December 23, 2024

Newsnap Kannada

The World at your finger tips!

krs

KRS ಹಿನ್ನೀರಿನಲ್ಲಿ ಆಟವಾಡಲು ಹೋಗಿ ಮೂವರು ಜಲ ಸಮಾಧಿ

Spread the love

ಶ್ರೀರಂಗಪಟ್ಟಣ : ನೀರಿನಲ್ಲಿ ಆಟವಾಡುವ ವೇಳೆ ನೀರಿನಲ್ಲಿ ಮುಳುಗಿ ಮೂವರು ಸಾವನ್ನಪ್ಪಿದ ಘಟನೆ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ KRS ಡ್ಯಾಂನ ಹಿನ್ನೀರಿನಲ್ಲಿ ಭಾನುವಾರ ಜರುಗಿದೆ.

ಹರೀಶ್, ನಂಜುಂಡ ಹಾಗೂ ಜ್ಯೋತಿ ಮೃತ ದುರ್ದೈವಿಗಳು. ಈ ಮೂವರು ಮೈಸೂರಿನ ಟ್ರಸ್ಟ್‌ವೊಂದರ ಸಿಬ್ಬಂದಿಯಾಗಿದ್ದಾರೆ .

ರಜೆ ಹಿನ್ನೆಲೆ 25 ಮಂದಿ ಸಿಬ್ಬಂದಿಯೊಂದಿಗೆ ಪ್ರವಾಸಕ್ಕೆಂದು ಕೆಆರ್‌ಎಸ್‌ಗೆ ಬಂದಿದ್ದರು. ಹಿನ್ನೀರಿನಲ್ಲಿ ಆಟವಾಡುತ್ತಿದ್ದ ಸಂದರ್ಭ ನೀರಿನಲ್ಲಿ ಮುಳುಗಿ ಮೂವರು ಮೃತಪಟ್ಟಿದ್ದಾರೆ .

ಘಟನೆಯ ಬಳಿಕ ಪೊಲೀಸರು ಹಾಗೂ ಅಗ್ನಿ ಶಾಮಕ ಸಿಬ್ಬಂದಿಯಿಂದ ಮೃತದೇಹ ಮೇಲೆತ್ತುವ ಕಾರ್ಯ ನಡೆಯುತ್ತಿದೆ.ಲಾಳನಕೆರೆಯಲ್ಲಿ ಕಾಡಾನೆ ತುಳಿತಕ್ಕೆ ಕಾರ್ಮಿಕಮಹಿಳೆ ಬಲಿ: ಭಯ ಭೀತರಾದ ಗ್ರಾಮಸ್ಥರು

ಮೂವರ ಪೈಕಿ ಇಬ್ಬರ ಮೃತದೇಹ ಪತ್ತೆಯಾಗಿದ್ದು, ಮತ್ತೊಬ್ಬನ ಮೃತದೇಹಕ್ಕಾಗಿ ಶೋಧಕಾರ್ಯ ಮುಂದುವರೆದಿದೆ .

Copyright © All rights reserved Newsnap | Newsever by AF themes.
error: Content is protected !!