January 3, 2025

Newsnap Kannada

The World at your finger tips!

yash1

ಕೆಜಿಎಫ್ 2 ಚಿತ್ರದ ಟೀಸರ್ ಬಿಡುಗಡೆ ಯಾದ 10 ಗಂಟೆಯಲ್ಲಿ 23 ಲಕ್ಷ ಲೈಕ್

Spread the love

ರಾಕಿಂಗ್ ಸ್ಟಾರ್ ನಟ ಯಶ್ ಹುಟ್ಟು ಹಬ್ಬದ ಮುನ್ನ ದಿನವೇ ಲೀಕ್ ಆಗಿದ್ದ ಕೆಜಿಎಫ್ 2 ಚಿತ್ರದ ಟೀಸರ್ ಗುರುವಾರ ಯೂಟ್ಯೂಬ್‌ನಲ್ಲಿ ಬಿಡುಗಡೆಯಾದ ಕೆಲವೇ ಗಂಟೆಗಳಲ್ಲಿ ಸಾಮಾಜಿಕ ಜಾಲತಾಣದಲ್ಲಿ 23 ಲಕ್ಷ ಲೈಕ್ಸ್‌ ದಾಖಲೆ ನಿರ್ಮಿಸಿದೆ.

ಅತ್ಯಂತ ಕಡಿಮೆ ಅವಧಿಯಲ್ಲಿ ಯೂಟ್ಯೂಬ್‌ನಲ್ಲಿ ಅತಿ ಹೆಚ್ಚು ಲೈಕ್ಸ್ ಪಡೆದ ವಿಶ್ವದ ಮೊದಲ ಟೀಸರ್ ಎಂಬ ಹೆಗ್ಗಳಿಕೆಗೆ ಕೆಜಿಎಫ್ 2 ಸಿನಿಮಾದ ಟೀಸರ್ ಪಾತ್ರವಾಗಿದೆ.

ಜನವರಿ 07 ರ ರಾತ್ರಿ 9.30 ಕ್ಕೆ ಬಿಡುಗಡೆಯಾದ ಟೀಸರ್, ಜನವರಿ 08 ರ ಬೆಳಿಗ್ಗೆ 10 ಗಂಟೆ ವೇಳೆಗೆ 2.3 ಮಿಲಿಯನ್ ಅಂದರೆ 23 ಲಕ್ಷ ಲೈಕ್ಸ್ ಪಡೆದುಕೊಂಡಿದೆ.

ಇತ್ತೀಚೆಗೆ ಬಿಡುಗಡೆಯಾಗಿದ್ದ ವಿಜಯ್ ನಟನೆಯ ‘ಮಾಸ್ಟರ್’ ಸಿನಿಮಾದ ಟೀಸರ್ 16 ಗಂಟೆಗಳಲ್ಲಿ 16 ಲಕ್ಷಕ್ಕೂ ಹೆಚ್ಚು ಲೈಕ್ಸ್ ಪಡೆದಿತ್ತು. ಆ ದಾಖಲೆಯನ್ನು ಕೆಜಿಎಫ್ 2 ಸಿನಿಮಾದ ಟೀಸರ್ ಹಿಂದಿಕ್ಕಿದೆ.

Copyright © All rights reserved Newsnap | Newsever by AF themes.
error: Content is protected !!