ಭಾರತ, ಜಪಾನ್, ಅಮೇರಿಕಾ ಮತ್ತು ಆಸ್ಟ್ರೇಲಿಯಾಗಳ ವಿದೇಶಾಂಗ ಮಂತ್ರಿಗಳ ಗುಂಪು ಚೀನಾದ ವಿರುದ್ದ ಆಕ್ರಮಣ ಮಾಡುವ ಯೋಜನೆ ರೂಪಿಸಲು ಜಪಾನ್‌ನಲ್ಲಿ ಸಭೆ ಸೇರಿದ್ದಾರೆ.
ಕ್ವಾಡ್ ಎಂದೇ ಕರೆಯಲಾಗುವ ಇಂಡೋ-ಫೆಸಿಪಿಕ್ ರಾಷ್ಟ್ರಗಳ ವಿದೇಶಾಂಗ ಮಂತ್ರಿಗಳಾದ ಅಮೆರಿಕ ವಿದೇಶಾಂಗ ಕಾರ್ಯದರ್ಶಿ ಮೈಕ್ ಪೊಂಪಿಯೊ, ಆಸ್ಟ್ರೇಲಿಯಾದ ವಿದೇಶಾಂಗ ಸಚಿವ ಮಾರಿಸ್ ಪೇನ್, ಭಾರತದ ವಿದೇಶಾಂಗ ಸಚಿವ ಸುಬ್ರಹ್ಮಣ್ಯಂ ಜೈಶಂಕರ್ ಮತ್ತು ಅವರ ಜಪಾನಿನ ಸಹವರ್ತಿ ತೋಷಿಮಿಟ್ಸು ಮೊಟೆಗಿಯವರ ಗುಂಪು ಕೊರೊನಾ ಸೋಂಕು ಪ್ರಾರಂಭವಾದಾಗಿನಿಂದ ಸಭೆ ನಡೆಸಿರಲಿಲ್ಲ. ಈಗ ಜಪಾನ್‌ನ ಟೋಕಿಯೋದಲ್ಲಿ ಮಾತುಕತೆಗಾಗಿ ಒಟ್ಟುಗೂಡಿದ್ದಾರೆ.
ಸಭೆಯ ಕುರಿತು ಮಾತನಾಡಿರುವ ಜಪಾನ್‌ನ ಹೊಸ ಪ್ರಧಾನಿ ಯೋಶಿಹೈಡ್ ಸುಗಾ, ‘ಜಗತ್ತು ಎದುರಿಸುತ್ತಿರುವ ಕೊರೋನಾ ಸೊಂಕಿಗಿಂತಲೂ ಇಂಡೋ ಫೆಸಿಫಿಕ್‌ಗಳ ಭಯವನ್ನು ಹೋಗಲಾಡಿಸಲು ಆದ್ಯತೆ ನೀಡಬೇಕಾಗಿದೆ’ ಎಂದರು.
More Stories
ರಾಜ್ಯ ಸರ್ಕಾರದಿಂದ 7 ಐಪಿಎಸ್ ಅಧಿಕಾರಿಗಳ ವರ್ಗಾವಣೆ
ಆಯೋಧ್ಯೆ ರಾಮಮಂದಿರಕ್ಕೆ ಸ್ಫೋಟದ ಬೆದರಿಕೆ: ಆರ್ಡಿಎಕ್ಸ್ ಬಳಸಿ ಧ್ವಂಸಗೊಳಿಸುವ ಎಚ್ಚರಿಕೆ
ವಿಧಾನಸಭೆ ಉಪಚುನಾವಣೆ: ನ. 13 ರಂದು ರಾಜ್ಯ ಸರ್ಕಾರದಿಂದ ವೇತನ ಸಹಿತ ರಜೆ ಘೋಷಣೆ