December 18, 2024

Newsnap Kannada

The World at your finger tips!

minister,politician,money

29 cr money & 5kg gold fouund in Minister Partha's girlfriend house

ಸಚಿವ ಪಾರ್ಥನ ಗೆಳತಿ ಅರ್ಪಿತಾಳ ಮತ್ತೊಂದು ಮನೆಯಲ್ಲಿ ಮತ್ತೆ 29 ಕೋಟಿ ಹಣ , 5 KG ಚಿನ್ನ ಪತ್ತೆ

Spread the love

ಪಶ್ಚಿಮ ಬಂಗಾಲದ ಟಿಎಂಸಿ ಸಚಿವ ಪಾರ್ಥ ಮುಖರ್ಜಿಯ ಭ್ರಷ್ಟ ಮುಖದ ಅನಾವರಣ ಮಾಡಲು ಹೊರಟ ಇ.ಡಿಗೆ, ಆತನ ಆಪ್ತ ಗೆಳತಿ, ನಟಿ ಕಮ್ ಮಾಡೆಲ್ ಅರ್ಪಿತಾ ಮುಖರ್ಜಿ ಮನೆಯಲ್ಲಿ ನಿನ್ನೆ ರಾತ್ರಿ ಮತ್ತೆ ರಾಶಿ ರಾತಿ ಹಣ ಪತ್ತೆಯಾಗಿದೆ.

ಅರ್ಪಿತಾ ಮುಖರ್ಜಿ ಮನೆಯಲ್ಲಿ ಸಿಕ್ತು ಹಣದ ರಾಶಿ ಮತ್ತೆ 29 ಕೋಟಿ ರು ಹಣ, ಕೆ.ಜಿಗಟ್ಟಲೇ ಚಿನ್ನ ಪತ್ತೆಯಾಗಿದೆ.ಇದನ್ನು ಓದಿ –ಪ್ರವೀಣ್ ಹತ್ಯೆ; ಬಿಜೆಪಿ ‘ಜನೋತ್ಸವ’ ರದ್ದು-ತುರ್ತು ಪತ್ರಿಕಾಗೋಷ್ಠಿ ನಡೆಸಿ ಸಿಎಂ ಪ್ರಕಟ

ಶಿಕ್ಷಕರ ನೇಮಕಾತಿ ಹಗರಣ ಸಂಬಂಧ ಪಶ್ಚಿಮ ಬಂಗಾಳದ ಸಚಿವ ಪಾರ್ಥ ಮುಖರ್ಜಿಯ ಬಂಧನವಾಗಿದೆ. ಅಲ್ಲದೇ ಪಾರ್ಥ ಜೊತೆಗೆ ಅವರ ಆಪ್ತೆ ಅರ್ಪಿತಾ ಮುಖರ್ಜಿಯನ್ನೂ ಕೂಡಾ ಇ.ಡಿ ಬಂಧಿಸಿದೆ. ಕಳೆದ ಬಾರಿ ರೇಡ್ ನಡೆಸಿದ್ದ ಇ.ಡಿಗೆ 21 ಕೋಟಿ ರು ಅಧಿಕ ಸಂಪತ್ತು ಈಕೆಯ ಮನೆಯಲ್ಲಿ ಪತ್ತೆಯಾಗಿತ್ತು, ಇದೀಗ ನಟಿ ಕಮ್ ಮಾಡೆಲ್‌ ಅರ್ಪಿತಾ ಮುಖರ್ಜಿಗೆ ಸೇರಿದ ಮತ್ತೊಂದು ಮನೆ ಮೇಲೆ ಇ.ಡಿ ರೇಡ್ ನಡೆಸಿದೆ.

ಅರ್ಪಿತಾ ಮುಖರ್ಜಿಗೆ ಸೇರಿದ ಬೆಲ್ಗಾರೆಯಲ್ಲಿರುವ ಮತ್ತೊಂದು ಅಪಾರ್ಟ್‌ಮೆಂಟ್‌ ಮೇಲೆ ನಿನ್ನೆ ಇ.ಡಿ ರೇಡ್‌ ನಡೆಸಿತ್ತು. ಈ ವೇಳೆ ಸುಮಾರು 29 ಕೋಟಿ ರೂಪಾಯಿ ಹಣ ಈಕೆಯ ಮನೆಯಲ್ಲಿ ಪತ್ತೆಯಾಗಿದೆ. 500 ಮತ್ತು 2 ಸಾವಿರ ಮುಖಬೆಲೆಯ ಕಂತೆ ಕಂತೆ ಹಣವನ್ನು ಇ.ಡಿ ಅಧಿಕಾರಿಗಳು ಎಣಿಸಿ ಸುಸ್ತಾಗಿ ಹೋಗಿದರು. ಕೊನೆಗೆ ಈ ಹಣವನ್ನು ಎಣಿಸೋಕೆ ಮೂರು ಕೌಂಟಿಗ್ ಮಷಿನ್ ಹಾಗೂ ಸೀಜ್​ ಮಾಡಿದ್ದ ಹಣ, ಚಿನ್ನ, ಬೆಳೆಬಾಳುವ ವಸ್ತುಗಳನ್ನು ತೆಗೆದುಕೊಂಡು ಹೋಗಲು ಅಧಿಕಾರಿಗಳು ಕ್ಯಾಂಟರ್​ ಒಂದನ್ನು ಕೂಡಾ ತಂದಿದ್ದರು.

ಬರೀ ಹಣವಷ್ಟೇ ಅಲ್ಲ. ಈಕೆಯ ಮನೆಯಲ್ಲಿ ಸುಮಾರು 5 ಕೆಜಿಗೂ ಅಧಿಕ ಬಂಗಾರ ಪತ್ತೆಯಾಗಿದೆ ಅಂತಾ ತಿಳಿದು ಬಂದಿದೆ. ಅಲ್ಲದೇ 40 ಪುಟಗಳ ಡೈರಿ ಹಾಗೂ ಆಸ್ತಿ ನೋಂದಣಿ ದಾಖಲೆ ಪತ್ರಗಳನ್ನು ವಶಪಡಿಸಿಕೊಂಡಿದ್ದಾರೆ, ತನಿಖೆಯಲ್ಲಿ ಇದು ಮಹತ್ವದ ಪಾತ್ರ ವಹಿಸಲಿದೆ ಎಂದು ತಿಳಿದುಬಂದಿದೆ.

Copyright © All rights reserved Newsnap | Newsever by AF themes.
error: Content is protected !!