ಈ ತಿಂಗಳ ಅಂತ್ಯದ ವೇಳೆಗೆ ಸರ್ಕಾರಿ ನೌಕರರ ತುಟ್ಟಿಭತ್ಯೆ (ಡಿಎ) ಹೆಚ್ಚಿಸುವ ಸಾಧ್ಯತೆಯಿದೆ.
ಇದನ್ನು ಓದಿ -ಕಾಲ್ನಡಿಗೆಯಲ್ಲಿ ED ಕಚೇರಿಗೆ ತೆರಳಿದ ರಾಹುಲ್ ಗಾಂಧಿ
ಅಖಿಲ-ಭಾರತೀಯ ಗ್ರಾಹಕ ಬೆಲೆ ಸೂಚ್ಯಂಕ (ಎಐಸಿಪಿಐ) ಆಧಾರದ ಮೇಲೆ ಸರ್ಕಾರಿ ನೌಕರರ ಡಿಎಯನ್ನು ವರ್ಷಕ್ಕೆ ಎರಡು ಸಲ ಜನವರಿ ಮತ್ತು ಜುಲೈನಲ್ಲಿ ಪರಿಷ್ಕರಿಸಲಾಗುತ್ತದೆ.
ಈ ಬಾರಿ, ಎಐಸಿಪಿಐ 127 ಅಂಕಗಳ ಮೇಲಿದೆ, ಡಿಎ ಶೇ 5 ರಷ್ಟು ಹೆಚ್ಚಾಗಿ ಶೇಕಡ 39ಕ್ಕೆ ತಲುಪಬಹುದು
ಜನವರಿಯಲ್ಲಿ, 7 ನೇ ವೇತನ ಆಯೋಗದ ಅಡಿಯಲ್ಲಿ ಕೇಂದ್ರ ಸರ್ಕಾರವು ತನ್ನ ಉದ್ಯೋಗಿಗಳಿಗೆ ಹಿಂದಿನ ಶೇಕಡ 31 ರ ದರದಿಂದ ಶೇಕಡ 34 ಕ್ಕೆ ಏರಿಸಿತ್ತು.
ಏಪ್ರಿಲ್‌ನಲ್ಲಿ ಗ್ರಾಹಕ ಬೆಲೆ ಸೂಚ್ಯಂಕವನ್ನು ಆಧರಿಸಿದ ಚಿಲ್ಲರೆ ಹಣದುಬ್ಬರವು ಎಂಟು ವರ್ಷಗಳ ಗರಿಷ್ಠ ಶೇಕಡಾ 7.79 ಕ್ಕೆ ತಲುಪಿದೆ. ಅದಕ್ಕೂ ಮೊದಲು, ಜುಲೈ 2021 ರಲ್ಲಿ, ಕೇಂದ್ರ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರಿಗೆ ಕ್ರಮವಾಗಿ ಡಿಎ ಮತ್ತು ತುಟ್ಟಿಭತ್ಯೆ (ಡಿಆರ್) ಅನ್ನು ಕೇಂದ್ರವು ದೀರ್ಘ ವಿರಾಮದ ನಂತರ ಶೇಕಡ 17ರಿಂದ ಶೇಕಡ 28ಕ್ಕೆ ಹೆಚ್ಚಿಸಿತು.
2021ರ ಅಕ್ಟೋಬರ್ ನಲ್ಲಿ, ಕೇಂದ್ರ ಸರ್ಕಾರವು ಮತ್ತೊಮ್ಮೆ ಡಿಎಯನ್ನು ಶೇಕಡ 3 ಹೆಚ್ಚಿಸಿತು. ನಂತರ, 2021ರ ಜುಲೈನಿಂದ ಜಾರಿಗೆ ಬರುವಂತೆ ಕೇಂದ್ರ ಸರ್ಕಾರಿ ನೌಕರರಿಗೆ ಡಿಎಯನ್ನು ಶೇಕಡ 31ಕ್ಕೆ ಏರಿಸಿತು. ಇದರ ಜತೆಗೆ, ಡಿಎ ಮಟ್ಟವನ್ನು ಆಧರಿಸಿ ನಿರ್ಧರಿಸುವ ಇತರ 4 ಭತ್ಯೆಗಳು ಸಹ ಹೆಚ್ಚಾಗಬಹುದು ಎನ್ನಲಾಗುತ್ತಿದೆ.
ಮೂಲ ವೇತನಕ್ಕೆ ಅನುಪಾತವಾಗಿ ಡಿಎ ಇರುತ್ತದೆ. ಮಾಸಿಕ ಭವಿಷ್ಯ ನಿಧಿ (ಪಿಎಫ್), ಗ್ರಾಚ್ಯುಟಿ ಮೊತ್ತ, ಎಚ್‌ಆರ್‌ಎ ಹೆಚ್ಚಳಕ್ಕೆ ಕೂಡ ಸರ್ಕಾರ ಚಿಂತನೆ ನಡೆಸಿದೆ.
- ಎಪಿಗಾಮಿಯಾ ಸಹ-ಸಂಸ್ಥಾಪಕ ರೋಹನ್ ಮಿರ್ಚಂದಾನಿ ನಿಧನ
- ಮಾತೃವಾತ್ಸಲ್ಯದ ಗಣಿ, ಪ್ರೇಮಮಯಿ ಜಗನ್ಮಾತೆ ಶಾರದಾದೇವಿ
- ಜನವರಿ 23, 24, 25 ರಂದು ಅಂತರಾಷ್ಟ್ರೀಯ ಸಿರಿಧಾನ್ಯ ಮೇಳ ಜರುಗಲಿದೆ: ಎನ್ ಚಲುವರಾಯಸ್ವಾಮಿ
- ಓದಿನ ಮಹತ್ವ
- ಕುಂಭಮೇಳ ಪ್ರಯಾಣಿಕರಿಗೆ ಸುವಾರ್ತೆ: ಮೈಸೂರು-ಪ್ರಯಾಗ್ ರಾಜ್ ವಿಶೇಷ ರೈಲು ಸೇವೆ
- ಮಂಡ್ಯದಲ್ಲಿ ಭೀಕರ ಅಪಘಾತ: ಕಾರು-ಲಾರಿ ಡಿಕ್ಕಿಯಾಗಿ ಮೂವರು ವಿದ್ಯಾರ್ಥಿ ಸಾವು
More Stories
ಎಪಿಗಾಮಿಯಾ ಸಹ-ಸಂಸ್ಥಾಪಕ ರೋಹನ್ ಮಿರ್ಚಂದಾನಿ ನಿಧನ
ಮಾತೃವಾತ್ಸಲ್ಯದ ಗಣಿ, ಪ್ರೇಮಮಯಿ ಜಗನ್ಮಾತೆ ಶಾರದಾದೇವಿ
ಓದಿನ ಮಹತ್ವ