December 22, 2024

Newsnap Kannada

The World at your finger tips!

muraga durga

ಮುರುಘಾಮಠದಲ್ಲಿದ್ದ 22 ಅನಾಥ ಮಕ್ಕಳು ನಾಪತ್ತೆ ? ಸ್ವಾಮೀಜಿ ಮೇಲೆ ಮತ್ತೊಂದು ದೂರು ?

Spread the love

ಚಿತ್ರದುರ್ಗ ಮುರುಘಾ ಮಠದ ಹಾಸ್ಟೆಲ್​ನಲ್ಲಿದ್ದ 22 ಅನಾಥ ಮಕ್ಕಳು ನಾಪತ್ತೆಯಾಗಿರುವ ಆರೋಪ ಕೇಳಿಬಂದಿದೆ. ನಾಪತ್ತೆಯಾಗಿರುವ ಪೈಕಿ 14 ಹೆಣ್ಣು ಹಾಗೂ 8 ಗಂಡು ಮಕ್ಕಳು ಸೇರಿದ್ದಾರೆ. ಈ ಸಂಬಂಧ ಸ್ವಾಮೀಜಿ ವಿರುದ್ದ ಮತ್ತೊಂದು ದೂರು ದಾಖಲಾಗುವ ಸಾಧ್ಯತೆ ಇದೆ.

ಅನಾಥ ಮಕ್ಕಳು ಮಠಕ್ಕೆ ಸಿಕ್ಕಿದ್ದು ಹೇಗೆ, ಅನಾಥ ಮಕ್ಕಳನ್ನು ಸಾಕಲು ಸರ್ಕಾರದಿಂದ ಅನುಮತಿ ಪಡೆಯಲಾಗಿತ್ತೇ ಎಂಬ ಪ್ರಶ್ನೆಗಳು ಕೂಡ ಉದ್ಭವಿಸಿವೆ.ಆರೋಗ್ಯವಂತ ಸಮಾಜ ನಿರ್ಮಾಣಕ್ಕೆ ಜಾಗೃತಿ ಕಾರ್ಯಕ್ರಮಗಳು ಅಗತ್ಯ: ನ್ಯಾ ನಳಿನಿ ಕುಮಾರಿ ಎ.ಎಂ

ಮಕ್ಕಳು ನಾಪತ್ತೆಯಾದ ವಿಚಾರ ತಡವಾಗಿ ಬೆಳಕಿಗೆ ಬಂದಿದೆ ಎಂದು ಹೇಳಲಾಗುತ್ತಿದೆ.

ನಾಪತ್ತೆಯಾಗಿರುವ ಮಕ್ಕಳು ಎಲ್ಲಿದ್ದಾರೆ, ಹೇಗಿದ್ದಾರೆ ಎಂಬ ಬಗ್ಗೆಯೂ ಮಾಹಿತಿ ಲಭ್ಯವಾಗಿಲ್ಲ. ಮಕ್ಕಳ ನಾಪತ್ತೆ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ, ತನಿಖೆ ನಡೆಸಬೇಕು ಎಂದು ಚಿತ್ರದುರ್ಗದ ಆರ್​ಟಿಐ ಕಾರ್ಯಕರ್ತ ಬಿ.ಎಚ್.ಗೌಡ ಒತ್ತಾಯಿಸಿದ್ದಾರೆ.

ಎಡಿಜಿಪಿ ಅಲೋಕ್ ಕುಮಾರ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು, ಜಿಲ್ಲಾಧಿಕಾರಿ ದಿವ್ಯಪ್ರಭು, ಎಸ್​ಪಿ ಕೆ.ಪರಶುರಾಮ್ ಅವರಿಗೆ ಮನವಿ ಸಲ್ಲಿಸಲಾಗಿದೆ.

ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣದ ಆರೋಪಿ ಮುರುಘಾಮಠದ ಶಿವಮೂರ್ತಿಯವರ ವಿರುದ್ಧ ದಾಖಲಾಗಿರುವ 2ನೇ ಪೊಕ್ಸೋ ಪ್ರಕರಣಕ್ಕೆ ಸಂಬಂಧಿಸಿದಂತೆ ಸಲ್ಲಿಸಿರುವ ಜಾಮೀನು ಅರ್ಜಿಯ ವಿಚಾರಣೆ ಚಿತ್ರದುರ್ಗದ 2ನೇ ಹೆಚ್ಚುವರಿ ಸೆಷನ್ಸ್ ಕೋರ್ಟ್​ನಲ್ಲಿ ಇಂದು ನಡೆಯುತ್ತಿದೆ.

ಮಠದ ವಿದ್ಯಾರ್ಥಿನಿಯರ ಮೇಲೆ ನಡೆದ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ದೂರು ನೀಡಲು ಸಹಕರಿಸಿದ್ದ ಒಡನಾಡಿ ಸಂಸ್ಥೆಯ ಪರಶುರಾಮ್ ಅವರಿಗೆ ₹ 3 ಕೋಟಿ ಆಮಿಷ ಒಡ್ಡಲಾಗಿತ್ತು ಎಂಬ ವಿಚಾರದಲ್ಲಿ ಪೂರಕ ಸಾಕ್ಷ್ಯ ನೀಡಬೇಕು ಎಂದು ಪ್ರಕರಣದ ತನಿಖಾಧಿಕಾರಿ ಡಿವೈಎಸ್‌ಪಿ ಲೋಕೇಶ್‌ ನೋಟಿಸ್‌ ಜಾರಿ ಮಾಡಿದ್ದಾರೆ.

ಅನಾರೋಗ್ಯ ಕಾರಣದಿಂದ ವಿಚಾರಣೆಗೆ ಹಾಜರಾಗಲು ಸಾಧ್ಯವಿಲ್ಲ. ಆನ್​ಲೈನ್​ ವಿಚಾರಣೆ ಎದುರಿಸುವುದಾಗಿ ಎಂದು ಪರಶುರಾಮ್ ಹೇಳಿದ್ದಾರೆ.

Copyright © All rights reserved Newsnap | Newsever by AF themes.
error: Content is protected !!