50 ಸಾವಿರ ಲಂಚ ಸ್ವೀಕಾರ: ಎಸಿಬಿ‌ ಬಲೆಗೆ ತೋಟಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕ

Team Newsnap
1 Min Read

ಗುಂಡ್ಲುಪೇಟೆ ತೋಟಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕ ಶಿವಲಿಂಗಪ್ಪ 50 ಸಾವಿರ ಲಂಚ ಸ್ವೀಕಾರ ಮಾಡುತ್ತಿದ್ದ ವೇಳೆ ಎಸಿಬಿ (ಭ್ರಷ್ಟಾಚಾರ ನಿಗ್ರಹ ದಳ) ಬಲೆಗೆ ಬಿದ್ದಿದ್ದಾರೆ.

ಟಿಎಂಕೆಎಸ್‌ಐ ಯೋಜನೆಯಡಿ ಹನಿ ಮತ್ತು ತುಂತುರು ನೀರಾವರಿ ಉಪಕರಣ ಅಳವಡಿಕೆಗೆ ತೋಟಗಾರಿಕೆ ಇಲಾಖೆಯಿಂದ ಕಾರ್ಯಾದೇಶ ಹಾಗೂ ಮಂಜೂರಾತಿ ಪಡೆದಿದ್ದ 20 ರೈತರ ಜಮೀನಿಗಳಿಗೆ ಪಟ್ಟಣದ ಮಂಜು ಎಂಟರ್‌ಪ್ರೈಸಸ್‌ನಿಂದ ಪಂಪ್‌ಸೆಟ್‌ ಉಪಕರಣಗಳನ್ನು ಅಳವಡಿಸಲಾಗಿತ್ತು. ನೀರಾವರಿ ಉಪಕರಣಗಳ ಬಿಲ್‌ ಪಾವತಿಸಬೇಕಾದರೆ 1 ಲಕ್ಷ ರೂಪಾಯಿ ಲಂಚ ನೀಡಬೇಕು ಎಂದು ತೋಟಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕ ಶಿವಲಿಂಗಪ್ಪ ಅಂಗಡಿ ಮಾಲೀಕ ಮಂಜುನಾಥ್‌ ಅವರಲ್ಲಿ ಬೇಡಿಕೆ ಇಟ್ಟಿದ್ದರು.

ಈ ಹಿನ್ನೆಲೆಯಲ್ಲಿ ಮಂಜುನಾಥ್‌ ಎಸಿಬಿಗೆ ದೂರು ನೀಡಿದ ನಂತರ, ಅಧಿಕಾರಿ ಶಿವಲಿಂಗಪ್ಪ ಲಂಚ ಪಡೆಯುವ ವೇಳೆ ಭ್ರಷ್ಟಾಚಾರ ನಿಗ್ರಹ ದಳದ ಚಾಮರಾಜನಗರ ಡಿವೈಎಸ್ಪಿ ಸದಾನಂದ ಎ.ತಿಪ್ಪಣ್ಣನವರ, ಇನ್‌ಸ್ಪೆಕ್ಟರ್‌ಗಳಾದ ಕಿರಣ್‌ಕುಮಾರ್‌, ದೀಪಕ್‌ ಎಲ್ ದಾಳಿ ನಡೆಸಿ ಆರೋಪಿಯವನ್ನು ವಶಕ್ಕೆ ಪಡೆದಿದ್ದಾರೆ.
ಹಣದ ಸಮೇತ ಸಿಕ್ಕ ಅಧಿಕಾರಿ ವಿಚಾರಣೆ ನಡೆದಿದೆ.

saraswathi
Share This Article
Leave a comment