February 21, 2026

Newsnap Kannada

The World at your finger tips!

hiriyuru lari

ಹಿರಿಯೂರು ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಭೀಕರ ಅಪಘಾತ : 4 ಮಂದಿ ಸಾವು – 10 ಮಂದಿಗೆ ಗಾಯ

Spread the love

ಲಾರಿ,ಕ್ಯಾಂಟರ್ ಹಾಗೂ ಕಾರಿನ ನಡುವೆ ಅಪಘಾತ ಸಂಭವಿಸಿ 4 ಮಂದಿ ಸಾವನ್ನಪ್ಪಿದ್ದಾರೆ. 10 ಹೆಚ್ಚು ಮಂದಿ ಗಾಯಗೊಂಡ ಘಟನೆ ಹಿರಿಯೂರು ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಭವಿಸಿದೆ

ಗದಗ ಜಿಲ್ಲೆಯ ಹುಯಿಗೊಳ ಗ್ರಾಮದ ಹನುಮಪ್ಪ ಕಳಕಪ್ಪ ಹುನಗುಂದಿ (30), ಗುರಪ್ಪಾ ಹುಗರ್ (26), ರಮೇಶ್ (28), ಪ್ರಶಾಂತ್ ಹಟ್ಟಿ (36) ಮೃತರು ಎಂದು ಗುರುತಿಸಲಾಗಿದೆ.

ಇನ್ನು ಗಂಭೀರ ಗಾಯವಾಗಿ ಗಾಯಗೊಂಡಿರುವವರನ್ನು ಸ್ಥಳೀಯ ಹಿರಿಯೂರು ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಈರುಳ್ಳಿ ತುಂಬಿದ ಲಾರಿ ಹಾಗೂ ಕ್ಯಾಂಟರ್ ನಡುವೆ ಮೊದಲು ಅಪಘಾತ ಸಂಭವಿಸಿದೆ, ಬಳಿಕ ಚಲಿಸುತ್ತಿದ್ದ ಕಾರಿಗೆ ನಿಯಂತ್ರಣ ತಪ್ಪಿ ಲಾರಿ ಡಿಕ್ಕಿ ಹೊಡೆದಿದೆ. ಅಪಘಾತದ ರಭಸಕ್ಕೆ ಎರಡು ವಾಹನಗಳು ಪಲ್ಟಿಯಾಗಿದೆ.

ಸ್ಥಳಕ್ಕೆ ಹಿರಿಯೂರು ಪೊಲೀಸರು ಭೇಟಿ ಪರಿಶೀಲನೆ ನಡೆಸಿದ್ದಾರೆ.

ಸ್ಥಳಕ್ಕೆ ಚಿತ್ರದುರ್ಗ ಎಸ್​​​ಪಿ ಜಿ. ರಾಧಿಕಾ ಅವರು ಕೂಡ ಭೇಟಿ ನೀಡಿದರು

ಲಾರಿಯಲ್ಲಿ ತುಂಬಿದ್ದ ಲಕ್ಷಾಂತರ ಮೌಲ್ಯದ ಈರುಳ್ಳಿ ರಸ್ತೆಯಲ್ಲಿ ಚೆಲ್ಲಾಪಿಲ್ಲಿಯಾಗಿದ್ದು, ಪಲ್ಟಿಯಾದ ವಾಹನಗಳನ್ನು ಪೊಲೀಸರು ಕ್ರೇನ್ ಮೂಲಕ ರಸ್ತೆಯಿಂದ ತೆರವು ಮಾಡಿ ಸಂಚಾರಕ್ಕೆ ಅವಕಾಶ ನೀಡಿದ್ದಾರೆ.

error: Content is protected !!