December 19, 2024

Newsnap Kannada

The World at your finger tips!

spin1

ಸ್ಪಿನ್​ ದಾಳಿಗೆ ತತ್ತರಿಸಿದ ವಿಂಡೀಸ್​​​, 4-1ರಲ್ಲಿ ಭಾರತಕ್ಕೆ ಸರಣಿ – 88 ರನ್ ಗಳ ಜಯ

Spread the love

ಅಂತಿಮ ಟಿ20 ಪಂದ್ಯದಲ್ಲೂ ವೆಸ್ಟ್​ ಇಂಡೀಸ್​​​​ ವಿರುದ್ಧ ನಿನ್ನೆಯೂ ಟೀಮ್​ ಇಂಡಿಯಾ ಜಯಭೇರಿ ಬಾರಿಸಿದೆ. 88 ರನ್​​​ಗಳಿಂದ ಗೆಲವು ಸಾಧಿಸಿದ ಭಾರತ, ಸರಣಿಯನ್ನು 4-1ರಲ್ಲಿ ವಶಪಡಿಸಿಕೊಂಡಿದೆ.

ರೋಹಿತ್​ ಅಲಭ್ಯತೆಯಲ್ಲಿ ತಂಡವನ್ನು ಮುನ್ನಡೆಸಿದ ಹಾರ್ದಿಕ್​, ಮೊದಲು ಬ್ಯಾಟಿಂಗ್​ ನಡೆಸಿದರು 4 ಬದಲಾವಣೆಗಳೊಂದಿಗೆ ಕಣಕ್ಕಿಳಿದ ಭಾರತ, ಶ್ರೇಯಸ್​ ಅಯ್ಯರ್​ರ ಭರ್ಜರಿ ಆಟದ ನೆರವಿನಿಂದ 20 ಓವರ್​​​ಗಳಲ್ಲಿ 7 ವಿಕೆಟ್​ ನಷ್ಟಕ್ಕೆ 188 ರನ್ ಕಲೆ ಹಾಕ್ತು. ಬಳಿಕ ಚೇಸ್​ ಮಾಡಿದ ವಿಂಡೀಸ್​ಗೆ ಭಾರತದ ಸ್ಪಿನ್ನರ್​​ಗಳು​ ಶಾಕ್ ಮುಟ್ಟಿಸಿದರು

ಅಕ್ಷರ್ ಪಟೇಲ್​​, ಕುಲ್ದೀಪ್​​​ ಯಾದವ್​​, ರವಿ ಬಿಷ್ಣೋಯ್ ಸ್ಪಿನ್​​ ದಾಳಿಗೆ ಕೆರಿಬಿಯನ್ನರು ತತ್ತರಿಸಿದ್ರು. ಹೆಟ್ಮೆಯರ್​ ಅರ್ಧಶತಕದ​ ಹೋರಾಟ ನಡೆಸಿದರೂ ಯಾವುದೇ ಪ್ರಯೋಜನವಾಗಲಿಲ್ಲ. ಅಂತಿಮವಾಗಿ ವಿಂಡೀಸ್​​​ 15.4 ಓವರ್​​ಗಳಲ್ಲಿ 100 ರನ್​ಗಳಿಗೆ ಆಲೌಟ್​​​​ ಆಯ್ತು.

Copyright © All rights reserved Newsnap | Newsever by AF themes.
error: Content is protected !!