2022-23 ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶ ಹೊರ ಬಿದ್ದಿದೆ. ಈ ಬಾರಿ ಶೇ. 74.64 ಫಲಿತಾಂಶ ಬಂದಿದೆ. ಕಳೆದ ಬಾರಿ 61.88 ಫಲಿತಾಂಶ ಬಂದಿತ್ತು ಎಂದು ಪಿಯು ಬೋರ್ಡ್ ಅಧ್ಯಕ್ಷ ಡಾ.ರಾಮಚಂದ್ರನ್ ತಿಳಿಸಿದರು.
ಸುದ್ದಿಗಾರರ ಜೊತೆ ಮಾತನಾಡಿದ ರಾಮಚಂದ್ರನ್ ಮಾರ್ಚ್ 09 ರಿಂದ ಮಾರ್ಚ್ 29ರವರೆಗೆ ನಡೆದ ಪಿಯುಸಿ ಪರೀಕ್ಷೆಯಲ್ಲಿ ಈ ಬಾರಿ ವಿದ್ಯಾರ್ಥಿಗಳು-3,63,698, ವಿದ್ಯಾರ್ಥಿನಿಯರು- 3,62,497 ಸೇರಿ ಒಟ್ಟು 7,26,195 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದಾರೆ. ಈ ಪೈಕಿ ಹೊಸಬರು 6.29 ಲಕ್ಷ ವಿದ್ಯಾರ್ಥಿಗಳು, ಖಾಸಗಿ 25,847 ವಿದ್ಯಾರ್ಥಿಗಳು, ಪುನರಾವರ್ತಿತ 70,589 ವಿದ್ಯಾರ್ಥಿಗಳು, ಕಲಾ ವಿಭಾಗ 2,34,815 ವಿದ್ಯಾರ್ಥಿಗಳು, ವಾಣಿಜ್ಯ ವಿಭಾಗ 2,47,260 ವಿದ್ಯಾರ್ಥಿಗಳು, ವಿಜ್ಞಾನ ವಿಭಾಗ 2,44,120 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದಾರೆ.
ದಕ್ಷಿಣ ಕನ್ನಡ ಪ್ರಥಮ – ಯಾದಗಿರಿ ಕೊನೆಯ ಸ್ಥಾನ
ಈ ಬಾರಿ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆ ಪ್ರಥಮ ಸ್ಥಾನ ಪಡೆದಿದೆ ಉಡುಪಿ ಜಿಲ್ಲೆಗೆ 2ನೇ ಸ್ಥಾನ ಲಭಿಸಿದೆ. ಕೊಡಗು 3, ಉತ್ತರ ಕನ್ನಡ 4, ಯಾದಗಿರಿ ಕೊನೆಯ ಸ್ಥಾನದಲ್ಲಿದೆ.
ಈ ಪರೀಕ್ಷೆಯಲ್ಲಿ ಒಟ್ಟು 5,24,209 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಕಲಾ ವಿಭಾಗದಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳ ಸಂಖ್ಯೆ 1,34,876. ಕಲಾ ವಿಭಾಗದಲ್ಲಿ ಶೇಕಡಾ 61.22ರಷ್ಟು ಫಲಿತಾಂಶ ಬಂದಿದೆ. ಒಟ್ಟು 61 ಕೇಂದ್ರದಲ್ಲಿ ಮೌಲ್ಯಮಾಪನ ಮಾಡಲಾಗಿದೆ. ಅಧಿಕೃತ ವೆಬ್‌ಸೈಟ್ karresults.nic.in ನಲ್ಲಿ ಫಲಿತಾಂಶ ದೊರೆಯುತ್ತದೆ.
- ಅಂಗನವಾಡಿಗೆ ತೆರಳಿದ್ದ 3 ವರ್ಷದ ಬಾಲಕಿಗೆ ಹಾವು ಕಚ್ಚಿ ದಾರುಣ ಸಾವು
- ಇನ್ಫೋಸಿಸ್ ಕ್ಯಾಂಪಸ್ನಲ್ಲಿ ಚಿರತೆ ಸಂಚಾರ: ಸಿಬ್ಬಂದಿಗೆ ವರ್ಕ್ ಫ್ರಮ್ ಹೋಮ್ ಸೂಚನೆ
- ಅಪ್ಪನ ಅಕ್ಕರೆ ಮತ್ತು ತ್ಯಾಗ: ಮಗನ ನೆನಪಿನಲ್ಲಿ ಉಳಿದ ಅನನ್ಯ ಕಥೆ
- ಚಾಮರಾಜನಗರ ಬಂದ್: ಬಸ್ಗಳಿಲ್ಲದೆ ವಿದ್ಯಾರ್ಥಿಗಳ ಪರದಾಟ
- ಹೊಸ ವರ್ಷದ ಹೊಸ್ತಿಲಿನಲ್ಲಿ… ನವ ಆಶಯಗಳ ತೇರನೆಳೆಯೋಣ ಬನ್ನಿ
- “ನಮ್ಮ ಜೀವನದ ಯಜಮಾನರು ನಾವೇ “
- ಮೈಸೂರಲ್ಲಿ ಹೊಸ ವರ್ಷಾಚರಣೆಗೆ ಪೊಲೀಸ್ ಮಾರ್ಗಸೂಚಿ ಜಾರಿ
- KSDL ನೌಕರ ಕೈಯಲ್ಲಿ ಡೆತ್ ನೋಟ್ ಹಿಡಿದು ಆತ್ಮಹತ್ಯೆ: ಕೆಲಸದ ಒತ್ತಡವೇ ಕಾರಣ?
- ಕೆಎಎಸ್ , ಸರ್ಕಾರಿ ಉದ್ಯೋಗ ಪಾಸ್ ಮಾಡಿಸೋ ಹೆಸರಿನಲ್ಲಿ ಲಕ್ಷಾಂತರ ವಂಚನೆ: ಆರೋಪಿ ಬಂಧನ
More Stories
ಅಂಗನವಾಡಿಗೆ ತೆರಳಿದ್ದ 3 ವರ್ಷದ ಬಾಲಕಿಗೆ ಹಾವು ಕಚ್ಚಿ ದಾರುಣ ಸಾವು
ಇನ್ಫೋಸಿಸ್ ಕ್ಯಾಂಪಸ್ನಲ್ಲಿ ಚಿರತೆ ಸಂಚಾರ: ಸಿಬ್ಬಂದಿಗೆ ವರ್ಕ್ ಫ್ರಮ್ ಹೋಮ್ ಸೂಚನೆ
ಅಪ್ಪನ ಅಕ್ಕರೆ ಮತ್ತು ತ್ಯಾಗ: ಮಗನ ನೆನಪಿನಲ್ಲಿ ಉಳಿದ ಅನನ್ಯ ಕಥೆ