ಪಿಯುಸಿ ಪಾಸಾದ ಅಭ್ಯರ್ಥಿಗಳಿಗೆ ನಾನ್-ಟೆಕ್ನಿಕಲ್ ಪಾಪ್ಯುಲರ್ ಕೆಟಗರಿ (NTPC) ಅಡಿಯಲ್ಲಿ ರೈಲ್ವೆ ನೇಮಕಾತಿ ಮಂಡಳಿಯು (RRB) 3445 ಬಂಪರ್ ಹುದ್ದೆಗಳನ್ನು ಬಿಡುಗಡೆ ಮಾಡಿದೆ. ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅಂತಿಮ ದಿನಾಂಕ ಅಕ್ಟೋಬರ್ 20, 2024 ಆಗಿದೆ.
ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್indianrailways.gov.inಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದು. ಸೆಪ್ಟೆಂಬರ್ 21, 2024 ರಂದು ಪ್ರಕ್ರಿಯೆ ಆರಂಭವಾಗಿದ್ದು, ಆಸಕ್ತರು ಅ. 20ರೊಳಗೆ ಅರ್ಜಿ ಸಲ್ಲಿಸಬೇಕು. ಅರ್ಜಿ ಶುಲ್ಕವನ್ನು ಕೂಡಾ ಇದೇ ದಿನದೊಳಗೆ ಪಾವತಿಸಬೇಕು. ಹುದ್ದೆಗಳ ವಿವರ ಹಾಗೂ ಅರ್ಜಿ ಪ್ರಕ್ರಿಯೆಯ ಬಗ್ಗೆ ಮಾಹಿತಿ ಇಂತಿದೆ:
ಆರ್‌ಆರ್ಬಿ ಎನ್ಟಿಪಿಸಿ 10+2 ನೇಮಕಾತಿ: ಹುದ್ದೆಗಳ ವಿವರ
ಈ ನೇಮಕಾತಿ ಮೂಲಕ ನಾನ್-ಟೆಕ್ನಿಕಲ್ ಪಾಪ್ಯುಲರ್ ಕೆಟಗರಿ (ಆರ್‌ಆರ್ಬಿ ಎನ್ಟಿಪಿಸಿ) ಅಡಿಯಲ್ಲಿ ಕೆಳಗಿನ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತದೆ:
- ಕಮರ್ಷಿಯಲ್ ಕಮ್ ಟಿಕೆಟ್ ಕ್ಲರ್ಕ್: 2022 ಹುದ್ದೆಗಳು
- ಟ್ರೈನ್ ಕ್ಲರ್ಕ್: 72 ಹುದ್ದೆಗಳು
- ಅಕೌಂಟ್ಸ್ ಕ್ಲರ್ಕ್ ಕಮ್ ಟೈಪಿಸ್ಟ್: 361 ಹುದ್ದೆಗಳು
- ಜೂನಿಯರ್ ಕ್ಲರ್ಕ್ ಕಮ್ ಟೈಪಿಸ್ಟ್: 990 ಹುದ್ದೆಗಳು
ಒಟ್ಟು: 3445 ಹುದ್ದೆಗಳು
ಅರ್ಜಿ ಸಲ್ಲಿಸುವ ವಿಧಾನ:
- ಅಧಿಕೃತ ವೆಬ್‌ಸೈಟ್ – indianrailways.gov.in ಗೆ ಭೇಟಿ ನೀಡಿ.
- ನೇಮಕಾತಿ ವಿಭಾಗಕ್ಕೆ ಹೋಗಿ, NTPC ವರ್ಗವನ್ನು ಆಯ್ಕೆ ಮಾಡಿ.
- ಅಲ್ಲಿ ‘ಆರ್‌ಆರ್ಬಿ ಎನ್ಟಿಪಿಸಿ ಅಂಡರ್‌ಗ್ರಾಜುಯೇಟ್ ಲೆವೆಲ್ ನೇಮಕಾತಿ 2024’ ಲಿಂಕ್ ಕ್ಲಿಕ್ ಮಾಡಿ.
- ನೋಂದಣಿ ಲಿಂಕ್‌ಗೆ ಹೋಗಿ, ಅಗತ್ಯ ಮಾಹಿತಿಗಳನ್ನು ನೀಡಿ ನೋಂದಾಯಿಸಿಕೊಳ್ಳಿ.
- ಅರ್ಜಿ ನಮೂನೆಯನ್ನು ಭರ್ತಿ ಮಾಡಿ, ಶುಲ್ಕ ಪಾವತಿಸಿ.
ಅರ್ಜಿ ಶುಲ್ಕ:
- ಸಾಮಾನ್ಯ, OBC, EWS: ₹500
- SC/ST, ಮಹಿಳಾ, ಅಂಗವಿಕಲ: ₹250
ಅರ್ಜಿ ಸಲ್ಲಿಸಲು ಅರ್ಹತೆ:
- ಕಮರ್ಷಿಯಲ್ ಕಮ್ ಟಿಕೆಟ್ ಕ್ಲರ್ಕ್ ಮತ್ತು ಟ್ರೈನ್ ಕ್ಲರ್ಕ್ ಹುದ್ದೆಗಳಿಗೆ: 12ನೇ ತರಗತಿ ಪಾಸಾಗಿರಬೇಕು.
- ಅಕೌಂಟ್ಸ್ ಕ್ಲರ್ಕ್ ಮತ್ತು ಜೂನಿಯರ್ ಕ್ಲರ್ಕ್ ಹುದ್ದೆಗಳಿಗೆ: 12ನೇ ತರಗತಿ ಪಾಸಾದವರಿಗೆ ಹಿಂದಿ ಅಥವಾ ಇಂಗ್ಲಿಷ್ ಟೈಪಿಂಗ್ ಸ್ಪೀಡ್ ಅಗತ್ಯ.ಇದನ್ನು ಓದಿ –ಕರ್ನಾಟಕದ 3 ವಿಧಾನಸಭಾ ಕ್ಷೇತ್ರಗಳು, ಮಹಾರಾಷ್ಟ್ರ, ಜಾರ್ಖಂಡ್ ಚುನಾವಣಾ ದಿನಾಂಕ ಘೋಷಣೆ
ವಯೋಮಿತಿ:18 ರಿಂದ 33 ವರ್ಷ.
More Stories
ದೇವತೆಗಳ ಆರಾಧನೆಗೆ ಮೀಸಲಾದ ದೇವಮಾಸ ಮಾರ್ಗಶಿರಮಾಸ
ಬೊಲೆರೋ ಡಿಕ್ಕಿಯಿಂದ ಐವರು ಸ್ಥಳದಲ್ಲೇ ಸಾವನ್ನಪ್ಪಿದ ದಾರುಣ ಘಟನೆ
ಗೃಹಲಕ್ಷ್ಮಿ ಯೋಜನೆ ಸ್ಥಗಿತ ಮಾಡುವ ಪ್ರಶ್ನೆಯೇ ಇಲ್ಲ: ಸಿಎಂ ಸಿದ್ದರಾಮಯ್ಯ