ಉತ್ತರ್ ಖಾಂಡ್ ರಾಜ್ಯದ ಹಿಮ ಕುಸಿತ ಪ್ರಕರಣದಲ್ಲಿ 26 ಮಂದಿ ಶವ ಪತ್ತೆಯಾಗಿದೆ. ಇನ್ನೂ 170 ಅಧಿಕ ಮಂದಿ ನಾಪತ್ತೆಯಾಗಿದ್ದಾರೆ.
ಸತ್ತವರೆಲ್ಲರೂ ಉತ್ತರ ಪ್ರದೇಶದ ಲಕ್ಷ್ಮೀ ಪುರ ಗ್ರಾಮದವರು. ನಾಪತ್ತೆ ಯಾಗಿರುವ 170 ಮಂದಿಯನ್ನು ಹುಡುಕುವ ಕಾರ್ಯ ಭರದಿಂದ ಸಾಗಿದೆ.
ಉತ್ತರ ಖಾಂಡ್ ರಾಜ್ಯದ ತಪೋವನ 250 ಕಿಮಿ ಉದ್ದದ ಸುರಂಗದಿಂದ ಎನ್ ಡಿ ಆರ್ ಎಫ್ ತಂಡ 30 ಮಂದಿಯನ್ನು ರಕ್ಷಣೆ ಮಾಡಿದೆ. ಸುರಂಗದಲ್ಲಿ ನೀರು ಸೋರುತ್ತಿರುವುದ ರಿಂದ ರಕ್ಷಣಾ ಕಾರ್ಯಕ್ಕೆ ತೊಂದರೆಯಾಗಿದೆ.
ಉತ್ತರ ಖಾಂಡ್ ಚಮೋಲಿ ಜಿಲ್ಲೆಯಲ್ಲಿ ರಕ್ಷಣಾ ಕಾರ್ಯಕ್ಕೆ ತೊಂದರೆ ಆದರೆ ಮತ್ತೊಂದು ಕಡೆ ಸಾಂಕ್ರಾಮಿಕ ರೋಗಗಳ ಭೀತಿ ಕಾಡುತ್ತಿರುವುದರಿಂದ ಸರ್ಕಾರ ರೋಗ ನಿಯಂತ್ರಣ ಕ್ಕೆ ಹಣ ಬಿಡುಗಡೆ ಮಾಡಿ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದೆ.
ಈ ನಡುವೆ ಹಿಮಪಾತದಿಂದಾಗಿ ಸಾವನ್ನಪ್ಪಿದವರ ಕುಟುಂಬಕ್ಕೆ ತಲಾ 2 ಲಕ್ಷ ರು ಗಳ ಪರಿಹಾರವನ್ನು ಉತ್ತರ ಪ್ರದೇಶ ಸರ್ಕಾರ ಘೋಷಣೆ ಮಾಡಿದೆ.
More Stories
ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
Karnataka Budget 2025-26 : ಶಕ್ತಿ ಯೋಜನೆಗೆ 5,300 ಕೋಟಿ ಅನುದಾನ
ಪೊಲೀಸ್ ಅಧಿಕಾರಿಯ ಕಿರುಕುಳಕ್ಕೆ ಮನನೊಂದು ವ್ಯಕ್ತಿ ಆತ್ಮಹತ್ಯೆ ಆರೋಪ