ಬೆಂಗಳೂರಿನ ಎನ್‌ಸಿಬಿ (ನ್ಯಾರ್ಕೋಟಿಕ್ಸ್ ಕಂಟ್ರೋಲ್ ಬ್ಯುರೋ) ಯವರು ಡ್ರಗ್ಸ್ ದಂಧೆ ಮಾಡುತ್ತಿದ್ದ ನಾಲ್ವರನ್ನು ಬಂಧಿಸಿದ್ದಾರೆ. ಬಂಧಿತ ಆರೋಪಿಗಳು ಕೆ. ಪ್ರಮೋದ್, ಫಾಹೀಂ, ಎ.ತಹೀರ್, ಎಸ್.ಎಸ್. ಶೆಟ್ಟಿ ಎಂದು ಹೇಳಲಾಗಿದೆ.
ಫಾಹೀಂ ಎಂಬ ಪ್ರಮುಖ ಆರೋಪಿ ವೆಬ್ ಸಿರೀಸ್ ವೀಕ್ಷಣೆ ಮಾಡಿ, ಡಾರ್ಕ್‌ನೆಟ್‌ನಲ್ಲಿ ಹೇಗೆ ಡ್ರಗ್ಸ್ ಖರೀದಿ ಮಾಡಬಹುದೆಂದು ಅರಿತಿದ್ದ. ಡ್ರಗ್ಸ್ ಕೊಳ್ಳಲು ಆತ ಕ್ರಿಪ್ಟೋ ಕರೆನ್ಸಿಯನ್ನು ಬಳಸುತ್ತಿದ್ದ. ಮೊದಲಿಗೆ ಕ್ರಿಪ್ಟೋ ಕರೆನ್ಸಿಯನ್ನು ಕೊಂಡುಕೊಂಡು ಅದರ ಮೂಲಕ ಡ್ರಗ್ಸ್ ವ್ಯಾಪಾರ ನಡೆಸುತ್ತಿದ್ದ. ಈ ಮಾಹಿತಿ ತಿಳಿದ ಎನ್‌ಸಿಬಿಯವರು ಫಾಹೀಂ ಜೊತೆ ಆತನ ಮೂವರು ಸಹಚರರನ್ನು ಬಂಧಿಸಿದ್ದಾರೆ.
ಹೇಗೆ ಬಯಲಾಯಿತು ಪ್ರಕರಣ?
ಜುಲೈ 30, 2020 ರಂದು ನೆದರ್‌ಲ್ಯಾಂಡ್ ನಿಂದ ಭಾರತಕ್ಕೆ ಪಾರ್ಸೆಲ್ ಬಂದಿತ್ತು. ಆದರೆ ಪಾರ್ಸೆಲ್‌ನ ಮೇಲೆ ಸ್ವೀಕೃತಿದಾರರ ಯಾವುದೇ ಮಾಹಿತಿ ಇರಲಿಲ್ಲ. ಅನುಮಾನಗೊಂಡ ಅಧಿಕಾರಿಗಳು ಕೂಲಂಕುಶವಾಗಿ ಪರಿಶೀಲನೆ ನಡೆಸಿದಾಗ 750 ಎಂಡಿಎಂಎ ಡ್ರಗ್ಸ್‌ನ ಮಾತ್ರಗಳು ಅವಾಗಿದ್ದವು. ಅನಂತರ ಎನ್‌ಸಿಬಿ ಅಧಿಕಾರಿಗಳು ತಾಂತ್ರಿಕ ಮಾಹಿತಿಯ ಮೂಲಕ ತನಿಖೆ ನಡೆಸಿದಾಗ ಪಾರ್ಸೆಲ್ ಕೆ. ಪ್ರಮೋದ್ ಎಂಬ ವ್ಯಕ್ತಿಯ ಹೆಸರಿಗೆ ಬಂದಿದೆ ಎಂದು ತಿಳಿದಿದೆ. ಈತನ ಪತ್ತೆಗೆ ಜಾಲ ಹರಡಿ ಆತನನ್ನು ವಿಚಾರಣೆ ಮಾಡಿದಾಗ ಪ್ರಮುಖ ಆರೋಪಿ ಫಾಹೀಂ ಸೇರಿ ನಾಲ್ವರನ್ನೂ ಎನ್‌ಸಿಬಿ ಅಧಿಕಾರಿಗಳು ಬಂಧಿಸಿದ್ದಾರೆ.
ಆರೋಪಿಗಳು ವಿದೇಶದಿಂದ ಡ್ರಗ್ಸ್ ಆಮದು ಮಾಡಿಕೊಂಡು ಉಡುಪಿಯ ಮಣಿಪಾಲ್ ವಿವಿ, ಎನ್‌ಎಂಎಎಂಐಟಿ ಕಾಲೇಜು, ಚೆನ್ನೈನ ಎಸ್‌ಆರ್‌ಎಂ ವಿಶ್ವವಿದ್ಯಾಲಯ , ಮಣಿಪಾಲದ ಕ್ಲಬ್‌ಗಳು ಸೇರಿದಂತೆ ದೇಶದ ವಿವಿಧ ಭಾಗಗಳಿಗೆ ಡ್ರಗ್ಸ್ ರವಾನೆ ಮಾಡುತ್ತಿದ್ದರು ಎಂದು ತಿಳಿದು ಬಂದಿದೆ.
More Stories
ಡ್ರಗ್ಸ್ ಕೇಸ್ ಹೆಸರಿನಲ್ಲಿ ಟೆಕಿಗೆ 40 ಲಕ್ಷ ವಂಚನೆ
ಮೈಸೂರು BEML ಅಧಿಕಾರಿ ಆತ್ಮಹತ್ಯೆ ಗೆ ಶರಣು
MUDA ಹಗರಣ: 15,085 ನಿವೇಶನಗಳು ಪೆಂಡಿಂಗ್, ಹಲವಾರು ಅಕ್ರಮ ಬಯಲು