ನ್ಯೂಸ್ ಸ್ನ್ಯಾಪ್
ನವ ದೆಹಲಿ
ಉತ್ತರ ಕನ್ನಡ ಸಂಸದ ಅನಂತ ಕುಮಾರ್ ಹೆಗಡೆ, ಸಂಸದ ಸತ್ಯಪಾಲ್ ಸಿಂಗ್, ಸಂಸದೆ ಮೀನಾಕ್ಷಿ ಲೇಖಿ ಸೇರಿದಂತೆ 17 ಸಂಸದರಿಗೆ ಹಾಗೂ 9 ಮಂದಿ ರಾಜ್ಯ ಸಭಾ ಸದಸ್ಯರು ಸೇರಿ 26 ಮಂದಿಗೆ ಕೊರೋನಾ ಸೋಂಕು ದೃಢವಾಗಿದೆ.
ಮುಂಗಾರು ಅಧಿವೇಶನಕ್ಕೂ ಮುನ್ನ ಎಲ್ಲಾ ಸಂಸದರಿಗೂ ಕೋವಿಡ್ ಟೆಸ್ಟ್ ಮಾಡಿಸಿದ ವೇಳೆಯಲ್ಲಿ ಕೊರೋನಾ ಸೋಂಕು ದೃಢವಾಗಿದೆ. ನಿನ್ನೆಯಷ್ಟೇ ಹುಬ್ಬಳ್ಳಿಯಿಂದ ದೆಹಲಿಗೆ ಪ್ರಮಾಣ ಮಾಡಿದ್ದರು. ಇಂದು ಬೆಳಿಗ್ಗೆ ಎನ್ಐಸಿಆರ್ಪಿಆರ್ ಆಸ್ಪತ್ರೆಯಲ್ಲಿ ಕೋವಿಡ್ ಟೆಸ್ಟ್ ಒಳಗಾದ ವೇಳೆ ಕೊರೋನಾ ಸೋಂಕು ತಗಲಿರುವುದಾಗಿ ವರದಿಗಳು ಹೇಳಿವೆ. ಬಿಜೆಪಿ 11 ವೈಎಸ್ ಆರ್ ಕಾಂಗ್ರೆಸ್ 2 ಶಿವಸೇನೆ ಡಿಎಂಕೆ ಹಾಗೂ ಆರ್ ಎಲ್ ಪಿ ತಲಾ ಒಬ್ಬ ಸಂಸದರಿಗೆ ಕೊರೋನಾ ಸೋಂಕು ದೃಢಪಟ್ಟಿದೆ.
More Stories
ಎಪಿಗಾಮಿಯಾ ಸಹ-ಸಂಸ್ಥಾಪಕ ರೋಹನ್ ಮಿರ್ಚಂದಾನಿ ನಿಧನ
ಮಾತೃವಾತ್ಸಲ್ಯದ ಗಣಿ, ಪ್ರೇಮಮಯಿ ಜಗನ್ಮಾತೆ ಶಾರದಾದೇವಿ
ಓದಿನ ಮಹತ್ವ