January 16, 2025

Newsnap Kannada

The World at your finger tips!

rekha police

ಉದ್ಯಮಿಯಿಂದ 5 ಲಕ್ಷಕ್ಕೆ ಬೇಡಿಕೆ: ಕ್ರೈಂ ಇನ್ಸ್​ಪೆಕ್ಟರ್ ರೇಣುಕಾ ಸೇರಿ ಮೂವರ ವಿರುದ್ಧ ಎಫ್ ಐಆರ್

Spread the love

ಉದ್ಯಮಿಯೊಬ್ಬರಿಂದ 5 ಲಕ್ಷ ರುಗೆ ಬೇಡಿಕೆ ಇಟ್ಟಿದ್ದ ಆರೋಪ ಮೇಲೆ ಕ್ರೈಂ ಇನ್ಸ್​ಪೆಕ್ಟರ್ ಸೇರಿ ಮೂವರ ವಿರುದ್ಧ ಎಫ್ ಐಆರ್ ದಾಖಲಿಸಲಾಗಿದೆ.

ಉದ್ಯಮಿ ಗೋಪಿನಾಥ್ ಎಂಬುವರಿಂದ 5 ಲಕ್ಷ ರುಗೆ ಡಿಮ್ಯಾಂಡ್ ಇಟ್ಟ ಆರೋಪದ ಮೇಲೆ ವೈಟ್ ಫೀಲ್ಡ್ ಕ್ರೈಂ ಇನ್​ಸ್ಪೆಕ್ಟರ್ ರೇಣುಕಾ, ಎಸ್ ಐ ಗಣೇಶ್ ಹಾಗೂ ಕಾನ್ಸ್ ಟೇಬಲ್ ಹೇಮಂತ್ ವಿರುದ್ಧ ಎಸಿಬಿಯಲ್ಲಿ ಎಫ್​​ ಐ ಆರ್​​ ದಾಖಲಾಗಿದೆ.

ಪ್ರಕರಣವೊಂದಕ್ಕೆ ಸಂಬಂಧಿಸಿ ಬಂಧಿಸಬಾರದು ಎಂದರೆ 10 ಲಕ್ಷ ಕೊಡಬೇಕು ಎಂದು ಬೇಡಿಕೆ ಇಟ್ಟಿದ್ದರು.‌

ಉದ್ಯಮಿ ಗೋಪಿನಾಥ್​​ರನ್ನು ಬ್ಯಾಂಕಿಗೆ ಕರೆದೊಯ್ದು ಬಲವಂತವಾಗಿ 5 ಲಕ್ಷ ರೂಪಾಯಿಗಳನ್ನು ಡ್ರಾ ಮಾಡಿಸಿ.. ಉಳಿದ 5 ಲಕ್ಷ ರೂಪಾಯಿಗೆ ಸಮಯ ನೀಡಿ ಕಿರುಕುಳ ನೀಡುತ್ತಿದ್ದರು ಎಂದು ಗೋಪಿನಾಥ್​​ ಎಸಿಬು ಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.

ಈ ದೂರಿನನ್ವಯ ದಾಳಿ ನಡೆಸಿದ್ದ ಎಸಿಬಿ ಅಧಿಕಾರಿಗಳು ಸದ್ಯ ರೇಣುಕಾ ಸೇರಿದಂತೆ ಪೊಲೀಸ್​​ ಸಿಬ್ಬಂದಿ ವಿರುದ್ಧ ಎಫ್ಐಆರ್ ದಾಖಲು ಮಾಡಿಕೊಂಡಿದ್ದಾರೆ.

Copyright © All rights reserved Newsnap | Newsever by AF themes.
error: Content is protected !!