ಬಾಗಲಕೋಟೆ: ಜಿಲ್ಲೆಯ ಹುನಗುಂದ ತಾಲ್ಲೂಕಿನ ಧನ್ನೂರು ಎಂಬಲ್ಲಿ ಕ್ಯಾಂಟರ್ ಹಾಗೂ ಕಾರು ಡಿಕ್ಕಿಯಾಗಿ ನಾಲ್ವರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ನಡೆದಿದೆ.
ಲಕ್ಷ್ಮಣ ವಡ್ಡರ್ (55),ಬೈಲಪ್ಪ ಬಿರಾದಾರ್(45), ರಾಮಣ್ಣ ನಾಯಕಮಕ್ಕಳು (50) ಹಾಗೂ ಕಾರು ಚಾಲಕ ರಫಿಕ್ ಮುಲ್ಲಾ(25) ಸಾವಿಗೀಡಾದವರು.
ಮೃತರು ವಿಜಯಪುರ ಜಿಲ್ಲೆ ಬಿದರಕುಂದಿ ಗ್ರಾಮದವರಾಗಿದ್ದು,ಈ ಘಟನೆ ತಡರಾತ್ರಿ 2 ಗಂಟೆ ಸುಮಾರಿಗೆ ನಡೆದಿದೆ.
ಕಾರು ಮುದ್ದೇಬಿಹಾಳ ಕಡೆ ಹೊರಟಿತ್ತು. ಕ್ಯಾಂಟರ್ ಮುದ್ದೇಬಿಹಾಳದಿಂದ ಹುನಗುಂದ ಕಡೆ ಬರುತ್ತಿತ್ತು. ಈ ವೇಳೆ ಕಾರು ಚಾಲಕ ನಿದ್ರೆಗೆ ಜಾರಿದ್ದು, ಕ್ಯಾಂಟರ್‌ಗೆ ಡಿಕ್ಕಿ ಹೊಡೆದಿದ್ದಾನೆ.
ಕಾರು ನಜ್ಜುಗುಜ್ಜಾಗಿದ್ದ ಪರಿಣಾಮ ನಾಲ್ವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.ರಾಜ್ಯ ಸರ್ಕಾರದಿಂದ 318 ಪಿಡಿಒ ಅಮಾನತು
ಹುನಗುಂದ ಪೊಲೀಸರು ಘಟನೆ ನಡೆದ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
More Stories
ಮಂಡ್ಯದಲ್ಲಿ ಭೀಕರ ಅಪಘಾತ: ಕಾರು-ಲಾರಿ ಡಿಕ್ಕಿಯಾಗಿ ಮೂವರು ವಿದ್ಯಾರ್ಥಿ ಸಾವು
ಚುನಾವಣೆಗೂ ಮುನ್ನ ಕೇಜ್ರಿವಾಲ್ ಸಂಕಷ್ಟ – ಮದ್ಯ ನೀತಿ ಹಗರಣ ಪ್ರಕರಣದಲ್ಲಿ ಇಡಿಗೆ ರಾಜ್ಯಪಾಲರ ಅನುಮತಿ
ನೆಲಮಂಗಲ ಟೀ ಬೇಗೂರು ಬಳಿ ಭೀಕರ ಸರಣಿ ಅಪಘಾತ: ಒಂದೇ ಕುಟುಂಬದ 6 ಮಂದಿ ಸಾವು