‘ಒಂದು ದೇಶ, ಒಂದು ಚುನಾವಣೆ’ಗಾಗಿ ಕೇಂದ್ರ ಸರ್ಕಾರ 3 ಮಸೂದೆಗಳನ್ನು ಮಂಡಿಸಲು ಸಿದ್ಧ

Team Newsnap
1 Min Read

ನವದೆಹಲಿ: ನರೇಂದ್ರ ಮೋದಿ ಸರ್ಕಾರವು ‘ಒಂದು ದೇಶ-ಒಂದು ಚುನಾವಣೆ’ ಯೋಜನೆಯನ್ನು ಜಾರಿಗೆ ತರಲು ಕ್ರಮಗಳನ್ನು ತೆಗೆದುಕೊಂಡಿದ್ದು, ಈ ಉದ್ದೇಶಕ್ಕೆ ಸಂಬಂಧಿಸಿದ ಮೂರು ಮಸೂದೆಗಳನ್ನು ಮಂಡಿಸಲು ನಿರ್ಧರಿಸಿದೆ.

ಕೇಂದ್ರ ಸರ್ಕಾರವು ‘ಒಂದು ದೇಶ-ಒಂದು ಚುನಾವಣೆ’ ಕಾರ್ಯಚರಣೆಯ ನೆರವಿಗೆ ಬರುವಂತೆ, ಸಂವಿಧಾನದ ತಿದ್ದುಪಡಿ ಮಾಡಬೇಕಾಗಿರುವ ಎರಡು ಮಸೂದೆಗಳನ್ನು ಒಳಗೊಂಡಂತೆ ಒಟ್ಟಾರೆ ಮೂರು ಮಸೂದೆಗಳನ್ನು ತರುತ್ತಿದೆ. ಇದಕ್ಕಾಗಿ, ಮಾಜಿ ರಾಷ್ಟ್ರಪತಿ ರಾಮನಾಥ ಕೋವಿಂದ್ ನೇತೃತ್ವದ ಸಮಿತಿಯ ಶಿಫಾರಸುಗಳಿಗೆ ಸರ್ಕಾರಿ ಒಪ್ಪಿಗಿಯನ್ನು ಪಡೆದಿದೆ.

ಕೋವಿಂದ್ ಸಮಿತಿಯು ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳಿಗೆ ಏಕಕಾಲದಲ್ಲಿ ಚುನಾವಣೆಗಳನ್ನು ನಡೆಸಲು ಶಿಫಾರಸು ಮಾಡಿದ್ದು, 100 ದಿನಗಳಲ್ಲಿ ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ನಡೆಸುವ ಸುಗಮ ಮಾರ್ಗವನ್ನು ಸೂಚಿಸಿದೆ.

ಈ ಯೋಜನೆಯು 2029ರೊಳಗೆ ಜಾರಿಗೆ ಬರಬೇಕಾದರೆ, 17 ರಾಜ್ಯಗಳಲ್ಲಿ ಅಸೆಂಬ್ಲಿಗಳ ಅಧಿಕಾರಾವಧಿ ಮೂರು ವರ್ಷಕ್ಕಿಂತ ಕಡಿಮೆ ಇರುವ ಸಂದರ್ಭವಿದೆ. ಸರ್ಕಾರವು 15 ತಿದ್ದುಪಡುವಗಳನ್ನು ಸಂವಿಧಾನಕ್ಕೆ ಸೇರಿಸಲು ಶಿಫಾರಸು ಮಾಡಿದೆ.

ಮಸರುದೆಯ ಮುಖ್ಯ ಅಂಶಗಳು:

  1. ಏಕಕಾಲಕ್ಕೆ ಚುನಾವಣೆ: ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳ ಚುನಾವಣೆಗಳನ್ನು ಒಂದೇ ಕಾಲದಲ್ಲಿ ನಡೆಸಲು ಸಂಬಂಧಿಸಿದ ತಿದ್ದುಪಡಿ.
  2. ರಾಜ್ಯಗಳ ಒಪ್ಪಿಗೆ: ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ನಡೆಸಲು ರಾಜ್ಯಗಳಲ್ಲಿ ಕನಿಷ್ಠ 50% ಒಪ್ಪಿಗೆ ಅಗತ್ಯ.
  3. ಕೇಂದ್ರಾಡಳಿತ ಪ್ರದೇಶಗಳ ವ್ಯವಸ್ಥೆ: ಪುದುಚೇರಿ, ದೆಹಲಿ ಮತ್ತು ಜಮ್ಮು-ಕಾಶ್ಮೀರದ ವಿಧಾನಸಭೆಗಳನ್ನು ಇತರ ರಾಜ್ಯಗಳ ವಿಧಾನಸಭೆಗಳ ಕಾಲಾವಧಿಯೊಡನೆ ಸಮೀಕರಿಸುವ ಬದಲು.

ಇದನ್ನು ಓದಿ – KSRTC ಬಸ್ ಕಂಟೈನರ್ ಗೆ ಡಿಕ್ಕಿಯಾಗಿ 20 ಕ್ಕೂ ಹೆಚ್ಚು ಜನರ ಸ್ಥಿತಿ ಗಂಭೀರ

ಈ ಮಸೂದೆಯ ಅಂಗೀಕಾರಕ್ಕೆ ತೀವ್ರ ರಾಜಕೀಯ ಚರ್ಚೆಗಳು ನಡೆಯುವ ನಿರೀಕ್ಷೆ ಇದೆ, ಏಕೆಂದರೆ ವಿಪಕ್ಷಗಳು ಮತ್ತು ‘ತಟಸ್ಥ’ ಪಕ್ಷಗಳು ಇದನ್ನು ವಿರೋಧಿಸುತ್ತಿವೆ.

Share This Article
Leave a comment