January 16, 2025

Newsnap Kannada

The World at your finger tips!

dharshan

ದರ್ಶನ್ ಹೆಸರಿನಲ್ಲಿ 25 ಕೋಟಿ ರು. ವಂಚನೆ ಜಾಲ ಪತ್ತೆ- ಮೂವರ ಬಂಧನ

Spread the love

ಲೋನ್ ಕೊಡಿಸುವ ನೆಪದಲ್ಲಿ‌ ನಟ ದರ್ಶನ್ ಗೆ 25 ಕೋಟಿ ರು ವಂಚನೆಗೆ ಮಾಡಲು ಯತ್ನಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಸೂರಿನ ಹೆಬ್ಬಾಳ ಠಾಣೆಯಲ್ಲಿ ಮೂವರ ವಿರುದ್ಧ ಎಫ್ ಐ ಆರ್ ದಾಖಲಾಗಿದೆ.

ಬ್ಯಾಂಕ್ ಮ್ಯಾನೇಜರ್ ಎಂದು ಹೇಳಿಕೊಂಡು ನಟ ದರ್ಶನ್ ಭೇಟಿಯಾಗಿದ್ದ ಮಹಿಳೆಯನ್ನು ಪೊಲೀಸರು ಬಂಧಿಸಿದ್ದಾರೆ.

ಈ ಮಹಿಳೆ ದರ್ಶನ್ ಭೇಟಿಯಾಗಿ ನಿಮ್ಮ ಹೆಸರಿನಲ್ಲಿ 25 ಕೋಟಿ ರು. ಲೋನ್ ಗಾಗಿ ಸ್ನೇಹಿತರೊಬ್ಬರು ಅರ್ಜಿ ಸಲ್ಲಿಸಿದ್ದಾರೆ. ಆ ಕುರಿತು ವಿಚಾರಿಸೋದಕ್ಕೆ ಬಂದಿರೋದಾಗಿ ತಿಳಿಸಿದ್ದರು.

ಆದರೆ ಆ ರೀತಿಯಲ್ಲಿ ಯಾರೂ ಲೋನ್ ಗಾಗಿ ಅರ್ಜಿ ಸಲ್ಲಿಸಿದ ಬಗ್ಗೆ ನಟ ದರ್ಶನ್ ಗೆ ಮಾಹಿತಿ ಇರಲಿಲ್ಲ.

ಬಳಿಕ, ನಟ ದರ್ಶನ್ ಸ್ನೇಹಿತ ಹರ್ಷ ಎಂಬುವರು ಮೈಸೂರಿನಲ್ಲಿ ನಟ ದರ್ಶನ್ ಗೆ ಕೋಟಿ ಕೋಟಿ ವಂಚಿಸಲು ಯತ್ನಿಸಿದಂತಹ ಮೂವರ ವಿರುದ್ಧ ದೂರು ನೀಡಿದ್ದರು.

ಈ ದೂರನ್ನು ಆಧರಿಸಿ, ಮೈಸೂರಿನ ಹೆಬ್ಬಾಳ ಠಾಣೆಯ ಪೊಲೀಸರು ಜುಲೈ.3ರಂದು ಅರುಣ್ ಕುಮಾರಿ, ಮಧುಕೇಶ, ನಂದೀಶ್ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿತ್ತು.

ಈ ಪ್ರಕರಣಲ್ಲಿ ತನಿಖೆ ಕೈಗೊಂಡ ಪೊಲೀಸರು, ಅರುಣ್ ಕುಮಾರಿ ಎಂಬುವರನ್ನು ಬಂಧಿಸಿದ್ದಾರೆ. ತನಿಖೆ ಮುಂದುವರೆದಿದೆ.

Copyright © All rights reserved Newsnap | Newsever by AF themes.
error: Content is protected !!