ರಾಜ್ಯದ 216 ಬರಪೀಡಿತ ತಾಲೂಕುಗಳಿಗೆ 324 ಕೋಟಿ ರು ರಿಲೀಸ್

Team Newsnap
2 Min Read
  • ಕೇಂದ್ರದಿಂದ ನಯಾ ಪೈಸೆ ನೆರವಿಲ್ಲ

ಬೆಂಗಳೂರು :
ಕೊನೆಗೂ ರಾಜ್ಯದ 31 ಜಿಲ್ಲೆಗಳ ಬರಪೀಡಿತ ತಾಲೂಕುಗಳಲ್ಲಿನ ಪರಿಹಾರ ಕಾರ್ಯಗಳಿಗೆ ರಾಜ್ಯ ಸರ್ಕಾರ ರಾಜ್ಯ ವಿಪತ್ತು ನಿರ್ವಹಣಾ ನಿಧಿಯಿಂದ (ಎಸ್‌ಡಿಆರ್‌ಎಫ್) 324 ಕೋಟಿ ರೂಪಾಯಿ ಬಿಡುಗಡೆ ಮಾಡಿದೆ.

ಈ ಬಾರಿ 235 ತಾಲೂಕುಗಳ ಪೈಕಿ 216 ತಾಲೂಕುಗಳು ಬರ ಪೀಡಿತ ಎಂದು ಈ ಹಿಂದೆ ರಾಜ್ಯ ಸರ್ಕಾರ ಘೋಷಣೆ ಮಾಡಿತ್ತು. ಅಲ್ಲದೆ, ಕೇಂದ್ರ ಸರ್ಕಾರದ ಬಳಿ ಬರ ಪರಿಹಾರಕ್ಕೆ 17 ಸಾವಿರ ಕೋಟಿ ರೂ. ಪರಿಹಾರ ನೀಡುವಂತೆಯೂ ಮನವಿ ಮಾಡಿದೆ.

ಆದರೆ, ಕೇಂದ್ರ ಸರ್ಕಾರ ಈವರೆಗೂ ಒಂದೂ ರೂಪಾಯಿ ಅನುದಾನ ಬಿಡುಗಡೆ ಮಾಡಿಲ್ಲ ಎಂದು ಸರ್ಕಾರ ಕೇಂದ್ರದ ವಿರುದ್ದ ವಾಗ್ದಾಳಿ ನಡೆಸಿದೆ.

ಜೂನ್‌ನಲ್ಲಿ ರಾಜ್ಯದಲ್ಲಿ ಶೇ.56ರಷ್ಟು ಮಳೆ ಕೊರತೆಯಾಗಿದ್ದು, ಜುಲೈನಲ್ಲಿ ಶೇ.29 ಹಾಗೂ ಆಗಸ್ಟ್‌ನಲ್ಲಿ ಶೇ.73ರಷ್ಟು ಕೊರತೆಯಾಗಿದೆ. ಕರ್ನಾಟಕದಲ್ಲಿ ಕಳೆದ 125 ವರ್ಷಗಳಲ್ಲೇ ಅತ್ಯಂತ ಕಡಿಮೆ ಮಳೆಯಾಗಿದೆ.

ಈ ಬೆನ್ನಲ್ಲೇ ರಾಜ್ಯ ಸರ್ಕಾರ ಬರ ಪರಿಹಾರವಾಗಿ 324 ಕೋಟಿ ರೂ. ಅನುದಾನ ಬಿಡುಗಡೆ ಮಾಡಿ ಆದೇಶ ಹೊರಡಿಸಿದೆ.

ಯಾವ ಜಿಲ್ಲೆಗೆ ಎಷ್ಟು ಹಣ ? :

ಬೆಂಗಳೂರು ನಗರ-7.50 ಕೋಟಿ ರು

ಬೆಂಗಳೂರು ಗ್ರಾಮಾಂತರ-6 ಕೋಟಿ ರು
ರಾಮನಗರ-7.50 ಕೋಟಿ ರು

ಕೋಲಾರ-9 ಕೋಟಿ ರು

ಚಿಕ್ಕಬಳ್ಳಾಪುರ-9 ಕೋಟಿ ರು

ತುಮಕೂರು-15 ಕೋಟಿ ರು

ಚಿತ್ರದುರ್ಗ-9 ಕೋಟಿ ರು

ದಾವಣಗೆರೆ-9 ಕೋಟಿ ರು

ಚಾಮರಾಜನಗರ-7.50 ಕೋಟಿ ರು

ಮೈಸೂರು-13.5 ಕೋಟಿ ರು

ಮಂಡ್ಯ-10.5 ಕೋಟಿ ರು

ಬಳ್ಳಾರಿ-7.50 ಕೋಟಿ ರು

ಕೊಪ್ಪಳ-10.50 ಕೋಟಿ ರು

ರಾಯಚೂರು-9 ಕೋಟಿ ರು

ಕಲಬುರಗಿ-16.50 ಕೋಟಿ ರು

ಬೀದರ್-4.50 ಕೋಟಿ ರು

ಬೆಳಗಾವಿ-22.50 ಕೋಟಿ ರು

ಬಾಗಲಕೋಟೆ-13.50 ಕೋಟಿ ರು

ವಿಜಯಪುರ-18 ಕೋಟಿ ರು

ಗದಗ-10.50 ಕೋಟಿ ರು

ಹಾವೇರಿ-12 ಕೋಟಿ ರು

ಧಾರವಾಡ-12 ಕೋಟಿ ರು

ಶಿವಮೊಗ್ಗ-10.50 ಕೋಟಿ ರು

ಹಾಸನ-12 ಕೋಟಿ ರು

ಚಿಕ್ಕಮಗಳೂರು-12 ಕೋಟಿ ರು

ಕೊಡಗು-7.50 ಕೋಟಿ ರು

ದಕ್ಷಿಣ ಕನ್ನಡ-3 ಕೋಟಿ ರು

ಉಡುಪಿ-4.50 ಕೋಟಿ ರು

ಉತ್ತರ ಕನ್ನಡ-16.50 ಕೋಟಿ ರು

ಯಾದಗಿರಿ-9 ಕೋಟಿ ರು

ವಿಜಯನಗರ ಜಿಲ್ಲೆಗೆ 9 ಕೋಟಿ ರು

ಒಟ್ಟು 324 ಕೋಟಿ ರೂ.ಗಳನ್ನು ಬಿಡುಗಡೆ ಮಾಡಲಾಗಿದೆ.

Share This Article
Leave a comment