ರಾಜ್ಯದಲ್ಲಿ ಕೋವಿಡ್ 4ನೇ ಅಲೆ ಆರಂಭ – ಡಾ. ಮಂಜುನಾಥ್ ಎಚ್ಚರಿಕೆ

Team Newsnap
1 Min Read
Dr. Manjunath's tenure as Director of Jayadeva Hospital has been extended by 1 year ಜಯದೇವ ಆಸ್ಪತ್ರೆ ನಿರ್ದೇಶಕರಾಗಿ ಡಾ ಮಂಜುನಾಥ್‌ ಸೇವಾವಧಿ 1 ವರ್ಷ ವಿಸ್ತರಣೆ #Thenewsnap #latestnews #karnataka #kannadanews #Hospital #jaideva #Mandyanews #Mysuru

ರಾಜ್ಯದಲ್ಲಿ ಈಗಾಗಲೇ ಕೋವಿಡ್ 4ನೇ ಅಲೆ ಆರಂಭವಾಗಿದೆ ಮುಂದಿನ 4-5 ವಾರಗಳಲ್ಲಿ ಕೋವಿಡ್ ಪ್ರಕರಣ ಹೆಚ್ಚಾಗಲಿದೆ

ಈ ವಿಷಯವನ್ನು ಕೋವಿಡ್ ಟಾಸ್ಕ್‌ಫೋರ್ಸ್‌ ಸಮಿತಿ ಸದಸ್ಯ ಹಾಗೂ ಜಯದೇವ ಆಸ್ಪತ್ರೆ ನಿರ್ದೇಶಕ ಡಾ. ಸಿ.ಎನ್.ಮಂಜುನಾಥ್ ಬೆಂಗಳೂರಿನಲ್ಲಿ ಸುದ್ದಿಗಾರರ ಜೊತೆ ತಿಳಿಸಿ, ಭಾರತಕ್ಕೆ ಈಗಾಗಲೇ ಕೊರೊನಾ 4ನೇ ಅಲೆ ಬಂದಿದೆ ದೆಹಲಿ, ಮಹಾರಾಷ್ಟ್ರ, ಹರಿಯಾಣ ರಾಜ್ಯಗಳಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದೆ ಎಂದರು

ನಮ್ಮ ರಾಜ್ಯಕ್ಕೂ ಕೋವಿಡ್ 4ನೇ ಅಲೆ ಕಾಲಿಟ್ಟಿದೆ. ಮುಂದಿನ 4-5 ವಾರಗಳಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ಹೆಚ್ಚಾಗಲಿದೆ ಎಂದು ಎಚ್ಚರಿಸಿದ್ದಾರೆ. 

ಕೊರೊನಾ ರೂಪಾಂತರವಾಗೋದು ಅದರ ಸಹಜ ಗುಣ, ಸ್ವಭಾವ ಕೂಡ. ಈಗ ಪತ್ತೆಯಾಗಿರುವ BA2.10, BA2.12 ಹೊಸ ತಳಿಯೇನಲ್ಲ. ಇದು ಮೊದಲಿನಿಂದಲೂ ಕಾಲಕಾಲಕ್ಕೆ ಬದಲಾಗುತ್ತಿದೆ ಎಂದರು

ಕಳೆದೊಂದು ವಾರದಿಂದ ರಾಜ್ಯದಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದೆ. 40-50ರ ಆಸುಪಾಸಿನಲ್ಲಿದ್ದ ಪ್ರಕರಣಗಳು 100ರ ಗಡಿ ದಾಟುತ್ತಿವೆ. ರಾಜ್ಯಕ್ಕೆ ಈಗಾಗಲೇ BA2.10, BA2.12 ವೈರಸ್ ಕಾಲಿಟ್ಟಿರುವ ಸಾಧ್ಯತೆಗಳಿವೆ. ಈ ಉಪತಳಿಗಳ ಗುಣಲಕ್ಷಣಗಳನ್ನು ತಿಳಿಯಲು ಅಧ್ಯಯನಗಳು ನಡೆಯುತ್ತಿವೆ ಎಂದು ವಿವರಿಸಿದ್ದಾರೆ. 

ಕೋವಿಡ್ 2, 3ನೇ ಅಲೆಯಲ್ಲಿ ಯಾವ ರೀತಿ ಕೊರೊನಾ ರೋಗಲಕ್ಷಣಗಳಿರುತ್ತವೆ ಹಾಗೂ 4ನೇ ಅಲೆಯಲ್ಲೂ ಅದೇ ರೀತಿ ಇರಲಿದೆ. ಆಸ್ಪತ್ರೆಗೆ ದಾಖಲಾಗುವವರ ಸಂಖ್ಯೆ ಹಾಗೂ ಸಾವಿನ ಸಂಖ್ಯೆ ಕಡಿಮೆಯಿರಲಿದೆ.

ಆದರೆ ಶ್ವಾಸಕೋಶ, ಹೃದಯ ಸಂಬಂಧಿ ಕಾಯಿಲೆ ಪೀಡಿತರು, ಕ್ಯಾನ್ಸರ್ ರೊಗಿಗಳು, ನಿಶ್ಯಕ್ತಿಯುಳ್ಳವರು, ಡಯಾಲಿಸಿಸ್ ಚಿಕಿತ್ಸೆಗೆ ಒಳಗಾದವರು, ಅಸ್ತಮಾ ರೋಗಿಗಳು ಹಾಗೂ ಇತರೇ ಕಾಯಿಲೆ ಇರುವವರು ಎಚ್ಚರವಾಗಿರಬೇಕು ಎಂದು ಸಲಹೆ ನೀಡಿದ್ದಾರೆ.

  • ಡಾ. ಮಂಜುನಾಥ್
  • ಡಾ. ಮಂಜುನಾಥ್

Share This Article
Leave a comment