನ್ಸೂಚನೆ
10 ಸಾವಿರ ಕೋಟಿ ಕೈಗಾರಿಕೆ ಸ್ಥಾಪನೆ: ಪ್ರಸ್ತಾವನೆಗೆ ಉನ್ನತ ಮಟ್ಟದ ಸಮಿತಿ ಒಪ್ಪಿಗೆ
ನಾನೊಬ್ಬ ರೈತ (ರೈತ ದಿನಾಚರಣೆಯ ಪ್ರಯುಕ್ತ )