ದ್ವಿತೀಯ ಪಿಯುಸಿ ಪರೀಕ್ಷೆ-2 ಫಲಿತಾಂಶ ಪ್ರಕಟ : ಬಾಲಕಿಯರೇ ಮೇಲುಗೈ

Team Newsnap
1 Min Read

ಬೆಂಗಳೂರು: ಇಂದು ಮಧ್ಯಾಹ್ನ 3 ಗಂಟೆಗೆ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ , ದ್ವಿತೀಯ ಪಿಯುಸಿ ಪರೀಕ್ಷೆ-2 ಫಲಿತಾಂಶ ಪ್ರಕಟಿಸಿದೆ.

ದ್ವಿತೀಯ ಪಿಯುಸಿ ಪರೀಕ್ಷೆ-2 ದಿನಾಂಕ 29-04-2024ರಿಂದ 16-05-2024ರವರೆಗೆ ಒಟ್ಟು 301 ಪರೀಕ್ಷಾ ಕೇಂದ್ರಗಳಲ್ಲಿ ನಡೆಸಲಾಗಿತ್ತು.

ಉತ್ತರ ಪತ್ರಿಕೆಗಳ ಮೌಲ್ಯ ಮಾಪನಕಾರ್ಯವು ಒಟ್ಟು 28 ಮೌಲ್ಯಮಾಪನ ಶಿಬಿರಗಳಲ್ಲಿ ದಿನಾಂಕ 15-05-2024ರಿಂದ 18-05-2024ರವರೆಗೆ 7875 ಮೌಲ್ಯ ಮಾಪಕರಿಂದ ನಡೆಸಲಾಗಿದೆ.

ಫಲಿತಾಂಶದ ವಿವರ:

ಒಟ್ಟು 1,48,942 ಮಂದಿ ಪರೀಕ್ಷೆಗೆ ಹಾಜರಗಿದ್ದು , ಇದರಲ್ಲಿ 52,505 ಮಂದಿ ಪಾಸ್‌ ಆಗಿದ್ದಾರೆ. 26,496 ( 31.31%) ಮಂದಿ ಬಾಲಕರು ಹಾಗೂ 26009( 40.44%) ಬಾಲಕಿಯರು ತೇರ್ಗಡೆ ಹೊಂದಿದ್ದಾರೆ. ಈ ಮೂಲಕ 35.25% ಫಲಿತಾಂಶ ಬಂದಿದೆ.ಮೈಸೂರಿನಲ್ಲಿ ಕಲುಷಿತ ನೀರು ಸೇವಿಸಿ ಯುವಕ ಸಾವು : 40 ಕ್ಕೂ ಹೆಚ್ಚು ಮಂದಿ ಅಸ್ವಸ್ಥ

ವಿದ್ಯಾರ್ಥಿಗಳು ಫಲಿತಾಂಶವನ್ನು https://karresults.nic.in ಜಾಲತಾಣಕ್ಕೆ ಭೇಟಿ ನೀಡಿ ವೀಕ್ಷಿಸಬಹುದಾಗಿದೆ.

Share This Article
Leave a comment