ರೈತರ ಪ್ರತಿ ಲೀಟರ್ ಹಾಲಿಗೆ 2 ರೂಪಾಯಿ ಇಳಿಕೆ ಮಾಡಿ ಮಂಡ್ಯ ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟದಿಂದ ಆದೇಶ ಹೊರ ಬಿದ್ದಿದೆ
ಮಂಡ್ಯ ಜಿಲ್ಲೆಯ ಹೈನುಗಾರಿಕೆ ಮೇಲೆ ಕರೊನಾ ನೆಪದಲ್ಲಿ ರೈತರಿಗೆ ಶಾಕ್ ಕೊಟ್ಟ ಮನ್ಮುಲ್. ದುಬಾರಿ ದುನಿಯಾ ನಡುವೆ ರೈತರಿಗೆ ಬರೆ ಎಳೆದಿದೆ
ಒಕ್ಕೂಟದಿಂದ ಆದೇಶದಂತೆ 26.90 ರೂ.ನಿಂದ 24.90 ರೂಗೆ ಇಳಿಕೆಯಾದ ಲೀಟರ್ ಹಾಲು. ಒಕ್ಕೂಟಕ್ಕೆ ನಷ್ಟ ತಪ್ಪಿಸಲು ಬೆಲೆ ಇಳಿಕೆ ತೀರ್ಮಾನ.
ಕರೊನಾ ಬಳಿಕ ಹಾಲು ಹಾಗೂ ಹಾಲಿನ ಉತ್ಪನ್ನ ಮಾರಾಟ ಕುಸಿತ. ನಗರ ವಾಸಿಗಳು ಹಳ್ಳಿಗಳಿಗೆ ವಲಸೆಯಾಗಿ ಹೈನುಗಾರಿಕೆ ತೊಡಗಿಸಿಕೊಂಡಿರುವ ಹಿನ್ನೆಲೆ. ನಿರೀಕ್ಷೆಗಿಂತಲೂ ಹಾಲು ಉತ್ಪಾದನೆ ಹೆಚ್ಚಳವಾಗಿದೆ. ಮನ್ಮುಲ್ ಗೆ ನಷ್ಟವಾಗುತ್ತಿದೆ ಎಂದು ಆಡಳಿತ ಮಂಡಳಿ ಹೇಳಿಕೊಂಡಿದೆ
ಸೆಪ್ಟೆಂಬರ್ ಅಂತ್ಯಕ್ಕೆ ಮನ್ಮುಲ್‌ಗೆ 33.12 ಕೋಟಿ ನಷ್ಟ ಉಂಟಾಗಿದೆ. ಹೀಗಾಗಿ 2 ರೂಪಾಯಿ ಹಾಲಿನ ಬೆಲೆ ಕಡಿತ ಮಾಡಲಾಗಿದೆ ಎಂದು ಮನ್‌ಮುಲ್ ಆಡಳಿತ ಮಂಡಳಿ ಹೇಳಿದೆ
More Stories
ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
Karnataka Budget 2025-26 : ಶಕ್ತಿ ಯೋಜನೆಗೆ 5,300 ಕೋಟಿ ಅನುದಾನ
ಪೊಲೀಸ್ ಅಧಿಕಾರಿಯ ಕಿರುಕುಳಕ್ಕೆ ಮನನೊಂದು ವ್ಯಕ್ತಿ ಆತ್ಮಹತ್ಯೆ ಆರೋಪ