January 15, 2025

Newsnap Kannada

The World at your finger tips!

4 husband

ಹೆಂಡ್ತಿ ಇಲ್ಲ ಅಂತ 2ನೇ ಮದುವೆ: ಈಕೆಗೆ ಇವನು ನಾಲ್ಕನೇ ಗಂಡ ! ಆದರೂ ಆತ ಮತ್ತೊಬ್ಬಳಿಗೆ ಹುಡುಕಾಟ

Spread the love

ಹೆಂಡತಿ ಇಲ್ಲ ಎಂದು ಎರಡನೇ ಮದುವೆಯಾದ ವರನಿಗೆ ನಾಲ್ಕು ಮದುವೆಯಾದ ವಧು ಸಿಕ್ಕದ್ದಾಳೆ.

ಈ ಘಟನೆ ನೆಟ್ಟಕೇರನಹಳ್ಳಿ ಗ್ರಾಮದಲ್ಲಿ ನಡೆದಿದೆ.ವಧು ಎಂದು ಹೇಳಿ ನಾಲ್ಕನೇ ಬಾರಿ ಹಸೆಮಣೆ ಏರಿದೆ ಮಹಿಳೆಯನ್ನು ಷಡಕ್ಷರಿ ವರಿಸಿದ್ದಾನೆ.

ಈತ ಮೂಲತಃ ತಾಲೂಕಿನ ಬೀಕನಹಳ್ಳಿಯವನು. ಇವನಿಗೆ ಒಂದು ಮದುವೆಯಾಗಿದ್ದು, ಆಕೆ ಇವನೊಂದಿಗಿಲ್ಲ. ಹಾಗಾಗಿ ಅಣ್ಣನ ಒತ್ತಾಯದ ಮೇರೆಗೆ ಅವನೇ ನೋಡಿದ ವಧುವನ್ನು ಮದುವೆಯಾಗಲು ಒಪ್ಪಿಕೊಂಡಿದ್ದಾನೆ. ಆದರೆ ಇಲ್ಲಿರುವ ಟ್ವಿಸ್ಟ್ ಎಂದರೆ ಆಕೆಗೆ ಅಗಲೇ 3 ಬಾರಿ ಮದುವೆಯಾಗಿದ್ದು, ಈತ ನಾಲ್ಕನೆಯಾವನಾಗಿದ್ದಾನೆ.

ಹೆಂಡತಿ ಬಿಟ್ಟು ಹೋದಾಗಲೇ ಸಾಯಬೇಕು ಅಂದುಕೊಂಡಿದ್ದ ಷಡಕ್ಷರಿಗೆ ಅಣ್ಣ ಹಾಸನ ಜಿಲ್ಲೆ ಬೇಲೂರು ತಾಲೂಕಿನ ರಾಮಚಂದ್ರಾಪುರದ ಉಷಾ ಜೊತೆ ಮದುವೆ ಮಾಡಿಸಿದ್ದನು. ಷಡಕ್ಷರಿ ಲಿಂಗಾಯಿತಿ ಜಾತಿಗೆ ಸೇರಿದವನು. ಆದರೆ ಉಷಾ ಮೂಲತಃ ಒಕ್ಕಲಿಗಳಾದಳೂ ಜಾತಿ-ಕುಲ-ಗೋತ್ರವನ್ನು ಮುಚ್ಚಿಟ್ಟು ಮದುವೆಯಾಗಿದ್ದಾಳೆ. ನಾನು ನಾಲ್ಕನೇ ಬಾರಿ ಹಸೆಮಣೆ ಏರುತ್ತಿದ್ದೇನೆ ಎಂದೂ ಸಹ ಹೇಳಿಲ್ಲ.

ಫಸ್ಟ್. ಗಂಡ ಹಗರೆ ರುದ್ರೇಶ್, ಎರಡನೇಯವ ದುದ್ದ ರವಿ, ಮೂರನೇಯವ ಹಾಸನದ ಜಯರಾಮ್, ನಾಲ್ಕನೆಯವನು ಕಾಫಿನಾಡಿನ ಷಡಕ್ಷರಿ.

ಅಂದು ಅಣ್ಣ ಹೇಳಿದ ಅಂತ ಕಣ್ಮುಚ್ಚಿಕಂಡು ತಾಳಿ ಕಟ್ಟಿದ ಷಡಕ್ಷರಿ ಇಂದು ಕಣ್ಣು-ಬಾಯಿ ಬಿಡುವಂತಾಗಿದೆ. ಕಳೆದೊಂದು ವಾರದ ಉಷಾಳ ಹಳೇ ಹೆಜ್ಜೆ ಗುರುತುಗಳು ತಿಳಿದ ಬಳಿಕ ಪ್ರಶ್ನೆ ಮಾಡಿದ್ದಕ್ಕೆ ಮನೆ ಬಿಟ್ಟು ಹೋಗಿದ್ದಾಳೆ. ಆದರೆ ಆಕೆ ಹೋಗುವಾಗ ಸುಮ್ಮನೇ ಹೋಗಿಲ್ಲ, ಮನೆಯಲ್ಲಿದ್ದ ಎರಡೂವರೆ ಲಕ್ಷ ಹಣ, ತಾಳಿ ಸೇರಿದಂತೆ ಒಡವೆ ಸಮೇತ ಎಸ್ಕೇಪ್ ಆಗಿದ್ದಾಳೆ. ಫೋನ್ ಮಾಡಿದರೆ ನಾಟ್ ರೀಚಬಲ್. ಇದೀಗ ಷಡಕ್ಷರಿ ಮತ್ತೆ ನನ್ನ ಹೆಂಡತಿ ಬೇಕು ಎಂದು ಹುಡುಕಾಡ್ತಿದ್ದಾನೆ.

Copyright © All rights reserved Newsnap | Newsever by AF themes.
error: Content is protected !!